
ರಿಕಿ ಕೇಜ್
ಲಾಸ್ ಎಂಜೆಲೀಸ್: ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರು 2022ನೇ ಸಾಲಿನ ಪ್ರತಿಷ್ಟಿತ ಅಂತಾರಾಷ್ಟ್ರೀಯ ಪ್ರಶಸ್ತಿಯಾದ ಗ್ರ್ಯಾಮಿಯನ್ನು ಗೆದ್ದುಕೊಂಡಿದ್ದಾರೆ. ಇದು ಅವರ ಎರಡನೇ ಗೆಲುವಾಗಿದೆ. ಈ ಹಿಂದೆ 'ವಿಂಡ್ಸ್ ಆಫ್ ಸಂಸಾರ' ಎನ್ನುವ ಆಲ್ಬಂಗೆ ಗ್ರ್ಯಾಮಿ ಗೆದ್ದುಕೊಂಡಿದ್ದರು.
ಇದನ್ನೂ ಓದಿ: ರಿಕಿ ಕೇಜ್ ಮತ್ತು ಆಫ್ಘನ್ ಸಂಗೀತಗಾರರ ಸಂಗಮ; ಆಫ್ಘನ್ ನೆಲದ ಕತೆ ಹೇಳುವ ಹೊಸ ಮ್ಯೂಸಿಕ್ ವಿಡಿಯೊ
ರಿಕಿ ಕೇಜ್ ಅವರ 'ಡಿವೈನ್ ಟೈಡ್ಸ್' ಎನ್ನುವ ಸಂಗೀತ ಆಲ್ಬಂಗೆ ಈ ಬಾರಿ ಪ್ರಶಸ್ತಿ ದೊರಕಿದೆ. ಈ ಪ್ರಶಸ್ತಿಯನ್ನು ರಿಕಿ ಕೇಜ್ ಅವರು ಸಂಗೀತಗಾರ ಸ್ಟುವರ್ಟ್ ಕೋಪ್ ಲೆಂಡ್ ಅವರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ: ವರ್ಲ್ಡ್ ಮ್ಯೂಸಿಕ್ ಮಾಂತ್ರಿಕ, ಗ್ರ್ಯಾಮಿ ವಿಜೇತ ಬೆಂಗಳೂರು ಹುಡುಗ ರಿಕಿ ಕೇಜ್ ಉಭಯ ಕುಶಲೋಪರಿ ಸಾಂಪ್ರತ: ಸಂದರ್ಶನ
Won the Grammy Award today for our album Divine Tides Filled with gratitude and love this living-legend standing with me - @copelandmusic . My 2nd Grammy and Stewart's 6th. Thank you to everyone who ever collaborated, hired, or listened to my music. I exist because of you. pic.twitter.com/Pe4rkOp0ba
— Ricky Kej (@rickykej) April 4, 2022
ಭಾರತೀಯ ಮೂಲದ ಗಾಯಕಿ ಫಾಲು ಶಾ ಅವರು ತಮ್ಮ 'ಎ ಕಲರ್ ಫುಲ್ ವರ್ಲ್ಡ್' ಸಂಗೀತ ಆಲ್ಬಂಗೆ ಗ್ರ್ಯಾಮಿ ಪಡೆದಿದ್ದಾರೆ. ಇದರೊಂದಿಗೆ ಈ ವರ್ಷ ಇಬ್ಬರು ಭಾರತೀಯರು ಗ್ರ್ಯಾಮಿ ಪ್ರಶಸ್ತಿ ಗೆದ್ದಂತಾಗಿದೆ.
ಇದನ್ನೂ ಓದಿ: ಪ್ರತಿಷ್ಟಿತ ಗ್ರ್ಯಾಮಿ ಸಂಗೀತ ಕಾರ್ಯಕ್ರಮದಲ್ಲಿ ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕಿ ವರ್ಚುವಲ್ ಭಾಷಣ