ಬಂಧನ ಭೀತಿ: ದುಬೈಗೆ ಹಾರಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪತ್ನಿಯ ಆಪ್ತ ಸ್ನೇಹಿತೆ
ಪಾಕಿಸ್ತಾನದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರೆ ತಮ್ಮನ್ನು ಬಂಧಿಸಬಹುದು ಎಂಬ ವರದಿಗಳ ಬೆನ್ನಲ್ಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಮೂರನೇ ಪತ್ನಿ ಬುಶ್ರಾ ಬೀಬಿ ಅವರ ಆಪ್ತ ಸ್ನೇಹಿತೆ ಫರಾಹ್ ಖಾನ್...
Published: 05th April 2022 08:40 PM | Last Updated: 05th April 2022 08:40 PM | A+A A-

ಇಮ್ರಾನ್ ಖಾನ್
ಲಾಹೋರ್: ಪಾಕಿಸ್ತಾನದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರೆ ತಮ್ಮನ್ನು ಬಂಧಿಸಬಹುದು ಎಂಬ ವರದಿಗಳ ಬೆನ್ನಲ್ಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಮೂರನೇ ಪತ್ನಿ ಬುಶ್ರಾ ಬೀಬಿ ಅವರ ಆಪ್ತ ಸ್ನೇಹಿತೆ ಫರಾಹ್ ಖಾನ್ ಅವರು ದೇಶದಿಂದ ಪಲಾಯನ ಮಾಡಿದ್ದಾರೆ.
ಬಂಧನ ಭೀತಿಯಲ್ಲಿರುವ ಫರಾಹ್ ಖಾನ್ ಅವರ ಪತಿ ಅಹ್ಸಾನ್ ಜಮಿಲ್ ಗುಜ್ಜರ್ ಅವರು ಈಗಾಗಲೇ ಅಮೆರಿಕಕ್ಕೆ ತೆರಳಿದ್ದಾರೆ. ಫರಾ ಅವರು ಭಾನುವಾರ ದುಬೈಗೆ ತೆರಳಿದ್ದಾರೆ ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಇದನ್ನು ಓದಿ: ಅಮೆರಿಕಾ ಹೇಳಿದಂತೆ ಕೇಳದ್ದಕ್ಕೆ ಇಮ್ರಾನ್ ಖಾನ್ ಗೆ ಈ ದುಸ್ಥಿತಿ ಬಂದಿದೆ: ರಷ್ಯಾ
"ಎಲ್ಲಾ ಹಗರಣಗಳ ತಾಯಿ" ಎನ್ನಲಾಗುತ್ತಿರುವ 6 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳ ಭ್ರಷ್ಟಾಚಾರ ಹಗರಣದಲ್ಲಿ ಫರಾ ಭಾಗಿಯಾಗಿದ್ದು, ಅಧಿಕಾರಿಗಳು ತಮ್ಮಿಚ್ಛೆಯಂತೆ ವರ್ಗಾವಣೆ ದೊಡ್ಡ ಮೊತ್ತದ ಹಣ ಪಡೆದಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಇಮ್ರಾನ್ ಖಾನ್ ಮತ್ತು ಅವರ ಪತ್ನಿಯ ಆಜ್ಞೆಯ ಮೇರೆಗೆ ಫರಾ ಈ ದೊಡ್ಡ ಮಟ್ಟದ ಭ್ರಷ್ಟಾಚಾರವನ್ನು ಮಾಡಿದ್ದಾರೆ ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್(ಎನ್) ಉಪಾಧ್ಯಕ್ಷೆ ಮತ್ತು ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಮ್ ನವಾಜ್ ಅವರು ಹೇಳಿದ್ದಾರೆ.