ಶ್ರೀಲಂಕಾ ಬಿಕ್ಕಟ್ಟು: ಬಹುಮತ ಕಳೆದುಕೊಂಡ ರಾಜಪಕ್ಸೆ ಸರ್ಕಾರ!

ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆಗೆ ಭಾರೀ ಹಿನ್ನಡೆಯಾಗಿದೆ. ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ನಡುವೆ ಅವರ ಪಕ್ಷ ಸಂಸತ್ತಿನಲ್ಲಿ ಬಹುಮತವನ್ನು ಕಳೆದುಕೊಂಡಿದ್ದು ರಾಜಿನಾಮೆ ನೀಡುವಂತೆ ಗೋಟಬಯ ರಾಜಪಕ್ಸೆಯನ್ನು ಒತ್ತಾಯಿಸುತ್ತಿದ್ದಾರೆ.

Published: 05th April 2022 10:13 PM  |   Last Updated: 05th April 2022 10:13 PM   |  A+A-


ಮಹಿಂದಾ ರಾಜಪಕ್ಸೆ-ಗೋಟಬಯ ರಾಜಪಕ್ಸೆ

AFP

ಕೊಲಂಬೋ: ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆಗೆ ಭಾರೀ ಹಿನ್ನಡೆಯಾಗಿದೆ. ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ನಡುವೆ ಅವರ ಪಕ್ಷ ಸಂಸತ್ತಿನಲ್ಲಿ ಬಹುಮತವನ್ನು ಕಳೆದುಕೊಂಡಿದ್ದು ರಾಜಿನಾಮೆ ನೀಡುವಂತೆ ಗೋಟಬಯ ರಾಜಪಕ್ಸೆಯನ್ನು ಒತ್ತಾಯಿಸುತ್ತಿದ್ದಾರೆ.

1948ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ ಶ್ರೀಲಂಕಾ ಅತಿದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ದಾಖಲೆಯ ಹಣದುಬ್ಬರ ಮತ್ತು ವಿದ್ಯುತ್ ಕಡಿತದ ಹೊರತಾಗಿ, ಶ್ರೀಲಂಕಾದ ಜನರು ಆಹಾರ, ಪೆಟ್ರೋಲ್ ಮತ್ತು ಡೀಸೆಲ್ ಮತ್ತು ಇತರ ಅಗತ್ಯ ವಸ್ತುಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾರೆ.

ಏತನ್ಮಧ್ಯೆ, ಶ್ರೀಲಂಕಾದ ರಾಜಧಾನಿ ಕೊಲಂಬೊ ಮತ್ತು ಇತರ ನಗರಗಳಲ್ಲಿ, ಜನರು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನಾಕಾರರು ಶ್ರೀಲಂಕಾ ಸರ್ಕಾರದ ಹಲವಾರು ಸಚಿವರು ಮತ್ತು ಸಂಸದರ ಮನೆಗಳನ್ನು ಸುತ್ತುವರಿಯಲು ಪ್ರಯತ್ನಿಸಿದ್ದಾರೆ.

ಈಗಲಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ದೇಶದಲ್ಲಿ ರಕ್ತದ ನದಿ ಹರಿಯಲಿದೆ, ಪ್ರತಿಪಕ್ಷಗಳ ಬೇಡಿಕೆಯನ್ನು ಬೆಂಬಲಿಸಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ರಾಜೀನಾಮೆ ನೀಡಬೇಕು ಎಂದು ಸಂಸದ ವಿಜಯದಾಸ ರಾಜಪಕ್ಸೆ ಹೇಳಿದ್ದಾರೆ. ಈ ಹೊತ್ತಿನಲ್ಲಿ ಪಕ್ಷ ರಾಜಕಾರಣದಿಂದ ಮೇಲೇರಬೇಕು ಮತ್ತು ದೇಶದಲ್ಲಿ ಮಧ್ಯಂತರ ಸರ್ಕಾರ ರಚಿಸಬೇಕು ಎಂದರು.

ಇನ್ನು ಡಜನ್ ಸಂಸದರು ಇದುವರೆಗೆ ಗೋಟಬಯ ರಾಜಪಕ್ಸೆ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದಾರೆ. ಇದರಲ್ಲಿ 16 ಸಂಸದರು ರಾಜಪಕ್ಸೆ ಪಕ್ಷದ ಎಸ್‌ಎಲ್‌ಪಿಪಿ ಸದಸ್ಯರಾಗಿದ್ದಾರೆ.

ಶ್ರೀಲಂಕಾ ಸಂಸತ್ತು ಒಟ್ಟು 225 ಸದಸ್ಯರನ್ನು ಒಳಗೊಂಡಿದೆ. ಗೋಟಬಯ ರಾಜಪಕ್ಸೆ ಈಗ ಬಹುಮತಕ್ಕೆ ಬೇಕಾದ ಸಂಖ್ಯೆಗಿಂತ 5 ಸಂಸದರನ್ನು ಕಡಿಮೆ ಹೊಂದಿದ್ದಾರೆ. ಆದರೆ, ಗೋಟಬಯ ರಾಜಪಕ್ಸೆ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುತ್ತವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗೋಟಬಯ ರಾಜಪಕ್ಸೆ ರಾಜೀನಾಮೆ ನೀಡಲೇಬೇಕು ಎಂಬುದು ಪ್ರತಿಪಕ್ಷಗಳು ಅಚಲ ನಿರ್ಧಾರವಾಗಿದೆ.

ಗೋಟಬಯ ರಾಜಪಕ್ಸೆ ತಮ್ಮ ಸರ್ಕಾರವನ್ನು ಉಳಿಸುವ ಪ್ರಯತ್ನಗಳ ಭಾಗವಾಗಿ ಶ್ರೀಲಂಕಾ ಪ್ರಧಾನಿ ಮಹೀಂದ್ರ ರಾಜಪಕ್ಸೆ ನೇತೃತ್ವದ ಜಂಟಿ ಸರ್ಕಾರಕ್ಕೆ ಸೇರಲು ವಿರೋಧ ಪಕ್ಷಗಳಿಗೆ ಆಹ್ವಾನ ನೀಡಿದ್ದಾರೆ. ಆದರೆ, ಪ್ರತಿಪಕ್ಷಗಳು ಅವರ ಬೇಡಿಕೆಯನ್ನು ತಿರಸ್ಕರಿಸಿ ತಕ್ಷಣವೇ ರಾಜೀನಾಮೆ ನೀಡುವಂತೆ ಸೂಚಿಸಿವೆ.


Stay up to date on all the latest ವಿದೇಶ news
Poll
Kharge-tharoor

ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಯಾರು ಹೆಚ್ಚು ಸೂಕ್ತರು?


Result
ಮಲ್ಲಿಕಾರ್ಜುನ ಖರ್ಗೆ
ಶಶಿ ತರೂರ್

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp