ರಷ್ಯಾ ಆಕ್ರಮಣದ ಬಳಿಕ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಲಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನುದ್ದೇಶಿಸಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸ್ಕಿ ಅವರು ಮಾತನಾಡಲಿದ್ದಾರೆ.
Published: 05th April 2022 10:57 AM | Last Updated: 05th April 2022 10:57 AM | A+A A-

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
ವಿಶ್ವಸಂಸ್ಥೆ: ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನುದ್ದೇಶಿಸಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸ್ಕಿ ಅವರು ಮಾತನಾಡಲಿದ್ದಾರೆ.
ಝೆಲೆನ್ಸ್ಕಿ ಅವರು ಭದ್ರತಾ ಮಂಡಳಿಯಲ್ಲಿ ಉಕ್ರೇನ್‌ನ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಲಿದ್ದಾರೆ ಎಂದು ಬ್ರಿಟನ್ ರಾಯಭಾರ ಸಮಿತಿ ಮಾಹಿತಿ ನೀಡಿದೆ.
ಝಲೆನ್‌ಸ್ಕಿ ಅವರ ಭಾಷಣವನ್ನು ರೆಕಾರ್ಡ್ ಮಾಡಲಾಗುವುದೋ ಅಥವಾ ಇಲ್ಲವೋ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ತಿಳಿಸಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಈ ಸಭೆ ಮೊದಲೇ ನಿಗದಿಯಾಗಿತ್ತು. ಇದರಲ್ಲಿ ವಿಶ್ವಸಂಸ್ಥೆ ಅಧ್ಯಕ್ಷ ಅಂಟೊನಿಯೊ ಗುಟೇರಸ್ ಕೂಡ ಭಾಗವಹಿಸಲಿದ್ದಾರೆ.
ಕಳೆದ ಭಾನುವಾರ ರಷ್ಯಾ ಸೇನೆ ಉಕ್ರೇನ್ ನಗರದಲ್ಲಿ ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸಿ ಸುಮಾರು 410 ನಾಗರಿಕರನ್ನು ಕೊಂದಿರುವುದು ಈ ಭದ್ರತಾ ಮಂಡಳಿಯಲ್ಲಿ ಮುಖ್ಯವಾಗಿ ಚರ್ಚೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಝೆಲೆನ್‌ಸ್ಕಿ ಅವರು, ಈ ಘಟನೆ ಬಹುದೊಡ್ಡ ಮಾನವ ಹತ್ಯಾಕಾಂಡ. ರಷ್ಯಾ ಸೇನೆ ಉಕ್ರೇನ್‌ನಲ್ಲಿ ನರಮೇಧ ನಡೆಸುತ್ತಿದೆ ಎಂದು ಹೇಳಿದ್ದರು.