
ಸಾಂದರ್ಭಿಕ ಚಿತ್ರ
ನವದೆಹಲಿ: ಮೈಕ್ರೊ ಬ್ಲಾಗಿಂಗ್ ತಾಣವಾದ ಟ್ವಿಟರ್ ತಾನು ಪೋಸ್ಟ್ ಗಳಲ್ಲಿ ಎಡಿಟ್ ಬಟನ್ ಆಯ್ಕೆ ನೀಡುವ ಬಗ್ಗೆ ಕಾರ್ಯಪ್ರವೃತ್ತವಾಗಿರುವುದಾಗಿ ತಿಳಿಸಿದೆ. ಇದುವರೆಗೂ ಬಳಕೆದಾರರು ಮಾಡುವ ಟ್ವೀಟ್ ಗಳನ್ನು ಪೋಸ್ಟ್ ಮಾಡಿದ ನಂತರ ಎಡಿಟ್ ಮಾಡುವ ಆಯ್ಕೆ ಇರಲಿಲ್ಲ.
ಇದನ್ನೂ ಓದಿ: ಡಿಮ್ಯಾಟ್ ಅಕೌಂಟ್ ಇದೆಯೇ? ಹಾಗಾದ್ರೆ KYC ವಿವರ ಸಲ್ಲಿಸದಿದ್ದರೆ ಏನಾಗುತ್ತದೆ ಗೊತ್ತಾ?
ಅನೇಕ ಬಳಕೆದಾರರು ವರ್ಷಗಳಿಂದ ಪೋಸ್ಟ್ ನಲ್ಲಿನ ದೋಷಗಳನ್ನು ಸರಿಪಡಿಸಲು ಎಡಿಟ್ ಆಯ್ಕೆ ನೀಡುವಂತೆ ಒತ್ತಾಯಿಸುತ್ತಲೇ ಬಂದಿದ್ದರು. ಇದೀಗ ಟ್ವಿಟರ್ ಬಳಕೆದಾರರ ಮನವಿಯನ್ನು ಪೂರೈಸುತ್ತಿದೆ.
ಇದನ್ನೂ ಓದಿ: ಬೆಂಗಳೂರು: ಪರಿಸರಸ್ನೇಹಿ ಯುಲು ಇ- ಬೈಕ್ ಜೊತೆಗಿನ ಒಪ್ಪಂದ ಕೈಬಿಟ್ಟ ಅಂಚೆ ಇಲಾಖೆ
ಇದೇ ವೇಳೆ ಎಡಿಟ್ ಬಟನ್ ನೀಡುವುದರಿಂದ ಬಳಕೆದಾರರು ಅದನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆಯೆಂದು ಟ್ವಿಟ್ಟರ್ ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ: '100 ಶತಕೋಟಿ ಡಾಲರ್ ಒಡೆಯ'; ಗೌತಮ್ ಅದಾನಿ ಏಷ್ಯಾದ ಶ್ರೀಮಂತ ವ್ಯಕ್ತಿ
ಒಂದಂತೂ ನಿಜ. ಎಡಿಟ್ ಬಟನ್ ಮುಂದಿನದಿನಗಳಲ್ಲಿ ಬಳಕೆದಾರರಿಗೆ ಸಿಗಲಿದೆ. ಅದಕ್ಕೂ ಮೊದಲು ಬ್ಲೂ ಟಿಕ್ ಖಾತೆದಾರರಿಗೆ ಮಾತ್ರವೇ ಈ ಆಯ್ಕೆಯನ್ನು ನೀಡುವ ಬಗ್ಗೆ ಟ್ವಿಟರ್ ಚಿಂತನೆ ನಡೆಸುತ್ತಿದೆ.
ಇದನ್ನೂ ಓದಿ: ಜನವರಿ ತಿಂಗಳಲ್ಲಿ ಜಿಯೋ ತೊರೆದ 9.03 ಮಿಲಿಯನ್ ಗ್ರಾಹಕರು; ಏರ್ ಟೆಲ್ ಗೆ ಸೇರಿದ್ದೆಷ್ಟು... ಇಲ್ಲಿದೆ ಮಾಹಿತಿ