ಕೆನಡಾದಲ್ಲಿ ಗುಂಡಿಟ್ಟು 21 ವರ್ಷದ ಭಾರತೀಯ ವಿದ್ಯಾರ್ಥಿ ಹತ್ಯೆ
ಕೆನಡಾದ ಟೊರೆಂಟೊದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ದುಷ್ಕರ್ಮಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಮೃತ ವಿದ್ಯಾರ್ಥಿಯನ್ನು ಉತ್ತರ ಪ್ರದೇಶದ ಕಾರ್ತಿಕ್ ವಾಸುದೇವ್ ಎಂದು ಗುರುತಿಸಲಾಗಿದೆ.
Published: 09th April 2022 12:45 PM | Last Updated: 09th April 2022 12:49 PM | A+A A-

ಮೃತ ವಿದ್ಯಾರ್ಥಿ ಕಾರ್ತಿಕ್ ವಾಸುದೇವ್
ಟೊರಂಟೊ: ಕೆನಡಾದ ಟೊರೆಂಟೊದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ದುಷ್ಕರ್ಮಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಮೃತ ವಿದ್ಯಾರ್ಥಿಯನ್ನು ಉತ್ತರ ಪ್ರದೇಶದ ಕಾರ್ತಿಕ್ ವಾಸುದೇವ್ ಎಂದು ಗುರುತಿಸಲಾಗಿದೆ.
ಟೊರಂಟೊದ ಶೇರ್ ಬಾರ್ನೆ ಸಬ್ ವೇ ರೈಲು ನಿಲ್ದಾಣದ ಬಳಿ ಗುರುವಾರ ಸಂಜೆ ಸಂಜೆ ತೆರಳುತ್ತಿದ್ದಾಗ ಮುಸುಕುದಾರಿಯೊಬ್ಬ ಮನಸೋ ಇಚ್ಚೆ ಗುಂಡು ಹಾರಿಸಿದ್ದಾನೆ. ಬಳಿಕ ಕಾರ್ತಿಕ್ ಅವರನ್ನು ರೈಲು ನಿಲ್ದಾಣದ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಈ ಸಂಬಂಧ ಟೊರಂಟೊ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭಾರತೀ ವಿದ್ಯಾರ್ಥಿ ಕಾರ್ತಿಕ್ ವಾಸುದೇವ್ ಹತ್ಯೆ ಘಟನೆಯಿಂದ ದಿಗ್ರ್ಬಮೆಯಾಗಿದೆ ಎಂದು ಭಾರತದ ಕಾನ್ಸುಲೇಟ್ ಜನರಲ್ ಟ್ವೀಟರ್ ನಲ್ಲಿ ಶುಕ್ರವಾರ ಫೋಸ್ಟ್ ವೊಂದನ್ನು ಮಾಡಿದೆ. ವಿದ್ಯಾರ್ಥಿ ಹತ್ಯೆ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Grieved by this tragic incident. Deepest condolences to the family. https://t.co/guG7xMwEMt
— Dr. S. Jaishankar (@DrSJaishankar) April 8, 2022