
ನಾಗರಿಕರ ಪ್ರತಿಭಟನೆ
ಕೊಲಂಬೊ: ನೆರೆಯ ಶ್ರೀಲಂಕಾದಲ್ಲಿ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಸಂಘರ್ಷವನ್ನು ಭಾರತ ಗಮನಿಸುತ್ತಿದೆ. ಶ್ರೀಲಂಕಾದ ವಿಪಕ್ಷ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಉಚ್ಛಾಟನೆಯನ್ನು ಬಯಸುತ್ತಿದೆ.
ಇದನ್ನೂ ಓದಿ: ಶ್ರೀಲಂಕಾ: ಹಣಕಾಸು ಸಚಿವರಾಗಿ ಮತ್ತೆ ಅಧಿಕಾರ ವಹಿಸಿಕೊಂಡ ಅಲಿ ಸಬ್ರಿ!
ದೇಶವನ್ನು ಆರ್ಥಿಕ ಸಂಕಷ್ಟಕ್ಕೆ ನೂಕಿದ್ದಾಗಿ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಭಾರತ ಅಗತ್ಯ ವಸ್ತುಗಳ ಕೊರತೆ ಎದುರಿಸುತ್ತಿರುವ ದೇಶಕ್ಕೆ ತರಕಾರಿ, ಆಹಾರ ಧಾನ್ಯ ಸೇರಿದಂತೆ ಮತ್ತಿತರ ಅಗತ್ಯ ವಸ್ತುಗಳನ್ನು ಸರಬರಾಜು ಮುಂದುವರಿಸಿದೆ.
ಇದನ್ನೂ ಓದಿ: ಶ್ರೀಲಂಕಾದಂತೆ ಭಾರತದಲ್ಲಿಯೂ ಆರ್ಥಿಕ ಬಿಕ್ಕಟ್ಟಿನ ಎಚ್ಚರಿಕೆ ನೀಡಿದ ರಾಹುಲ್!
ಭಾರತ ಈ ಹಿಂದೆ 40,000 ಟನ್ ಗೂ ಹೆಚ್ಚು ಡೀಸೆಲ್ ಸರಬರಾಜು ಮಾಡಿತ್ತು. ಅಲ್ಲದೆ, ನೂರು ಕೋಟಿ ರೂ. ನೆರವನ್ನು ಘೋಷಿಸಿತ್ತು. ಭಾರತದ ನೆರವನ್ನು ಶ್ರೀಲಂಕಾ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಗೆ 76 ಸಾವಿರ ಟನ್ ಇಂಧನ ಒದಗಿಸಿದ ಭಾರತ
ಪ್ರಸ್ತುತ ಸಂಕಷ್ಟಕ್ಕೆ ಗೊಟಬಯ ರಾಜಪಕ್ಸ ಅವರೇ ಕಾರಣ ಎಂದು ವಿಕ್ರಮಸಿಂಘೆ ದೂರಿದ್ದಾರೆ. ಇದುವರೆಗೂ ಚೀನಾ ಜೊತೆ ನೆರವಿನ ಕುರಿತು ಮಾತುಕತೆ ನಡೆದಿಲ್ಲ ಎಂದ ಅವರು, ಸಾಲ ಮರುಪಾವತಿ ಬಗ್ಗೆ ಮಾತ್ರ ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ: ಅಧ್ಯಕ್ಷರಿಂದ ನೇಮಕವಾಗಿದ್ದ ನೂತನ ವಿತ್ತಸಚಿವ ಒಂದು ದಿನದಲ್ಲೇ ರಾಜೀನಾಮೆ