ದುಬೈನಲ್ಲಿ 14 ಕೋಟಿ ರೂ. ಮೌಲ್ಯದ ಗಿಫ್ಟ್ ಮಾರಿದ ಇಮ್ರಾನ್ ಖಾನ್: ಪಾಕ್ ಪ್ರಧಾನಿ ಆರೋಪ

ಮಾಜಿ ಪ್ರಧಾನಿ ಇಮ್ರಾನ್ ಖಾನ್ ದುಬೈನಲ್ಲಿ 14 ಕೋಟಿ ಪಾಕಿಸ್ತಾನಿ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಮಾರಾಟ ಮಾಡಿದ್ದಾರೆ ಎಂದು ಪಾಕಿಸ್ತಾನದ ನೂತನ ಪ್ರಧಾನಿ ಶಹಬಾಜ್ ಷರೀಫ್ ಆರೋಪಿಸಿದ್ದಾರೆ. 

Published: 15th April 2022 09:16 PM  |   Last Updated: 16th April 2022 01:22 PM   |  A+A-


Imran Khan Resigns

ಇಮ್ರಾನ್ ಖಾನ್

Online Desk

ಇಸ್ಲಾಮಾಬಾದ್: ಮಾಜಿ ಪ್ರಧಾನಿ ಇಮ್ರಾನ್ ಖಾನ್ ದುಬೈನಲ್ಲಿ 14 ಕೋಟಿ ಪಾಕಿಸ್ತಾನಿ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಮಾರಾಟ ಮಾಡಿದ್ದಾರೆ ಎಂದು ಪಾಕಿಸ್ತಾನದ ನೂತನ ಪ್ರಧಾನಿ ಶಹಬಾಜ್ ಷರೀಫ್ ಆರೋಪಿಸಿದ್ದಾರೆ. 

ಜಿಯೋ ನ್ಯೂಸ್ ವರದಿಯ ಪ್ರಕಾರ, ದುಬಾರಿ ಉಡುಗೊರೆಗಳಲ್ಲಿ ವಜ್ರದ ಆಭರಣಗಳ ಸೆಟ್, ಬಳೆಗಳು ಮತ್ತು ಕೈಗಡಿಯಾರಗಳು ಸೇರಿವೆ ಎಂದು ನೂತನ ಪ್ರಧಾನಿ ಆರೋಪಿಸಿದ್ದಾರೆ.

ಈ ಹಿಂದೆ ಈ ಘಟನೆಯ ಬಗ್ಗೆ ಚರ್ಚೆ ನಡೆದಾಗ, 1923ರ ಅಧಿಕೃತ ರಹಸ್ಯ ಕಾಯಿದೆಯ ಪ್ರಕಾರ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ ಎಂದು ಆಗಿನ ಪ್ರಧಾನಿ ಇಮ್ರಾನ್ ಖಾನ್ ಅವರು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದರು. ತೋಷಖಾನಾ (ಸಂಗ್ರಹಾಲಯ) ದ ವಿವರಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯೊಂದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಶಹಬಾಜ್ ಅವರಿಂದ ಈ ಹೇಳಿಕೆ ಹೊರಬಂದಿದೆ.

ಇದೇ ವೇಳೆ, ಮಾಜಿ ಕೇಂದ್ರ ಸಚಿವ ಮತ್ತು ಪಿಟಿಐ ನಾಯಕ ಫವಾದ್ ಚೌಧರಿ ಅವರು ನೂತನ ಪ್ರಧಾನಿಯ ಹೇಳಿಕೆಯನ್ನು ಖಂಡಿಸಿದ್ದಾರೆ. ಇಮ್ರಾನ್ ಖಾನ್ ಅವರ ಮೇಲೆ ಕೆಸರೆರಚುವ ಕೆಲಸವನ್ನು ಶಹಬಾಜ್ ಷರೀಫ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ನವಜೋತ್ ಸಿಧು ಬದಲಿಗೆ ಕಪಿಲ್ ಶರ್ಮಾ ಶೋ ಸೇರಿಕೊಳ್ಳಿ: ಇಮ್ರಾನ್ ಖಾನ್ ಗೆ ಮಾಜಿ ಪತ್ನಿ ಸಲಹೆ!

ಪಾಕಿಸ್ತಾನದ ಕಾನೂನಿನ ಪ್ರಕಾರ, ಒಂದು ರಾಜ್ಯದ ಮುಖ್ಯಸ್ಥರು ಬೇರೆ ರಾಜ್ಯ ಅಥವಾ ದೇಶದಿಂದ ಉಡುಗೊರೆಯನ್ನು ಪಡೆದಾಗ ಅದನ್ನು ತೋಷಖಾನಾಗೆ ನೀಡಬೇಕು. ಅವರು ಉಡುಗೊರೆಯನ್ನು ಇರಿಸಿಕೊಳ್ಳಲು ಬಯಸಿದರೆ, ಅವರು ಹರಾಜಿನ ಮೂಲಕ ನಿರ್ಧರಿಸುವ ಅದರ ಮೌಲ್ಯಕ್ಕೆ ಸಮನಾದ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಜಿಯೋ ನ್ಯೂಸ್ ವರದಿ ಪ್ರಕಾರ, ಈ ಉಡುಗೊರೆಗಳನ್ನು ತೋಷಖಾನಾದಲ್ಲಿ ಸಂಗ್ರಹಿಸಲಾಗುತ್ತದೆ ಅಥವಾ ಹರಾಜು ಮಾಡಬಹುದು. ಉಡುಗೊರೆಯನ್ನು ಹರಾಜು ಮಾಡುವುದರಿಂದ ಬರುವ ಹಣವನ್ನು ಪಾಕಿಸ್ತಾನದ ರಾಷ್ಟ್ರೀಯ ಖಜಾನೆಯಲ್ಲಿ ಠೇವಣಿ ಮಾಡಲಾಗುತ್ತದೆ.


Stay up to date on all the latest ವಿದೇಶ news
Poll
Ashok Gehlot-Shashi Tharoor

ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಯಾರು ಹೆಚ್ಚು ಸೂಕ್ತರು?


Result
ಅಶೋಕ್ ಗೆಹ್ಲೋಟ್
ಶಶಿ ತರೂರ್

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp