ರಷ್ಯಾ ವಿರುದ್ಧ ಹೋರಾಟದಲ್ಲಿ ಉಕ್ರೇನ್ ಗೆ ಹೊಸ ಮಿಲಿಟರಿ ನೆರವು: ಅಮೆರಿಕ ಭರವಸೆ
ರಷ್ಯಾ ವಿರುದ್ಧ ಹೋರಾಟದಲ್ಲಿ ಉಕ್ರೇನ್ ಗೆ ಹೊಸದಾಗಿ ನೂರಾರು ಮಿಲಿಯನ್ ಡಾಲರ್ ಮಿಲಿಟರಿ ನೆರವು ನೀಡಲಾಗುವುದು ಎಂದು ಅಮೆರಿಕದ ಉನ್ನತ ಮಟ್ಟದ ಅಧಿಕಾರಿಗಳು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿಗೆ ಭರವಸೆ ನೀಡಿದ್ದಾರೆ.
Published: 25th April 2022 12:28 PM | Last Updated: 25th April 2022 01:46 PM | A+A A-

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ
ಕೀವ್: ರಷ್ಯಾ ವಿರುದ್ಧ ಹೋರಾಟದಲ್ಲಿ ಉಕ್ರೇನ್ಗೆ ಹೊಸದಾಗಿ ನೂರಾರು ಮಿಲಿಯನ್ ಡಾಲರ್ ಮಿಲಿಟರಿ ನೆರವು ನೀಡಲಾಗುವುದು ಎಂದು ಅಮೆರಿಕದ ಉನ್ನತ ಮಟ್ಟದ ಅಧಿಕಾರಿಗಳು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿಗೆ ಭರವಸೆ ನೀಡಿದ್ದಾರೆ.
ಯುದ್ಧ ಪೀಡಿತ ಉಕ್ರೇನ್ ಗೆ 300 ಮಿಲಿಯನ್ ಡಾಲರ್ ಗೂ ಹೆಚ್ಚಿನ ವಿದೇಶಿಕ ಮಿಲಿಟರಿ ಹಣಕಾಸಿನೊಂದಿಗೆ 165 ಮಿಲಿಯನ್ ಡಾಲರ್ ನಷ್ಟು ಮೊತ್ತದ ಶಸಾಸ್ತ್ರ ಒದಗಿಸಲು ಅಮೆರಿಕ ಅನುಮೋದನೆ ನೀಡಿದೆ ಎಂದು ಝೆಲೆನ್ ಸ್ಕಿಗೆ ಜೊತೆಗೆ ನಡೆದ ಸಭೆಯಲ್ಲಿ ಅಮೆರಿಕ ಸೆಕ್ರೆಟರಿ ಆಫ್ ಸ್ಟೇಟ್ ಅಂಟೊನಿ ಬ್ಲಿಕೆನ್ ಮತ್ತು ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಅಸ್ಟಿನ್ ಹೇಳಿದ್ದಾರೆ.
ಇದನ್ನೂ ಓದಿ: ಮರಿಯುಪೋಲ್ 'ವಿಮೋಚನೆ' ಶ್ಲಾಘಿಸಿದ ವ್ಲಾಡಿಮಿರ್ ಪುಟಿನ್
ರಷ್ಯಾ ಹೋರಾಟ ಆರಂಭಿಸಿದ 60ನೇ ದಿನದ ಅಂಗವಾಗಿ ಭಾನುವಾರ ಈ ಪ್ರತಿಜ್ಞೆ ಮಾಡಲಾಗಿದೆ. ಪೂರ್ವ ಉಕ್ರೇನ್ ವಲಯದಲ್ಲಿನ ಡಾನ್ ಬಾಸ್ ನಲ್ಲಿ ರಷ್ಯಾ ಸೇನೆಯನ್ನು ಮಟ್ಟಹಾಕಲು ಹೆಚ್ಚಿನ ಶಕ್ತಿಯುತವಾದ ಶಸಾಸ್ತ್ರಗಳನ್ನು ಪೂರೈಸುವಂತೆ ಝೆಲೆನ್ ಸ್ಕಿ ಅಮೆರಿಕಕ್ಕೆ ಒತ್ತಡ ಹೇರಿದರು.
ವಿಶ್ವಸಂಸ್ಥೆ ಕಾರ್ಯದರ್ಶಿ ಜನರಲ್ ಆಂಟೋನಿಯೊ ಗುಟೆರೆಸ್ ಸೋಮವಾರ ಟರ್ಕಿ. ನಂತರ ಮಾಸ್ಕೋ ಮತ್ತು ಕೀವ್ ಗೆ ಪ್ರಯಾಣಿಸಲಿದ್ದಾರೆ. ಗುಟೆರಸ್ ಉಕ್ರೇನ್‌ಗಿಂತ ಮೊದಲು ರಷ್ಯಾಕ್ಕೆ ಭೇಟಿ ನೀಡಿದ್ದು ತಪ್ಪು ಎಂದು ಝೆಲೆನ್ಸ್ಕಿ ಹೇಳಿದ್ದಾರೆ.