ಉಕ್ರೇನ್ ವಿರುದ್ಧ ಯುದ್ಧ ಹಿನ್ನೆಲೆ, ರಷ್ಯಾದಲ್ಲಿ ಅಡುಗೆ ಅನಿಲ ಬೆಲೆಯಲ್ಲಿ ನಾಲ್ಕು ಪಟ್ಟು ಹೆಚ್ಚಳ!
ಉಕ್ರೇನ್ ವಿರುದ್ಧ ಯುದ್ದದ ಕಾರಣದಿಂದಾಗಿ ರಷ್ಯಾದಲ್ಲಿ ಅಡುಗೆ ಅನಿಲ ಬೆಲೆಯಲ್ಲಿ ತೀವ್ರ ರೀತಿಯ ಹೆಚ್ಚಳವಾಗಿದೆ. 2019ರಿಂದ ಒಂದಲ್ಲಾ ಒಂದು ಕಾರಣದಿಂದಾಗಿ ಅಡುಗೆ ಅನಿಲ ದರದಲ್ಲಿ ಏರಿಕೆಯಾಗುತ್ತಲೇ ಇದೆ.
Published: 26th April 2022 05:41 PM | Last Updated: 26th April 2022 06:49 PM | A+A A-

ಸಾಂದರ್ಭಿಕ ಚಿತ್ರ
ಸ್ಟಾನ್ ಬುಲ್: ಉಕ್ರೇನ್ ವಿರುದ್ಧ ಯುದ್ದದ ಕಾರಣದಿಂದಾಗಿ ರಷ್ಯಾದಲ್ಲಿ ಅಡುಗೆ ಅನಿಲ ಬೆಲೆಯಲ್ಲಿ ತೀವ್ರ ರೀತಿಯ ಹೆಚ್ಚಳವಾಗಿದೆ. 2019ರಿಂದ ಒಂದಲ್ಲಾ ಒಂದು ಕಾರಣದಿಂದಾಗಿ ಅಡುಗೆ ಅನಿಲ ದರದಲ್ಲಿ ಏರಿಕೆಯಾಗುತ್ತಲೇ ಇದೆ.
ಏಪ್ರಿಲ್ ಆರಂಭದಲ್ಲಿ ಸುಮಾರು ನಾಲ್ಕು ಪಟ್ಟು ದರ ಹೆಚ್ಚಳದಿಂದ ಹೋಟೆಲ್, ರೆಸ್ಟೋರೆಂಟ್ ಗಳು ಮಾಲೀಕರು ಹಾಗೂ ಗ್ರಾಹಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಹೋಟೆಲ್ ಗೆ ಬರುವ ಗ್ರಾಹಕರು, ಮೆನು ದರ ನೋಡಿ ಹೊರ ಹೋಗುತ್ತಿದ್ದಾರೆ.
'ನಾವು ಬೆಸತ್ತಿದ್ದೀವಿ. ಸ್ವಲ್ಪ ಕಾಯ್ದು ನೋಡೋಣ, ಮಾರುಕಟ್ಟೆ ಸುಧಾರಿಸಬಹುದು, ದರಗಳು ಸ್ಥಿರವಾಗಬಹುದು ಎಂದು ನಾವು ಹೇಳಿದ್ದೇವು. ಆದರೆ, ಯಾವುದರಲ್ಲೂ ಸುಧಾರಣೆಯಾಗಿಲ್ಲ ಎಂದು ರೆಸ್ಟೋರೆಂಟ್ ವೊಂದರ ಅಡುಗೆ ಸಿಬ್ಬಂದಿ ಮಹ್ಸುನ್ ಅಕ್ತಾಸ್ ಹೇಳುತ್ತಾರೆ.
ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಅಂದರೆ ಶೇ. 25 ರಷ್ಟು ರಷ್ಯಾದಿಂದಲೇ ಸನ್ ಪ್ಲವರ್ ಅಡುಗೆ ಅನಿಲ ಪೂರೈಕೆಯಾಗುತಿತ್ತು. ಆದರೆ, ಯುದ್ಧದಿಂದಾಗಿ ಅಡುಗೆ ಅನಿಲ ಸಾಗಾಟದಲ್ಲಿ ಅಡ್ಡಿಯುಂಟಾಗಿದೆ. ರಷ್ಯಾದ ಯುದ್ಧದಿಂದಾಗಿ ಜಾಗತಿಕ ಆಹಾರ ಪೂರೈಕೆಯಲ್ಲಿ ತೊಡಕು ಉಂಟಾಗಿದೆ. ಹಣದುಬ್ಬರ ಹೆಚ್ಚಾಗುತ್ತಿದ್ದು, ಮನೆಗೆ ದಿನನಿತ್ಯದ ವಸ್ತುಗಳ ಬೆಲೆಗಳಲ್ಲಿಯೂ ಹೆಚ್ಚಾಗುತ್ತಿದೆ. ಇದು ಬಡ ಜನರ ಜೀವನದ ಮೇಲೆ ಬರೆ ಎಳೆದಿದೆ.
ಇದನ್ನೂ ಓದಿ: ಉಕ್ರೇನ್ ಗೆ ಪಾಶ್ಚಾತ್ಯ ದೇಶಗಳಿಂದ ಶಸ್ತ್ರಾಸ್ತ್ರ ಪೂರೈಕೆ; ಮೂರನೇ ಮಹಾಯುದ್ಧದ ಎಚ್ಚರಿಕೆ ರವಾನಿಸಿದ ರಷ್ಯಾ!!
ವಿಶ್ವ ಸಂಸ್ಥೆ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ, ಫೆಬ್ರವರಿಯಲ್ಲಿ ವೆಜಿಟೇಬಲ್ ಆಯಿಲ್ ಬೆಲೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿತ್ತು. ನಂತರ ಮಾರ್ಚ್ ನಲ್ಲಿ ಇದು ಶೇ. 23 ರಷ್ಟು ಹೆಚ್ಚಳವಾಯಿತು. 2019ರಲ್ಲಿ ಸೋಯಾಬಿನ್ ಆಯಿಲ್ ಪ್ರತಿ ಮೆಟ್ರಿಕ್ ಟನ್ 765 ಡಾಲರ್ ನಂತೆ ಮಾರಾಟವಾಗಿತ್ತು. ಇದು ಮಾರ್ಚ್ ನಲ್ಲಿ ಪ್ರತಿ ಮೆಟ್ರಿಕ್ ಟನ್ ಸರಾಸರಿ 1,957 ಡಾಲರ್ ನಷ್ಟಿತ್ತು ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಪಾಮ್ ಆಯಿಲ್ ಬೆಲೆಗಳು ಶೇ. 200 ರಷ್ಟು ಹೆಚ್ಚಾಗಿದೆ ಮತ್ತು ವಿಶ್ವದ ಅಗ್ರ ಉತ್ಪಾದಕರಲ್ಲಿ ಒಂದಾದ ಇಂಡೋನೇಷ್ಯಾವು ಗುರುವಾರದಿಂದ ಅಡುಗೆ ಅನಿಲ ರಫ್ತನ್ನು ನಿರ್ಬಂಧಿಸಿದ ನಂತರ ಇದರ ದರದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.