ಮುಂದಿನ ತಿಂಗಳು ಟೋಕಿಯೋದಲ್ಲಿ ಪ್ರಧಾನಿ ಮೋದಿ, ಬೈಡನ್ ಭೇಟಿ: ಶ್ವೇತ ಭವನ
ಮುಂದಿನ ಟೋಕಿಯೋ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಜೋ-ಬೈಡನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.
Published: 28th April 2022 09:29 AM | Last Updated: 28th April 2022 01:58 PM | A+A A-

ಪ್ರಧಾನಿ ಮೋದಿ, ಜೋ- ಬೈಡನ್
ವಾಷಿಂಗ್ಟನ್: ಮುಂದಿನ ಟೋಕಿಯೋ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಜೋ-ಬೈಡನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.
ಮೇ 20 ರಿಂದ 24ರವರೆಗೂ ಜೋ- ಬೈಡನ್ ದಕ್ಷಿಣ ಕೊರಿಯಾ ಮತ್ತು ಜಪಾನ್ ಗೆ ಭೇಟಿ ನೀಡಲಿದ್ದಾರೆ. ಈ ಪ್ರವಾಸವು ಇಂಡೋ ಫೆಸಿಪಿಕ್ ಮುಕ್ತತೆಯ ಬದ್ಧತೆಯನ್ನು ಮುನ್ನಡೆಸುತ್ತದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಬುಧವಾರ ಹೇಳಿದ್ದಾರೆ.
ಉಭಯ ನಾಯಕರು ಪ್ರಮುಖ ಭದ್ರತಾ ಮತ್ತು ಆರ್ಥಿಕ ಸಂಬಂಧಗಳನ್ನು ಹೆಚ್ಚಿಸಲು ಮತ್ತು ನಿಕಟ ಸಹಕಾರ ವಿಸ್ತರಣೆಯ ಅವಕಾಶಗಳನ್ನು ಚರ್ಚಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಟೋಕಿಯೊದಲ್ಲಿ, ಅಧ್ಯಕ್ಷ ಬೈಡನ್ ಆಸ್ಟ್ರೇಲಿಯಾ, ಜಪಾನ್, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಕ್ವಾಡ್ ಗುಂಪಿನ ನಾಯಕರನ್ನು ಭೇಟಿ ಮಾಡಲಿದ್ದಾರೆ. ಈ ಪ್ರವಾಸದ ಕುರಿತು ಶೀಘ್ರದಲ್ಲೇ ಹೆಚ್ಚಿನ ವಿವರ ಹಂಚಿಕೊಳ್ಳಲು ಎದುರು ನೋಡುತ್ತಿದ್ದೇನೆ ಎಂದು ಪ್ಸಾಕಿ ಹೇಳಿದ್ದಾರೆ.