ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಪುತ್ರ ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ
ಕೊನೆ ಕ್ಷಣದಲ್ಲಿ ನಡೆದ ಹೈ ಡ್ರಾಮದೊಂದಿಗೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಪುತ್ರ ಹಮ್ಜಾ ಶಹಬಾಜ್ ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಪಂಜಾಬ್ ನಲ್ಲಿ ದೇಶದ ಅತಿ ಹೆಚ್ಚು 110 ಮಿಲಿಯನ್ ಜನಸಂಖ್ಯೆ ವಾಸಿಸುತ್ತಿದೆ.
Published: 30th April 2022 06:47 PM | Last Updated: 30th April 2022 06:52 PM | A+A A-

ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಪುತ್ರ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ
ಇಸ್ಲಾಮಾಬಾದ್: ಕೊನೆ ಕ್ಷಣದಲ್ಲಿ ನಡೆದ ಹೈ ಡ್ರಾಮದೊಂದಿಗೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಪುತ್ರ ಹಮ್ಜಾ ಶಹಬಾಜ್ ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಪಂಜಾಬ್ ನಲ್ಲಿ ದೇಶದ ಅತಿ ಹೆಚ್ಚು 110 ಮಿಲಿಯನ್ ಜನಸಂಖ್ಯೆ ವಾಸಿಸುತ್ತಿದೆ.
ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ರಾಜಾ ಪರ್ವೇಜ್ ಅಶ್ರಫ್, 47 ವರ್ಷದ ಹಮ್ಜಾ ಶಹಬಾಜ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಇದಕ್ಕೂ ಮುನ್ನ ನಿರ್ಗಮಿತ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಅವರ ರಾಜೀನಾಮೆಯನ್ನು ತಿರಸ್ಕರಿಸಿದ ರಾಜ್ಯಪಾಲರು, ಅವರ ಕ್ಯಾಬಿನೆಟ್ ನ್ನು ಪುನರ್ ಸ್ಥಾಪಿಸಿದರು. ಹಮ್ಜಾ ಅವರ ಚುನಾವಣೆಗೆ ಸಂವಿಧಾನದ ಪ್ರಕಾರ ಮಾನ್ಯತೆ ಇಲ್ಲ ಎಂದು ಹೇಳಿದರು. ಅಲ್ಲದೇ, ರಾಜಭವನದಲ್ಲಿ ಹಮ್ಜಾ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ರಾಜ್ಯಪಾಲ ಚೀಮಾ ತೀವ್ರ ಪ್ರತಿಭಟನೆ ನಡೆಸಿದರು. ಹಮ್ಜಾ ಪ್ರಮಾಣ ವಚನ ಸ್ವೀಕಾರ ಕಾನೂನು ಬಾಹಿರವಾಗಿದ್ದು, ಇದನ್ನು ಅಧ್ಯಕ್ಷ ಆರಿಫ್ ಅಲ್ವಿ ಅವರ ಗಮನಕ್ಕೆ ತರುವುದಾಗಿ ಹೇಳಿದರು.
ಇದನ್ನೂ ಓದಿ: ಪಾಕಿಸ್ತಾನದ ವಿದೇಶಾಂಗ ಸಚಿವರಾಗಿ ಬಿಲಾವಲ್ ಭುಟ್ಟೋ-ಜರ್ದಾರಿ ಪ್ರಮಾಣ ವಚನ ಸ್ವೀಕಾರ
ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಗಿಯುತ್ತಿದ್ದಂತೆ ಹಮ್ಜಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದಾಗಿ ಪಂಜಾಬ್ ಮುಖ್ಯ ಕಾರ್ಯದರ್ಶಿ ಅಧಿಕೃತವಾಗಿ ಘೋಷಿಸಿದರು.