ಕಾಬುಲ್‌ನಲ್ಲಿ ಅಲ್ ಖೈದಾ ಮುಖ್ಯಸ್ಥನನ್ನು ಕೊಂದ ಅಮೆರಿಕದ ವೈಮಾನಿಕ ದಾಳಿಗೆ ತಾಲಿಬಾನ್ ಖಂಡನೆ

ಅಮೆರಿಕ ಭದ್ರತಾ ಪಡೆಗಳು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​ನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ, ಅಲ್​ಖೈದಾ ಮುಖ್ಯಸ್ಥ ಅಯ್ಮಾನ್​ ಅಲ್ ಜವಾಹಿರಿಯನ್ನು ಹತ್ಯೆ ಮಾಡಿವೆ. ಈ ವಿಚಾರವನ್ನು ತಾಲಿಬಾನ್ ವಕ್ತಾರರು ಖಚಿತಪಡಿಸಿದ್ದು, ವಾರಾಂತ್ಯದಲ್ಲಿ ಕಾಬೂಲ್‌ನ ನಿವಾಸದ ಮೇಲೆ ಅಮೆರಿಕ ಡ್ರೋನ್ ದಾಳಿ ನಡೆಸಿದೆ ಎಂದಿದ್ದಾರೆ.
ಅಮೆರಿಕದ ಅಧ್ಯಕ್ಷ ಜೋ ಬೈಡೆನ್
ಅಮೆರಿಕದ ಅಧ್ಯಕ್ಷ ಜೋ ಬೈಡೆನ್

ಕಾಬುಲ್: ಅಮೆರಿಕ ಭದ್ರತಾ ಪಡೆಗಳು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​ನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ, ಅಲ್​ಖೈದಾ ಮುಖ್ಯಸ್ಥ ಅಯ್ಮಾನ್​ ಅಲ್ ಜವಾಹಿರಿಯನ್ನು ಹತ್ಯೆ ಮಾಡಿವೆ. ಈ ವಿಚಾರವನ್ನು ತಾಲಿಬಾನ್ ವಕ್ತಾರರು ತೀವ್ರವಾಗಿ ಖಂಡಿಸಿದ್ದು, ವಾರಾಂತ್ಯದಲ್ಲಿ ಕಾಬೂಲ್‌ನ ನಿವಾಸದ ಮೇಲೆ ಅಮೆರಿಕ ಡ್ರೋನ್ ದಾಳಿ ನಡೆಸಿದೆ ಎಂದಿದ್ದಾರೆ.

'ಭಾನುವಾರ ದಾಳಿ ನಡೆದಿದೆ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಇದು 'ಅಂತರರಾಷ್ಟ್ರೀಯ ನೀತಿಗಳು' ಮತ್ತು ದೋಹಾ ಒಪ್ಪಂದ ಎಂದೂ ಕರೆಯಲ್ಪಡುವ 2020ರ ಅಮೆರಿಕದ ಸೈನ್ಯವನ್ನು ಹಿಂತೆಗೆದುಕೊಳ್ಳುವ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಖಂಡಿಸಿದ್ದಾರೆ.

ವೈಮಾನಿಕ ದಾಳಿ ನಡೆಸಿ ಅಲ್ ಖೈದಾ ಮುಖ್ಯಸ್ಥನನ್ನು ಹತ್ಯೆ ಮಾಡಿರುವ ವಿಚಾರವನ್ನು ಸ್ವತಃ ಜೋ ಬೈಡೆನ್ ಖಚಿತಪಡಿಸಿದ್ದಾರೆ. ‘ಉಗ್ರಗಾಮಿಗಳ ನಾಯಕ ಇನ್ನಿಲ್ಲ. ನಮ್ಮ ಜನರಿಗೆ ಬೆದರಿಕೆ ಹಾಕುವವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಎಷ್ಟೇ ಸಮಯವಾದರೂ, ಎಲ್ಲಿಯೇ ಇದ್ದರೂ, ಎಲ್ಲಿ ಅಡಗಿ ಕುಳಿತಿದ್ದರೂ ಅಂತವರನ್ನು ಅಮೆರಿಕ ಕೊಲ್ಲುತ್ತದೆ. ಈ ಮೂಲಕ ನ್ಯಾಯ ಸಿಕ್ಕಿದೆ’ ಎಂದು ಹೇಳಿದ್ದಾರೆ.

9/11 ಎಂದೇ ಕರೆಯುವ ಸೆಪ್ಟೆಂಬರ್ 11, 2001ರಲ್ಲಿ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡದ ಮೇಲೆ ನಡೆದಿದ್ದ ಉಗ್ರ ದಾಳಿಯ ಮಾಸ್ಟರ್ ಮೈಂಡ್‌ ಆಗಿದ್ದ ಈತ, ಹಲವಾರು ವರ್ಷಗಳಿಂದ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ. ಜವಾಹಿರಿ ಹತ್ಯೆಗೆ ಕಳೆದ 6 ತಿಂಗಳಿನಿಂದ ಗೌಪ್ಯವಾಗಿ ಯೋಜನೆ ರೂಪಿಸಿದ್ದ ಅಮೆರಿಕ, ಡ್ರೋನ್ ಮೂಲಕ ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಿದೆ.

ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕದ ಭದ್ರತಾಪಡೆಗಳು 2011ರಲ್ಲಿ ಪಾಕಿಸ್ತಾನದಲ್ಲಿ ಹತ್ಯೆ ಮಾಡಿದ ಬಳಿಕ, ಜವಾಹಿರಿ ಉಗ್ರಗಾಮಿ ಸಂಘಟನೆಯ ಚುಕ್ಕಾಣಿ ಹಿಡಿದಿದ್ದ. ಆತನ ಸುಳಿವು ನೀಡಿದವರಿಗೆ 2.5 ಕೋಟಿ ಡಾಲರ್ ಬಹುಮಾನವನ್ನು ಕೂಡ ಅಮೆರಿಕ ಘೋಷಿಸಿತ್ತು. ಅಫ್ಘಾನಿಸ್ತಾನದಿಂದ ಆಗಸ್ಟ್ 31, 2021ರಂದು ಹೊರ ನಡೆದ ಬಳಿಕ ಅಮೆರಿಕ ನಡೆಸಿರುವ ಮೊದಲ ಮಿಲಿಟರಿ ಕಾರ್ಯಾಚರಣೆ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com