'ಒನ್ ಚೀನಾ' ಪಾಲಿಸಿಗೆ ಬಾಂಗ್ಲಾ ಬದ್ಧವಾಗಿರುತ್ತದೆ: ರಾಯಭಾರಿ ಲಿ ಜಿಮಿಂಗ್

ಬಾಂಗ್ಲಾದೇಶದ ಸರ್ಕಾರ ಮತ್ತು ಅದರ ನಾಗರಿಕರು 'ಚೀನಾ ಒನ್ ಪಾಲಿಸಿ'ಗೆ ಬದ್ಧರಾಗಿರುತ್ತಾರೆ. ತೈವಾನ್‌ನಲ್ಲಿ ಚೀನಾದ 'ಕಾನೂನುಬದ್ಧ ಮತ್ತು ನ್ಯಾಯಯುತ' ನಿಲುವನ್ನು ಬೆಂಬಲಿಸುತ್ತಾರೆ ಎಂದು ಬಾಂಗ್ಲಾದೇಶದ ಚೀನಾ ರಾಯಭಾರಿ ಲಿ ಜಿಮಿಂಗ್ ಗುರುವಾರ ಇಂಗಿತ ವ್ಯಕ್ತಪಡಿಸಿದ್ದಾರೆ.
ಕ್ಸಿ ಜಿನ್ ಪಿಂಗ್
ಕ್ಸಿ ಜಿನ್ ಪಿಂಗ್

ಢಾಕಾ: ಬಾಂಗ್ಲಾದೇಶದ ಸರ್ಕಾರ ಮತ್ತು ಅದರ ನಾಗರಿಕರು 'ಚೀನಾ ಒನ್ ಪಾಲಿಸಿ'ಗೆ ಬದ್ಧರಾಗಿರುತ್ತಾರೆ. ತೈವಾನ್‌ನಲ್ಲಿ ಚೀನಾದ 'ಕಾನೂನುಬದ್ಧ ಮತ್ತು ನ್ಯಾಯಯುತ' ನಿಲುವನ್ನು ಬೆಂಬಲಿಸುತ್ತಾರೆ ಎಂದು ಬಾಂಗ್ಲಾದೇಶದ ಚೀನಾ ರಾಯಭಾರಿ ಲಿ ಜಿಮಿಂಗ್ ಗುರುವಾರ ಇಂಗಿತ ವ್ಯಕ್ತಪಡಿಸಿದ್ದಾರೆ.

'ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಕಾಪಾಡಲು' ಚೀನಾದೊಂದಿಗೆ ಕೆಲಸ ಮಾಡಲು ಬಾಂಗ್ಲಾದೇಶವನ್ನು ಒತ್ತಾಯಿಸುವ ಹೇಳಿಕೆಯನ್ನು ಲೀ ವ್ಯಕ್ತಪಡಿಸಿದರು. ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯನ್ನು ಖಂಡಿಸಿದ ಅವರು, 'ಆಗಸ್ಟ್ 2ರಂದು ಅವರು ಚೀನಾದ ಭಾರೀ ವಿರೋಧವನ್ನು ಲೆಕ್ಕಿಸದೆ ಚೀನಾದ ಭಾಗವಾದ ತೈವಾನ್ ಗೆ ಭೇಟಿ ನೀಡಿದ್ದರು. ಇದು ಒನ್ ಚೀನಾ ಪಾಲಿಸಿ ಮತ್ತು ಚೀನಾ-ಯುಎಸ್ ಜಂಟಿ ಒಪ್ಪಂದಗಳ ಗಂಭೀರ ಉಲ್ಲಂಘನೆಯಾಗಿದೆ. 

ನ್ಯಾನ್ಸಿ ಭೇಟಿಯು ಚೀನಾ-ಯುಎಸ್ ಸಂಬಂಧಗಳ ರಾಜಕೀಯ ಅಡಿಪಾಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಚೀನಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತಂದಿದೆ. ತೈವಾನ್ ಜಲಸಂಧಿಯ ಶಾಂತಿ ಮತ್ತು ಸ್ಥಿರತೆಗೆ ಗಂಭೀರವಾಗಿ ಹಾನಿಯಾಗಿದೆ. 'ತೈವಾನ್ ಸ್ವಾತಂತ್ರ್ಯ' ಪ್ರತ್ಯೇಕತಾವಾದಿ ಶಕ್ತಿಗಳಿಗೆ ಗಂಭೀರ ತಪ್ಪು ಸಂಕೇತವನ್ನು ಅಮೆರಿಕ ಕಳುಹಿಸಿದೆ. ಚೀನಾ ಇದನ್ನು ತೀವ್ರವಾಗಿ ವಿರೋಧಿಸುವುದಲ್ಲದೆ, ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com