ಕೋವಿಡ್-19 ಮೂಲ ಹಾಗೂ ಓಮಿಕ್ರಾನ್ ತಳಿಗಳನ್ನು ನಿಗ್ರಹಿಸುವ ಬೂಸ್ಟರ್ ಲಸಿಕೆಗೆ ಅನುಮೋದನೆ ನೀಡಿದ ಮೊದಲ ದೇಶ ಬ್ರಿಟನ್ 

ಕೋವಿಡ್-19 ಸೋಂಕಿಗೆ ದ್ವಿಗುಣ ಲಸಿಕೆಯನ್ನು ಮೊದಲ ಬಾರಿಗೆ ಬ್ರಿಟನ್ ಅನುಮೋದಿಸಿದೆ. 
ಕೋವಿಡ್-19 ಲಸಿಕೆ
ಕೋವಿಡ್-19 ಲಸಿಕೆ

ಲಂಡನ್: ಕೋವಿಡ್-19 ಸೋಂಕಿಗೆ ದ್ವಿಗುಣ ಲಸಿಕೆಯನ್ನು ಮೊದಲ ಬಾರಿಗೆ ಬ್ರಿಟನ್ ಅನುಮೋದಿಸಿದೆ. 

ಕೋವಿಡ್-19 ನ ಮೂಲ ತಳಿ ಹಾಗೂ ಇತ್ತೀಚಿನ ಓಮಿಕ್ರಾನ್ ರೂಪಾಂತರಿ ಎರಡರ ವಿರುದ್ಧವೂ ಹೋರಾಡಬಲ್ಲ ಸಾಮರ್ಥ್ಯ ಈ ದ್ವಿಗುಣ ಲಸಿಕೆಗೆ ಇರುವುದು ವಿಶೇಷ ಎಂದು ಬ್ರಿಟನ್ ನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲಿನ ಔಷಧಿ ಹಾಗೂ ಆರೋಗ್ಯ ಉತ್ಪನ್ನಗಳ ನಿಯಂತ್ರಕ ಏಜೆನ್ಸಿ (ಎಂಹೆಚ್ಆರ್ ಎ) ಕೋವಿಡ್ 19 ನ ಎರಡೂ ರೀತಿಯ ತಳಿಗಳೊಂದಿಗೆ ಹೋರಾಟ ಮಾಡುವ ಸಾಮರ್ಥ್ಯವಿರುವ ಮಾಡರ್ನಾ ಲಸಿಕೆಗೆ ಅನುಮೋದನೆ ನೀಡಿರುವುದಾಗಿ ಹೇಳಿದೆ.

ಬೂಸ್ಟರ್ ಲಸಿಕೆಯ ಪ್ರತಿ ಡೋಸ್ ನಲ್ಲಿಯೂ ಸ್ಪೈಕ್ ವ್ಯಾಕ್ಸ್  (25 ಮೈಕ್ರೋ ಗ್ರಾಮ್ ನಷ್ಟು) ಮೂಲ ವೈರಾಣುವನ್ನು ಟಾರ್ಗೆಟ್ ಮಾಡಿದರೆ, 25 ಮೈಕ್ರೋಗ್ರಾಮ್ ನ ಮತ್ತೊಂದು ಅರ್ಧ ಭಾಗ ಓಮಿಕ್ರಾನ್ ನ್ನು ಟಾರ್ಗೆಟ್ ಮಾಡುತ್ತದೆ ಎಂದು ನಿಯಂತ್ರಕ ಮಾಹಿತಿ ನೀಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com