'ಹಿಂಸೆಗೆ ಪ್ರಚೋದನೆ' ರ‍್ಯಾಪರ್ ಕಾನ್ಯೆ ವೆಸ್ಟ್ ಟ್ವಿಟರ್‌ ಖಾತೆಯನ್ನು ಅಮಾನತುಗೊಳಿಸಿದ ಎಲಾನ್ ಮಸ್ಕ್!

ಹಿಂಸೆಗೆ ಪ್ರಚೋದನೆ ನೀಡುವ ಆರೋಪದ ಹಿನ್ನೆಲೆಯಲ್ಲಿ ರ‍್ಯಾಪರ್ ಕಾನ್ಯೆ ವೆಸ್ಟ್ ಅವರ ಟ್ವೀಟರ್ ಖಾತೆಯನ್ನು ಮತ್ತೆ ಅಮಾನತುಗೊಳಿಸಲಾಗಿದೆ.
ಕಾನ್ಯೆ ವೆಸ್ಟ್
ಕಾನ್ಯೆ ವೆಸ್ಟ್

ವಾಷಿಂಗ್ಟನ್: ಹಿಂಸೆಗೆ ಪ್ರಚೋದನೆ ನೀಡುವ ಆರೋಪದ ಹಿನ್ನೆಲೆಯಲ್ಲಿ ರ‍್ಯಾಪರ್ ಕಾನ್ಯೆ ವೆಸ್ಟ್ ಅವರ ಟ್ವೀಟರ್ ಖಾತೆಯನ್ನು ಮತ್ತೆ ಅಮಾನತುಗೊಳಿಸಲಾಗಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನ ನಿಯಮ ಉಲ್ಲಂಘನೆಯಿಂದ ಅಮಾನತುಗೊಂಡಿದ್ದ ಖಾತೆಯನ್ನು ಎರಡು ತಿಂಗಳ ನಂತರ ಮರುಸ್ಥಾಪಿಸಲಾಗಿತ್ತು. ಇದೀಗ ಮತ್ತೆ ನಿಮಯ ಉಲ್ಲಂಘನೆ ಸಂಬಂಧ ಟ್ವಿಟರ್ ಬಳಕೆದಾರರಿಗೆ ಎಲೋನ್ ಮಸ್ಕ್ ಉತ್ತರಿಸಿದ ಒಂದು ಗಂಟೆಯೊಳಗೆ ರ‍್ಯಾಪರ್ ಕಾನ್ಯೆ ವೆಸ್ಟ್ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ.

ಹೈಪ್ರೊಫೈಲ್ ಟ್ವಿಟ್ಟರ್ ಬಳಕೆದಾರರಾದ ಕಾನ್ಯೆ ವೆಸ್ಟ್ ಅವರು ಸಂದರ್ಶನವೊಂದರಲ್ಲಿ ಅಡಾಲ್ಫ್ ಹಿಟ್ಲರ್ ಮತ್ತು ನಾಜಿಗಳನ್ನು ಹೊಗಳಿದ್ದರು. ಜುದಾಯಿಸಂನ ಸಂಕೇತವಾದ ಸ್ಟಾರ್ ಆಫ್ ಡೇವಿಡ್ ಜೊತೆಗೆ ಸ್ವಸ್ತಿಕವನ್ನು ಸಂಯೋಜಿಸುವ ವಿನ್ಯಾಸವನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಕಾನ್ಯೆ ವೆಸ್ಟ್ ಅವರು ನಾಜಿಗಳಿಗೆ ತಮ್ಮ ಪ್ರೀತಿಯನ್ನು ಪ್ರತಿಪಾದಿಸಿದರು. ಚಿಂತಕ ಅಲೆಕ್ಸ್ ಜೋನ್ಸ್ ಅವರೊಂದಿಗೆ ಒಂದು ಗಂಟೆಯ ನೇರ ಪ್ರಸಾರದಲ್ಲಿ ಅಡಾಲ್ಫ್ ಹಿಟ್ಲರ್ ಅನ್ನು ಕಾನ್ಯೆ ಹೊಗಳಿದರು.

ಟ್ವಿಟರ್‌ನ ಹೊಸ ಬಾಸ್ ಎಲೋನ್ ಮಸ್ಕ್, ತನ್ನನ್ನು ತಾನು ಮುಕ್ತ ಅಭಿವ್ಯಕ್ತಿಯ 'ಸಂಪೂರ್ಣ ವಕೀಲ' ಎಂದು ಕರೆದುಕೊಳ್ಳುತ್ತಾರೆ. ರ‍್ಯಾಪರ್ ಕಾನ್ಯೆ ವೆಸ್ಟ್ ಅಕ್ಟೋಬರ್‌ನಲ್ಲಿ ಟ್ವಿಟರ್‌ಗೆ ಮರಳುವುದನ್ನು ಅವರು ಸ್ವಾಗತಿಸಿದರು. ಈಗ ಟ್ವಿಟರ್ ಬಳಕೆದಾರರಿಗೆ ಉತ್ತರಿಸಿದ ಮಸ್ಕ್, 'ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಇದರ ಹೊರತಾಗಿಯೂ, ಅವರು ಮತ್ತೆ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಮೂಲಕ ನಮ್ಮ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com