ನನ್ನ ನಾಯಿಗಳ ಮೇಲೆ ಒಸಾಮ ರಾಸಾಯನಿಕ ಆಯುಧಗಳ ಪರೀಕ್ಷೆ ನಡೆಸಿದ್ದರು: ಒಸಾಮ ಪುತ್ರ

ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಒಸಾಮ ಬಿನ್ ಲ್ಯಾಡನ್ ತಮ್ಮ ನಾಯಿಗಳ ಮೇಲೆ ರಾಸಾಯನಿಕ ಆಯುಧಗಳ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದರು ಎಂದು ಒಸಾಮ ಪುತ್ರ ಹೇಳಿದ್ದಾರೆ. 
ಉಗ್ರ ಒಸಾಮಾ ಬಿನ್ ಲ್ಯಾಡನ್
ಉಗ್ರ ಒಸಾಮಾ ಬಿನ್ ಲ್ಯಾಡನ್

ನವದೆಹಲಿ: ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಒಸಾಮ ಬಿನ್ ಲ್ಯಾಡನ್ ತಮ್ಮ ನಾಯಿಗಳ ಮೇಲೆ ರಾಸಾಯನಿಕ ಆಯುಧಗಳ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದರು ಎಂದು ಒಸಾಮ ಪುತ್ರ ಹೇಳಿದ್ದಾರೆ. 

ನನ್ನ ತಂದೆ ಒಸಾಮ ಬಿನ್ ಲ್ಯಾಡನ್ ನನ್ನನ್ನು ಅವರ ಹಾದಿಯಲ್ಲೇ ಮುನ್ನಡೆಸಲು ತರಬೇತಿ ನೀಡುತ್ತಿದ್ದರು, ಅಫ್ಘಾನಿಸ್ತಾನದಲ್ಲಿದ್ದಾಗ ಬಾಲ್ಯದಲ್ಲೇ ಗನ್ ನೀಡಿದ್ದರು ಹಾಗೂ ನನ್ನ ನಾಯಿಗಳನ್ನು ರಾಸಾಯನಿಕ ಆಯುಧಗಳ ಪರೀಕ್ಷೆಗೆ ಒಳಪಡಿಸಿದ್ದರು ಎಂದು ಒಸಾಮ ಪುತ್ರ ಹೇಳಿದ್ದಾನೆ.

ಸನ್ ಸುದ್ದಿ ಪತ್ರಿಕೆಗೆ ಸಂದರ್ಶನ ನೀಡಿರುವ ಬಿನ್ ಲ್ಯಾಡನ್ ನ ನಾಲ್ಕನೇ ಹಿರಿಯ ಪುತ್ರ ಒಮರ್, ತನ್ನನ್ನು ಸಂತ್ರಸ್ತನೆಂದು ಕರೆದುಕೊಂಡಿದ್ದು, ತನ್ನ ತಂದೆಯೊಂದಿಗೆ ಕಳೆದ ಕೆಟ್ಟ ಸಮಯವನ್ನು ಮರೆಯಲು ಯತ್ನಿಸಿದ್ದಾಗಿ ಹೇಳಿದ್ದಾನೆ

ಫ್ರಾನ್ಸ್ ನ ನಾರ್ಮಂಡಿಯಲ್ಲಿ ವಾಸಿಸುತ್ತಿರುವ 41 ವರ್ಷದ ಒಸಾಮ ಪುತ್ರ, ನೀನು ನನ್ನ ಕೆಲಸಗಳನ್ನು ಮುಂದುವರೆಸುವುದಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಪುತ್ರ ಎಂದು ಹೇಳುತ್ತಿದ್ದದ್ದನ್ನು ನೆನಪಿಸಿಕೊಂಡಿದ್ದಾನೆ. ಆದರೆ ಸೆ.11 ರಂದು ನ್ಯೂ ಯಾರ್ಕ್ ನಲ್ಲಿ ಭಯೋತ್ಪಾದಕ ದಾಳಿಗೂ ಕೆಲವೇ ತಿಂಗಳುಗಳ ಮುನ್ನ ಅಂದರೆ ಏಪ್ರಿಲ್ 2001 ರಲ್ಲಿ ನಾನು ಅಫ್ಘಾನಿಸ್ತಾನ ತೊರೆದೆ, ನಾನು ಗುಡ್ ಬೈ ಹೇಳಿದೆ ಎಂದು ಅವರು ಹೇಳಿದರು, ನಾನು ಅಲ್ಲಿಂದ ನಿರ್ಗಮಿಸಲು ನಿರ್ಧರಿಸಿದ್ದು ಒಸಾಮಾಗೆ ಇಷ್ಟರವಿರಲಿಲ್ಲ ಎಂದೂ ಒಮರ್ ಹೇಳಿರುವುದನ್ನು ಪತ್ರಿಕೆ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com