ಭಾರತದ ಜಿ20 ಅಧ್ಯಕ್ಷೀಯ ಅವಧಿಯಲ್ಲಿ ನನ್ನ ಸ್ನೇಹಿತ ಮೋದಿಯನ್ನು ಬೆಂಬಲಿಸುತ್ತೇನೆ: ಬೈಡೆನ್
ಭಾರತ ಅಮೆರಿಕದ "ಬಲವಾದ ಪಾಲುದಾರ" ಎಂದು ಬಣ್ಣಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು, ಭಾರತದ ಜಿ20 ಅಧ್ಯಕ್ಷೀಯ ಅವಧಿಯಲ್ಲಿ ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಲು ಎದುರು ನೋಡುತ್ತಿರುವುದಾಗಿ...
Published: 02nd December 2022 08:30 PM | Last Updated: 16th December 2022 12:06 PM | A+A A-

ಜೋ ಬೈಡೆನ್ - ಪ್ರಧಾನಿ ಮೋದಿ
ನ್ಯೂಯಾರ್ಕ್: ಭಾರತ ಅಮೆರಿಕದ "ಬಲವಾದ ಪಾಲುದಾರ" ಎಂದು ಬಣ್ಣಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು, ಭಾರತದ ಜಿ20 ಅಧ್ಯಕ್ಷೀಯ ಅವಧಿಯಲ್ಲಿ ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಲು ಎದುರು ನೋಡುತ್ತಿರುವುದಾಗಿ ಶುಕ್ರವಾರ ಹೇಳಿದ್ದಾರೆ.
ಭಾರತ ಗುರುವಾರ ಔಪಚಾರಿಕವಾಗಿ ಜಿ20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ.
ಇದನ್ನು ಓದಿ: ಭಾರತದ ಜಿ20 ಅಧ್ಯಕ್ಷತೆ ಆರಂಭ: 100 ಸ್ಮಾರಕಗಳಿಗೆ ಒಂದು ವಾರ ದೀಪಾಲಂಕಾರ!
"ಭಾರತ ಅಮೆರಿಕದ ಪ್ರಬಲ ಪಾಲುದಾರ ಮತ್ತು ಭಾರತದ ಜಿ20 ಅಧ್ಯಕ್ಷೀಯ ಅವಧಿಯಲ್ಲಿ ನನ್ನ ಸ್ನೇಹಿತ ಪ್ರಧಾನಿ ಮೋದಿ ಅವರನ್ನು ಬೆಂಬಲಿಸಲು ನಾನು ಎದುರು ನೋಡುತ್ತಿದ್ದೇನೆ" ಎಂದು ಬೈಡೆನ್ ಇಂದು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ಭಾರತದ ಜಿ20 ಅಧ್ಯಕ್ಷತೆ ಮಾನವಕುಲದ ಪ್ರಯೋಜನಕ್ಕಾಗಿ ಕೆಲಸ ಮಾಡಲಿದೆ: ಪ್ರಧಾನಿ ಮೋದಿ
"ಭಾರತದ ಜಿ20 ಅಧ್ಯಕ್ಷತೆಯು ಸಾರ್ವತ್ರಿಕ ಏಕತೆಯ ಭಾವನೆಯನ್ನು ಮತ್ತಷ್ಟು ಉತ್ತೇಜಿಸಲುತ ಕೆಲಸ ಮಾಡುತ್ತದೆ. ಆದ್ದರಿಂದ ನಮ್ಮ ಘೋಷವಾಕ್ಯ - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂದು ಪ್ರಧಾನಿ ಮೋದಿ ಗುರುವಾರ ಹೇಳಿದ್ದರು.