ಅಫ್ಘಾನಿಸ್ತಾನದಿಂದ ಅಮೇರಿಕ ಕಾಲ್ತೆಗೆದ ಬಳಿಕ ಪಾಕ್ ನಲ್ಲಿ ಟಿಟಿಪಿ ಚಟುವಟಿಕೆಗಳಿಗೆ ಬಲ!
ಅಮೇರಿಕ ಅಫ್ಘಾನಿಸ್ತಾನದಿಂದ ಕಾಲ್ತೆಗೆದ ನಂತರ ತೆಹ್ರೀಕ್-ಎ- ಪಾಕಿಸ್ತಾನ (ಟಿಟಿಪಿ) ಚಟುವಟಿಕೆಗಳು ಪಾಕಿಸ್ತಾನದ ಪ್ರದೇಶಗಳಲ್ಲಿ ಬಲಿಷ್ಠಗೊಂಡಿದೆ.
Published: 09th December 2022 05:21 PM | Last Updated: 09th December 2022 05:35 PM | A+A A-

ಅಫ್ಘಾನಿಸ್ಥಾನ (ಸಂಗ್ರಹ ಚಿತ್ರ)
ನವದೆಹಲಿ: ಅಮೇರಿಕ ಅಫ್ಘಾನಿಸ್ತಾನದಿಂದ ಕಾಲ್ತೆಗೆದ ನಂತರ ತೆಹ್ರೀಕ್-ಎ- ಪಾಕಿಸ್ತಾನ (ಟಿಟಿಪಿ) ಚಟುವಟಿಕೆಗಳು ಪಾಕಿಸ್ತಾನದ ಪ್ರದೇಶಗಳಲ್ಲಿ ಬಲಿಷ್ಠಗೊಂಡಿದೆ.
ಅಫ್ಘಾನಿಸ್ತಾನದಲ್ಲಿ ಟಿಟಿಪಿ ನೆಲೆ ಹಾಗೆಯೇ ಉಳಿದಿದೆ ಎಂದು ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ಪ್ರಾಧಿಕಾರ ಹೇಳಿದೆ.
ಟಿಟಿಪಿ ಶಾಂತಿ ಮಾತುಕತೆ ಪ್ರಕ್ರಿಯೆಯ ವೇಳೆ ತನ್ನ ಚಟುವಟಿಕೆಗಳ ಪ್ರಮಾಣವನ್ನು ಹೆಚ್ಚಿಸಿಕೊಂಡಿತ್ತು ಎಂದು ದಿ ನ್ಯೂಸ್ ಇಂಟರ್ನ್ಯಾಷನಲ್ ವರದಿ ಪ್ರಕಟಿಸಿದೆ.
ಇದನ್ನೂ ಓದಿ: ವ್ಯಕ್ತಿ ತಲೆಗೆ ಗುಂಡು: ಆಫ್ಘಾನ್ ವಶಪಡಿಸಿಕೊಂಡ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಮರಣದಂಡನೆ ಜಾರಿಗೊಳಿಸಿದ ತಾಲಿಬಾನ್!
ಕಳೆದ ತಿಂಗಳು ಟಿಟಿಪಿ ಪಾಕಿಸ್ತಾನದೊಂದಿಗೆ ಅಧಿಕೃತವಾಗಿ ಕದನ ವಿರಾಮ ಒಪ್ಪಂದವನ್ನು ಹಿಂಪಡೆದಿತ್ತು, ಇದನ್ನು ಜೂನ್ ತಿಂಗಳಲ್ಲಿ ಘೋಷಿಸಲಾಗಿತ್ತು.
ಬಲೂಚಿಸ್ಥಾನ ಹಾಗೂ ಖೈಬರ್ ಪಖ್ತುಂಕ್ವಾದಲ್ಲಿ ಟಿಟಿಪಿ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕ ದಾಳಿ ನಡೆಸಿತ್ತು. ಇತ್ತೀಚೆಗೆ ಅಮೇರಿಕ ಅಲ್-ಖೈದಾ ಹಾಗೂ ಟಿಟಿಪಿಯ ನಾಲ್ವರು ಭಯೋತ್ಪಾದಕರನ್ನು ಜಾಗತಿಕ ಭಯೋತ್ಪಾದಕರು ಎಂದು ಘೋಷಿಸಿತ್ತು.