ಪಾಕಿಸ್ತಾನದ ಕ್ರೂರಿ ಡಿಕ್ಟೇಟರ್ ಜಿಯಾ ಉಲ್ ಹಕ್ ಕೂಡಾ ಲತಾ ಮಂಗೇಶ್ಕರ್ ಫ್ಯಾನ್
ಪಾಕ್ ಅನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಕ್ರಮಗಳನ್ನು ಕೈಗೊಳ್ಳುತ್ತಿದ್ದ ಸಮಯದಲ್ಲಿ ಸರ್ವಾಧಿಕಾರಿ ಜಿಯಾ ಅವರು ದೇಶದಲ್ಲಿ ಸಂಗೀತಕ್ಕೆ ನಿರ್ಬಂಧ ಹೇರಿದ್ದರು.
Published: 06th February 2022 03:17 PM | Last Updated: 06th February 2022 03:17 PM | A+A A-

ಲತಾ ಮಂಗೇಶ್ಕರ್
ಕರಾಚಿ: ಪಾಕಿಸ್ತಾನದ ಕ್ರೂರಿ ಸರ್ವಾಧಿಕಾರಿ ಜನರಲ್ ಜಿಯಾ ಉಲ್ ಹಕ್ ಪಾಕಿಸ್ತಾನದಲ್ಲಿ ಸಂಗೀತ, ಮಹಿಳೆಯರಿಗೆ ನಿರ್ಬಂಧ ಹೇರಿದ್ದ ವ್ಯಕ್ತಿ. ಅಂಥ ವ್ಯಕ್ತಿ ಕೂಡಾ ಲತಾ ಮಂಗೇಶ್ಕರ್ ಅಭಿಮಾನಿ ಎನ್ನುವುದು ಅಚ್ಚರಿಯ ಸಂಗತಿ.
ಸಂದರ್ಶನವೊಂದರಲ್ಲಿ ಖುದ್ದು ಜಿಯಾ ಉಲ್ ಹಕ್ ಅವರೇ ತಾವು ಲತಾ ಜೀ ಅವರ ಅಭಿಮಾನಿ ಎಂದು ಹೇಳಿದ್ದರು. ಲತಾ ಮಂಗೇಶ್ಕರ್ ಇಂದು ಬೆಳಿಗ್ಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅಂಗಾಂಗಗಳ ವೈಫಲ್ಯದಿಂದ ನಿಧನರಾಗಿದ್ದಾರೆ.
ಪಾಕ್ ಅನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಕ್ರಮಗಳನ್ನು ಕೈಗೊಳ್ಳುತ್ತಿದ್ದ ಸಮಯದಲ್ಲಿ ಜಿಯಾ ಅವರು ದೇಶದಲ್ಲಿ ಸಂಗೀತಕ್ಕೆ ನಿರ್ಬಂಧ ಹೇರಿದ್ದರು. ಆ ಸಮಯದಲ್ಲಿ ಅವರು ತಮಗೆ ಲತಾ ಮಂಗೇಶ್ಕರ್ ಎಂದರೆ ಇಷ್ಟ. ಆದರೆ ಈ ಸಮಯದಲ್ಲಿ ಅವರು ಪಾಕಿಸ್ತಾನಕ್ಕೆ ಬಂದು ಹಾಡಬೇಕು ಎಂದು ಇಚ್ಛಿಸುವುದಿಲ್ಲ. ಏಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಅದು ದೇಶದ ಪರಿಸ್ಥಿತಿಗೆ ವಿರುದ್ಧ. ಎಂದು ಜಿಲ ಅವರು ಹೇಳಿದ್ದರು.