
ಚೀನಾ ಸುಪರ್ದಿಯಲ್ಲಿರುವ ಶ್ರೀಲಂಕಾದ ಹಂಬಂಟೊಟ ಬಂದರು
ಕೊಲಂಬೊ: ಚೀನಾದ ಸಾಲದ ಉರುಳಿಗೆ ಸಿಲುಕಿಕೊಂಡು ಒದ್ದಾಡುತ್ತಿರುವ ಶ್ರೀಲಂಕಾ ಆದಷ್ಟು ಬೇಗನೆ ಚೀನಾದ ಬಿಗಿಮುಷ್ಟಿಯಿಂದ ಹೊರಬರಬೇಕು ಎಂದು ಜಾಗತಿಕ ಮಟ್ಟದ ಸಮೀಕ್ಷಾ ಸಂಸ್ಥೆ ಗ್ಲೋಬಲ್ ಸ್ಟ್ರಾಟ್ ವ್ಯೂ ಸಲಹೆ ನೀಡಿದೆ.
ಇದನ್ನೂ ಓದಿ: ಚೀನಾ ಒಲಿಂಪಿಕ್ಸ್ ರಾಜಕೀಯ: ಪೊಲೆಂಡ್, ಪಾಕ್ ನಾಯಕರನ್ನು ಭೇಟಿ ಮಾಡಿದ ಶಿ ಜಿನ್ಪಿಂಗ್
ಚೀನಾದ ಸಾಲದ ಉರುಳಿಗೆ ಶ್ರೀಲಂಕಾ ಬಲಿಯಾಗಿರುವುದಾಗಿ ಸಮೀಕ್ಷಾ ಸಂಸ್ಥೆ ಅಭಿಪ್ರಾಯ ಪಟ್ಟಿದೆ. ಇದೇ ಪರಿಸ್ಥಿತಿ ಮುಂದುವರಿದರೆ ದೇಶದ ಆರ್ಥಿಕತೆ ಇನ್ನೂ ಹದಗೆಟ್ಟು ಮಾನವೀಯ ಸಂಘರ್ಷ ಏರ್ಪಡಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಇಂಧನ ಕೊರತೆ: ಇಂಡಿಯನ್ ಆಯಿಲ್ ಸಂಸ್ಥೆಯಿಂದ 40,000 ಮೆಟ್ರಿಕ್ ಟನ್ ತೈಲ ಖರೀದಿಗೆ ಶ್ರೀಲಂಕಾ ನಿರ್ಧಾರ
ಇತ್ತೀಚಿಗಷ್ಟೆ ಭಾರತ ಶ್ರೀಲಂಕಾಗೆ ಕೋಟ್ಯಂತರ ರೂ. ಸಾಲದ ನೆರವು ಸೇರಿದಂತೆ, ತೈಲ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಹಾಯಹಸ್ತ ಚಾಚಿತ್ತು ಎನ್ನುವುದು ಗಮನಾರ್ಹ.
ಇದನ್ನೂ ಓದಿ: ಶ್ರೀಲಂಕಾಗೆ 6,600 ಕೋಟಿ ರೂ. ಸಾಲದ ನೆರವು: ಆರ್ಥಿಕ ಸಂಕಷ್ಟದಲ್ಲಿರುವ ಮಿತ್ರರಾಷ್ಟ್ರದ ಕೈಹಿಡಿದ ಭಾರತ