ರಷ್ಯಾದ ಸಹವರ್ತಿಯೊಂದಿಗೆ ಅಮೆರಿಕ ರಕ್ಷಣಾ ಕಾರ್ಯದರ್ಶಿ ಮಾತುಕತೆ; ಬಿಕ್ಕಟ್ಟು ಶಮನಕ್ಕೆ ಕರೆ
ರಷ್ಯಾದ ರಕ್ಷಣಾ ಕಾರ್ಯದರ್ಶಿ ಸೆರ್ಗೆಯೊ ಶೋಯಿಗು ಅವರೊಂದಿಗೆ ಶುಕ್ರವಾರ ಮಾತನಾಡಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ , ಉಕ್ರೇನ್ ವಿಚಾರದಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಕರೆ ನೀಡಿದ್ದಾರೆ ಎಂದು ಪೆಂಟಗಾನ್ ಹೇಳಿದೆ.
Published: 18th February 2022 10:25 PM | Last Updated: 18th February 2022 10:44 PM | A+A A-

ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ರಷ್ಯಾದ ರಕ್ಷಣಾ ಕಾರ್ಯದರ್ಶಿ ಸೆರ್ಗೆಯೊ ಶೋಯಿಗು ಅವರೊಂದಿಗೆ ಶುಕ್ರವಾರ ಮಾತನಾಡಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ , ಉಕ್ರೇನ್ ವಿಚಾರದಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಕರೆ ನೀಡಿದ್ದಾರೆ ಎಂದು ಪೆಂಟಗಾನ್ ಹೇಳಿದೆ.
ಉಕ್ರೇನ್ ಸುತ್ತುವರೆದಿರುವ ರಷ್ಯಾದ ಪಡೆಗಳು ತಮ್ಮ ನೆಲೆಗಳಿಗೆ ಹಿಂದಿರುಗಲು ಮತ್ತು ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳಲು ಅಮೆರಿಕ ರಕ್ಷಣಾ ಕಾರ್ಯದರ್ಶಿ ಕರೆ ನೀಡಿದ್ದಾರೆ ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಪರಿಸ್ಥಿತಿ ಕುರಿತು ಭಾರತದ ನಿಲುವು ಸ್ವಾಗತಿಸಿದ ರಷ್ಯಾ
ಶನಿವಾರ ಪರಿಮಾಣು ಅಣ್ವಸ್ತ್ರ ಪ್ರಯೋಗ ನಡೆಸುವುದಾಗಿ ರಷ್ಯಾ ಹೇಳಿಕೆ ಬೆನ್ನಲ್ಲೇ ಈ ಮಾತುಕತೆ ನಡೆದಿದೆ. ರಷ್ಯಾ ರಕ್ಷಣಾ ಸಚಿವಾಲಯ ಪ್ರಕಾರ, ಖಂಡಾತರ ಕ್ಷೀಪಣಿ ಮತ್ತು ಕ್ರೂಸ್ ಕ್ಷಿಪಣಿಗಳ ಪ್ರಯೋಗ ಅಭ್ಯಾಸದಲ್ಲಿ ರಷ್ಯಾದ ಪ್ರಧಾನಿ ವಾಡ್ಲಿಮಿರ್ ಪುಟೀನ್ ಕೂಡಾ ಪಾಲ್ಗೊಳ್ಳಲಿದ್ದಾರೆ.
ಶನಿವಾರ ಪರಿಮಾಣು ಅಣ್ವಸ್ತ್ರ ಪ್ರಯೋಗ ನಡೆಸುವುದಾಗಿ ರಷ್ಯಾ ಹೇಳಿಕೆ ಬೆನ್ನಲ್ಲೇ ಈ ಮಾತುಕತೆ ನಡೆದಿದೆ. ರಷ್ಯಾ ರಕ್ಷಣಾ ಸಚಿವಾಲಯ ಪ್ರಕಾರ, ಖಂಡಾತರ ಕ್ಷೀಪಣಿ ಮತ್ತು ಕ್ರೂಸ್ ಕ್ಷಿಪಣಿಗಳ ಪ್ರಯೋಗ ಅಭ್ಯಾಸದಲ್ಲಿ ರಷ್ಯಾದ ಪ್ರಧಾನಿ ವಾಡ್ಲಿಮಿರ್ ಪುಟೀನ್ ಕೂಡಾ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಪರಿಸ್ಥಿತಿ ಬಗ್ಗೆ ಭಾರತಕ್ಕೆ ಯುರೋಪಿಯನ್ ಒಕ್ಕೂಟ ಮಾಹಿತಿ
ಉಕ್ರೇನ್ನೊಂದಿಗಿನ ತನ್ನ ಗಡಿಯಲ್ಲಿ ರಷ್ಯಾ ಸುಮಾರು 150,000 ಸೈನಿಕರನ್ನು ನಿಯೋಜಿಸಿರುವುದರಿಂದ ಮುಂದಿನ ಕೆಲವು ದಿನಗಳಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡುವ ಸಾಧ್ಯತೆಯಿದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಗುರುವಾರ ಎಚ್ಚರಿಸಿದ ನಂತರ ಈ ಬೆಳವಣಿಗೆಗಳು ನಡೆದಿವೆ.