
ಯುದ್ಧ ವಿಮಾನ
ಬೀಜಿಂಗ್: ಅತ್ಯಾಧುನಿಕ 25 ಜೆ-10ಸಿ ಯುದ್ಧ ವಿಮಾನಗಳನ್ನು ಚೀನಾ ತನ್ನ ಮಿತ್ರರಾಷ್ಟ್ರ ಪಾಕಿಸ್ತಾನಕ್ಕೆ ಮುಂದಿನ ಕೆಲ ವಾರಗಳಲ್ಲಿ ಹಸ್ತಾಂತರಿಸಲಿದೆ.
ಪಾಕಿಸ್ತಾನದ ವಾಯು ಪ್ರದೇಶದ ರಕ್ಷಣೆ ಮತ್ತು ಮಿಲಿಟರಿ ಸಾಮರ್ಥ್ಯ ವೃದ್ಧಿಗೆ ನೆರವಾಗಲಿ ಎಂದು ಜೆ10ಸಿ ಯುದ್ಧ ವಿಮಾನಗಳನ್ನು ಚೀನಾ ಪಾಕಿಸ್ತಾನಕ್ಕೆ ನೀಡುತ್ತಿದೆ ಎಂದು ಬ್ರಿಟನ್ ನ ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ.
ಚೆಂಗ್ಡು ಏರೋಸ್ಪೇಸ್ ಕಾರ್ಪೊರೇಶನ್ ನಿರ್ಮಿತ ಮೊದಲ ಬ್ಯಾಚ್ ಯುದ್ಧ ವಿಮಾನವನ್ನು ಚೆಂಗ್ಡುವಿನಲ್ಲಿ ಪರೀಕ್ಷಿಸಲಾಗುತ್ತಿದೆ. ಪಾಕಿಸ್ತಾನದ ವಾಯುಪಡೆಯ ಪೈಲಟ್ಗಳು ಮತ್ತು ತಂತ್ರಜ್ಞರು ಟ್ರೈನಿಂಗ್ ಪೂರ್ಣಗೊಳಿಸಿದ ನಂತರ ವಿಮಾನಗಳನ್ನು ಪಾಕಿಸ್ತಾನಕ್ಕೆ ವರ್ಗಾಯಿಸುತ್ತದೆ ಎಂದು ಚೀನಾದ ಮಿಲಿಟರಿ ಪ್ರಕಟಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿಯಲ್ಲಿ ಹೇಳಿದೆ.
ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಚೀನಾದ ವಿಶ್ಲೇಷಕರು ಉಭಯ ದೇಶಗಳ ನಡುವಿನ ಇತ್ತೀಚಿನ ರಕ್ಷಣಾ ಸಹಕಾರವನ್ನು ಶ್ಲಾಘಿಸಿದ್ದಾರೆ. ಈ ಕ್ರಮವು ಪಾಕಿಸ್ತಾನದ ಮಿಲಿಟರಿಯ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸುವುದು, ಚೀನಾದ ವಾಯುಯಾನ ಉಪಕರಣಗಳನ್ನು ಉತ್ತೇಜಿಸುವುದು ಮತ್ತು ಅವರ ಭದ್ರತಾ ಹಿತಾಸಕ್ತಿಗಳಿಗೆ ಪ್ರತಿಕ್ರಿಯಿಸುವ ವಿಷಯದಲ್ಲಿ ಹೆಚ್ಚಿನ ಮಹತ್ವವನ್ನು ನೀಡುತ್ತದೆ ಎಂದು ಹೇಳಿದ್ದಾರೆ.