ಉಕ್ರೇನ್ ಪರ ನಿಂತ ಕ್ರೀಡಾಪಟುಗಳು; ರಷ್ಯಾಗೆ ಹೋಗಲ್ಲ ಎಂದ ಎಫ್1 ರೇಸರ್ ಸೆಬಾಸ್ಟಿಯನ್, ನಮ್ಮ ಹೋರಾಟ ಉಕ್ರೇನ್ ಪರ ಎಂದ ಬಾಕ್ಸಿಂಗ್ ಲೆಂಜೆಂಡ್ಸ್
ರಷ್ಯಾ- ಉಕ್ರೇನ್ ನಡುವಿನ ಯುದ್ಧ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕ್ರೀಡಾಪಟುಗಳು ಕೂಡ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಮುಂಬರು ರಷ್ಯಾ ಗ್ರಾಂಡ್ ಪ್ರಿಕ್ಸ್ ಎಫ್ 1 ರೇಸ್ ಗಾಗಿ ತಾವು ರಷ್ಯಾಗೆ ಕಾಲಿಡುವುದಿಲ್ಲ ಎಂದು ಖ್ಯಾತ ರೇಸರ್ ಹಾಗೂ ನಾಲ್ಕು ಬಾರಿ ಎಫ್ 1 ಚಾಂಪಿಯನ್ ಸೆಬಾಸ್ಟಿಯನ್ ವೆಟ್ಟಲ್ ಹೇಳಿದ್ದಾರೆ.
Published: 25th February 2022 04:01 PM | Last Updated: 25th February 2022 04:03 PM | A+A A-

ಎಫ್1 ರೇಸರ್ ಸೆಬಾಸ್ಟಿಯನ್
ಬರ್ಲಿನ್: ರಷ್ಯಾ- ಉಕ್ರೇನ್ ನಡುವಿನ ಯುದ್ಧ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕ್ರೀಡಾಪಟುಗಳು ಕೂಡ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಮುಂಬರು ರಷ್ಯಾ ಗ್ರಾಂಡ್ ಪ್ರಿಕ್ಸ್ ಎಫ್ 1 ರೇಸ್ ಗಾಗಿ ತಾವು ರಷ್ಯಾಗೆ ಕಾಲಿಡುವುದಿಲ್ಲ ಎಂದು ಖ್ಯಾತ ರೇಸರ್ ಹಾಗೂ ನಾಲ್ಕು ಬಾರಿ ಎಫ್ 1 ಚಾಂಪಿಯನ್ ಸೆಬಾಸ್ಟಿಯನ್ ವೆಟ್ಟಲ್ ಹೇಳಿದ್ದಾರೆ.
ಇದನ್ನೂ ಓದಿ: ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್ಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದ ವಿಶ್ವ ಬ್ಯಾಂಕ್
ಹೌದು.. ರಷ್ಯಾ- ಉಕ್ರೇನ್ ನಡುವೆ ಎದ್ದಿರುವ ಯುದ್ದ ವಿಶ್ವವನ್ನೇ ತಲ್ಲಣಗೊಳಿಸಿದ್ದು, ರಷ್ಯಾದ ಅಮಾನುಷ ದಾಳಿಯನ್ನ ಪ್ರಪಂಚದ ಎಲ್ಲಾ ದೇಶಗಳು ತೀವ್ರವಾಗಿ ಖಂಡಿಸುತ್ತಿದೆ. ಯುದ್ದ ಸರಿಯಲ್ಲ, ಕೂಡಲೆ ನಿಲ್ಲಿಸಬೇಕೆಂಬ ಕೂಗು ಕೇಳಿಬಂದರೂ ರಷ್ಯಾ ಮಾತ್ರ ಯುದ್ಧದಿಂದ ಹಿಂದೇಟು ಹಾಕುತ್ತಿಲ್ಲ. ಜೊತೆಗೆ ತನ್ನ ತಂಟೆಗೆ ಬಂದರೆ ಪರಿಣಾಮ ಏನಾಗುತ್ತದೆ ಎಂದು ತನ್ನನ್ನು ಟಾರ್ಗೆಟ್ ಮಾಡಿದ ದೇಶಗಳಿಗೆ ಮುಂದೇನಾಗುತ್ತದೆ ಎಂದು ಉದಾಹರಣೆ ಸಮೇತ ಎಚ್ಚರಿಕೆ ನೀಡುತ್ತಿದೆ. ರಷ್ಯಾದ ಈ ಧೊರಣೆಗೆ ಸಾಮಾನ್ಯರಿಂದ ಸೆಲೆಬ್ರೆಟಿಗಳ ವರೆಗೂ ವಿಮರ್ಶೆಗಳ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: ಉಕ್ರೇನ್-ರಷ್ಯಾ ಸಂಘರ್ಷ: ರೊಮೇನಿಯಾ, ಹಂಗೇರಿ ಮೂಲಕ ಭಾರತೀಯರ ಏರ್ ಲಿಫ್ಟ್: ಭಾರತ ಸರ್ಕಾರ
ಉಕ್ರೇನ್- ರಷ್ಯಾ ನಡುವಿನ ಯುದ್ದದ ಪರಿಣಾಮ ಈಗ ಕ್ರೀಡೆಗೂ ವ್ಯಾಪಿಸಿದ್ದು, ರಷ್ಯಾದಲ್ಲಿ ನಡೆಯಲಿರುವ ಯಾವ ಕ್ರೀಡೆಯಲ್ಲೂ ಸಹ ಪಾಲ್ಗೊಳ್ಳಲು ಕ್ರೀಡಾಪಟುಗಳು ಹಿಂದೇಟು ಹಾಕುತ್ತಿದ್ದಾರೆ. ಫಾರ್ಮುಲ ಒನ್ ರೇಸ್ ಆಟಗಾರ ಸೂಪರ್ ಸ್ಟಾರ್ ಸೆಬಾಸ್ಟಿಯನ್ ವೆಟೆಲ್ ಇದೇ ವಿಷಯವನ್ನ ಪ್ರಸ್ತಾಪಿಸಿದ್ದು, ನಾಲ್ಕು ಬಾರಿ ಚಾಂಪಿಯನ್ ಆಗಿರುವ ವೆಟಲ್ ಅವರು ರಷ್ಯಾದಲ್ಲಿ ನಡೆಯಲಿರುವ ಎಫ್1 ರೇಸ್ ಅನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:ಉಕ್ರೇನ್ ತಿರುಗೇಟು: 800 ರಷ್ಯಾ ಸೈನಿಕರು ಹತ; 7 ವಿಮಾನ, 6 ಚಾಪರ್, 30 ಟ್ಯಾಂಕರ್ ಧ್ವಂಸ!
ಫಾರ್ಮುಲಾ ಒನ್ 2022 ರ ಪೂರ್ವ-ಪರೀಕ್ಷೆ ಸೀಸನ್ ಗಾಗಿ ಪ್ರಸ್ತುತ ಬಾರ್ಸಿಲೋನಾದಲ್ಲಿರುವ ವೆಟ್ಟೆಲ್ ಅವರು ರಷ್ಯಾದ ಜಿಪಿಯಲ್ಲಿ ಭಾಗವಹಿಸುವುದಿಲ್ಲ. ಇಂದು ಮುಂಜಾನೆ ಎಚ್ಚರವಾಗುತ್ತಿದ್ದಂತೆ ಒಂದು ಸುದ್ದಿ ತಿಳಿದು ಆಘಾತವಾಯಿತು. ಉಕ್ರೇನ್ ಮೇಲೆ ದಾಳಿ ಮಾಡುವ ಮೂಲಕ ರಷ್ಯಾ ಅಮಾನವೀಯವಾಗಿ ವರ್ತಿಸುತ್ತಿದೆ. ಮೌಢ್ಯದ ಕಾರಣಕ್ಕೆ ಅಮಾಯಕರ ಜೀವ ಬಲಿಯಾಗುತ್ತಿದೆ. ಅದಕ್ಕಾಗಿಯೇ ಒಮ್ಮೆ ನಾನು ಭಾಗವಹಿಸಲು ಹೊರಟಿದ್ದ ರೇಸಿಂಗ್ ಕ್ಯಾಲೆಂಡರ್ ಅನ್ನು ಒಮ್ಮೆ ನೋಡಿದಾಗ. ಅದರಲ್ಲಿ ರಷ್ಯಾ ಕೂಡ ಇದೇ. ರಷ್ಯಾದಲ್ಲಿ ರೇಸಿಂಗ್ನಲ್ಲಿ ಭಾಗವಹಿಸದಿರಲು ನಾನು ಎಂದೋ ನಿರ್ಧರಿಸಿದ್ದೆ, ಆ ದೇಶದಲ್ಲಿ ರೇಸಿಂಗ್ಗೆ ಹೋಗುವುದೆಂದರೆ ನನ್ನ ಚಪ್ಪಲಿಯಿಂದ ನಾನೆ ಹೊಡೆದುಕೊಂಡಂತೆ. ಅದಕ್ಕೇ ನಾನು ರಷ್ಯಾಕ್ಕೆ ಹೋಗಲ್ಲ ಎಂದಿದ್ದಾರೆ.
ಉಕ್ರೇನ್ ಪರ ಎಂದ ಬಾಕ್ಸಿಂಗ್ ಲೆಂಜೆಂಡ್ಸ್
ಇತ್ತ ಉಕ್ರೇನ್ ಪರವಾಗಿ ಇಬ್ಬರು ಬಾಕ್ಸಿಂಗ್ ಲೆಜೆಂಡ್ ಗಳು ರಷ್ಯಾದ ವಿರುದ್ಧ ಹೋರಾಡುತ್ತಿದ್ದು, ವ್ಯಾಲೆ ವಿಟಾಲಿ ಕ್ಲಿಟ್ಸ್ಕೊ, ವ್ಲಾಡಿಮಿರ್ ಕ್ಲಿಟ್ಸ್ಕೊ .. ಈ ಇಬ್ಬರು ಸಹೋದರರು ತಾವು ಈ ಸಂದರ್ಭದಲ್ಲಿ ಉಕ್ರೇನ್ ಅನ್ನು ಬೆಂಬಲಿಸುತ್ತೇವೆ ಎಂದು ಬಾಕ್ಸಿಂಗ್ ವಿಭಾಗದಲ್ಲಿ ಅನೇಕ ಪುರಸ್ಕಾರಗಳನ್ನು ಪಡೆದಿರುವ ಜೋಡಿ ಹೇಳಿದೆ. 'ನಾವು ದೇಶವನ್ನು ಉಳಿಸಲು ಯುದ್ಧ ಮಾಡಲಿದ್ದೇವೆ. ನನ್ನ ಹೆಸರಿನಲ್ಲಿ ವ್ಲಾಡಿಮಿರ್ ಇದ್ದರೂ ಸಹ ನಮ್ಮ ಹೋರಾಟವು ಉಕ್ರೇನ್ ಪರವಾಗಿ.ನಾವು ಉಕ್ರೇನ್ ಅನ್ನು ರಕ್ಷಿಸುತ್ತೇವೆ. ನಾವು ನಮ್ಮ ದೇಶವನ್ನು ನಂಬುತ್ತೇವೆ. ಇಲ್ಲಿನ ಎಲ್ಲಾ ಜನರು ನಮ್ಮವರು. ಅವರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಾವು ಉಕ್ರೇನ್ ಪರವಾಗಿ ಹೋರಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್ಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದ ವಿಶ್ವ ಬ್ಯಾಂಕ್
ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಆಗಿರುವ ಇಬ್ಬರು ಇತ್ತೀಚೆಗೆ ಉಕ್ರೇನಿಯನ್ ಸೇನೆಯಲ್ಲಿ ನೋಂದಾಯಿಸಿಕೊಂಡಿದ್ದು, ವಿಟಾಲಿ ಕ್ಲಿಟ್ಸ್ಕೊ 2014 ರಿಂದ ಕೀವ್ನ ಮೇಯರ್ ಆಗಿದ್ದಾರೆ.