ದಕ್ಷಿಣ ಆಫ್ರಿಕಾ ಸಂಸತ್ತಿಗೆ ಬೆಂಕಿ: ಸಚಿವರು ಚರ್ಚೆ ನಡೆಸುತ್ತಿದ್ದ ಸ್ಥಳ ಭಸ್ಮ; ಆರೋಪಿ ಬಂಧನ
ಘಟನೆಗೆ ಕಾರಣವೇನೆಂದು ತಿಳಿದುಬರಬೇಕಿದೆ. ಅಗ್ನಿಶಾಮಕದಳ ಸಿಬ್ಬಂದಿಯ ಕಾರ್ಯಕ್ಷಮತೆಯಿಂದ ಭಾರೀ ದೊಡ್ಡ ಅನಾಹುತ ತಪ್ಪಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
Published: 03rd January 2022 11:27 AM | Last Updated: 03rd January 2022 01:15 PM | A+A A-

ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕದಳ
ಕೇಪ್ ಟೌನ್: ರಾಷ್ಟ್ರದ ಹೆಗ್ಗುರುತಾದ ಸಂಸತ್ ಭವನದಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಕೇಪ್ ಟೌನ್ ನಲ್ಲಿ ನೆಲೆಗೊಂಡಿರುವ ದಕ್ಷಿಣ ಆಫ್ರಿಕಾದ ಸಂಸತ್ತಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಪೊಲಿಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ನಾಲ್ವರು ಕಾರ್ಮಿಕರು ಸಾವು, ಏಳು ಮಂದಿಗೆ ಗಾಯ
ಭಾನುವಾರ ರಜಾ ದಿನವಾದ್ದರಿಂದ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಜಾತ್ರೆಯಲ್ಲಿ ಪಟಾಕಿ ಸಿಡಿದು ರಥಕ್ಕೆ ಬೆಂಕಿ, ತಪ್ಪಿದ ಅನಾಹುತ
ಮೂರನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಬಹಳ ಬೇಗನೆ ಇತರೆಡೆ ಹಬ್ಬಿತ್ತು. ನೀತಿ ನಿರೂಪಕರು ಆಸೀನರಾಗುತ್ತಿದ್ದ ಜಾಗ ಸೇರಿದಂತೆ, ಪ್ರಮುಖ ಜಾಗಗಳಿಗೆ ಗಂಭೀರ ಸ್ವರೂಪದ ಹಾನಿ ಸಂಭವಿಸಿದೆ.
ಇದನ್ನೂ ಓದಿ: ರಾಜಸ್ಥಾನ: ಕೋಟಾ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ಅವಘಡ
ಘಟನೆಗೆ ಕಾರಣವೇನೆಂದು ತಿಳಿದುಬರಬೇಕಿದೆ. ಅಗ್ನಿಶಾಮಕದಳ ಸಿಬ್ಬಂದಿಯ ಕಾರ್ಯಕ್ಷಮತೆಯಿಂದ ಭಾರೀ ದೊಡ್ಡ ಅನಾಹುತ ತಪ್ಪಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶ: ನದಿಯಲ್ಲಿ ದೋಣಿ ಬೆಂಕಿಗಾಹುತಿ; 36 ಮಂದಿ ಸಾವು