ಇನ್ಸ್ಟಾಗ್ರಾಮ್ನಲ್ಲಿ ಅತಿಹೆಚ್ಚು ಅನುಯಾಯಿಗಳನ್ನು ಹೊಂದಿದ ಮಹಿಳೆ ಇವರೇ!
ಅಮೆರಿಕನ್ ಮಾಡೆಲ್ ಕೈಲಿ ಜೆನ್ನರ್ ಇನ್ಸ್ಟಾಗ್ರಾಮ್ನಲ್ಲಿ 300 ಮಿಲಿಯನ್ ಅನುಯಾಯಿಗಳನ್ನು ಹೊಂದಿದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
Published: 13th January 2022 06:12 PM | Last Updated: 15th January 2022 06:11 PM | A+A A-

ಕೈಲಿ ಜೆನ್ನರ್
ನ್ಯೂಯಾರ್ಕ್: ಅಮೆರಿಕನ್ ಮಾಡೆಲ್ ಕೈಲಿ ಜೆನ್ನರ್ ಇನ್ಸ್ಟಾಗ್ರಾಮ್ನಲ್ಲಿ 300 ಮಿಲಿಯನ್ ಅನುಯಾಯಿಗಳನ್ನು ಹೊಂದಿದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಕೈಲಿಗಿಂತ ಮೊದಲು, ಗಾಯಕಿ, ನಟಿ ಅರಿಯಾನಾ ಗ್ರಾಂಡೆ ಇನ್ಸ್ಟಾಗ್ರಾಮ್ನಲ್ಲಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಮಹಿಳೆಯಾಗಿದ್ದರು. ಫೆಬ್ರವರಿ 2019ರಲ್ಲಿ 146.5 ಮಿಲಿಯನ್ ಅನುಯಾಯಿಗಳನ್ನು ಗಳಿಸಿದ್ದರು. ಈ ಮೂಲಕ ಹೆಚ್ಚು ಅನುಯಾಯಿಗಳನ್ನು ಗಳಿಸಿದ್ದ ಸೆಲೆನಾ ಗೊಮೆಜ್ ಅವರನ್ನು ಮೀರಿಸಿದ್ದಾರೆ. ಪ್ರಸ್ತುತ, ಅರಿಯಾನಾ 289 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.
ಇನ್ಸ್ಟಾಗ್ರಾಮ್ನ ಅಧಿಕೃತ ಖಾತೆಯಲ್ಲಿ 460 ಮಿಲಿಯನ್ ಅನುಯಾಯಿಗಳನ್ನು ಹೊಂದಬಹುದು. ಇದರಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ 388 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಯಿಂದ ಪ್ರಿಯಾಂಕ ಚೋಪ್ರಾ: 2021ರ ಇನ್ ಸ್ಟಾಗ್ರಾಮ್ ಶ್ರೀಮಂತ ಸೆಲೆಬ್ರಿಟಿಗಳು!
ಟ್ರಾವಿಸ್ ಸ್ಕಾಟ್ನೊಂದಿಗೆ ತನ್ನ ಎರಡನೇ ಮಗುವನ್ನು ನಿರೀಕ್ಷಿಸುತ್ತಿರುವ ಕೈಲಿ ಜೆನ್ನರ್, ತನ್ನ ಅಭಿಮಾನಿಗಳು ಮತ್ತು ಅನುಯಾಯಿಗಳಿಗಾಗಿ ಇನ್ಸ್ಟಾಗ್ರಾಮ್ನಲ್ಲಿ ಹಲವಾರು ವೈಯಕ್ತಿಕ ಮತ್ತು ವೃತ್ತಿಪರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಳೆದ ವಾರ, ಕ್ರಾಪ್ ಟಾಪ್ ಮತ್ತು ಡೆನಿಮ್ ಪ್ಯಾಂಟ್ ಧರಿಸಿ, ಕೈಲಿ ಹೊಸ ಚಿತ್ರಗಳ ಸೆಟ್ನಲ್ಲಿ ತನ್ನ ಮಗುವಿನ ಬಂಪ್ ಚಿತ್ರವನ್ನು ಅಪ್ಲೋಡ್ ಮಾಡಿದ್ದರು.
ಕೈಲಿ ಕಳೆದ ವರ್ಷ ಮಗಳು ಸ್ಟಾರ್ಮಿ ಮತ್ತು ಟ್ರಾವಿಸ್ ಸ್ಕಾಟ್ ಅವರ ಹ್ಯಾಲೋವೀನ್ ಆಚರಣೆಗಳ ಚಿತ್ರಗಳನ್ನು ಹಂಚಿಕೊಂಡಿದ್ದರು.
ನವೆಂಬರ್ನಲ್ಲಿ, ಹೂಸ್ಟನ್ನಲ್ಲಿ ನಡೆದ ಟ್ರಾವಿಸ್ ಸ್ಕಾಟ್ನ ಆಸ್ಟ್ರೋವಲ್ರ್ಡ್ ಫೆಸ್ಟಿವಲ್ ಶೋನಲ್ಲಿ 10 ಜನರು ಸಾವನ್ನಪ್ಪಿದ ನಂತರ ಕೈಲಿ ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಂಡರು. ತನ್ನ ತಾಯಿ ಕ್ರಿಸ್ ಜೆನ್ನರ್ ಅವರ ಥ್ರೋಬ್ಯಾಕ್ ಚಿತ್ರವನ್ನು ಪೋಸ್ಟ್ ಮಾಡಿದ ಅವರು ಡಿಸೆಂಬರ್ 25 ರಂದು ಇನ್ಸ್ಟಾಗ್ರಾಮ್ ಬಳಕೆ ಆರಂಭಿಸಿದರು.