ಓಮಿಕ್ರಾನ್ ಹೆಚ್ಚಳದ ಹಿನ್ನೆಲೆ ಕೊರೋನಾ ಚಿಕಿತ್ಸೆಗೆ ಹೊಸ ಔಷಧಗಳನ್ನು ಶಿಫಾರಸು ಮಾಡಿದ ವಿಶ್ವ ಆರೋಗ್ಯ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಶುಕ್ರವಾರ ಕೊವಿಡ್-19 ಚಿಕಿತ್ಸೆಗಾಗಿ ಬಾರಿಸಿಟಿನಿಬ್ ಮತ್ತು ಕ್ಯಾಸಿರಿವಿಮಾಬ್-ಇಮ್ಡಿವಿಮಾಬ್ ಎಂಬ ಎರಡು ಹೊಸ ಔಷಧಗಳನ್ನು ಶಿಫಾರಸು ಮಾಡಿದೆ.
Published: 15th January 2022 04:04 PM | Last Updated: 17th January 2022 01:19 PM | A+A A-

ವಿಶ್ವ ಆರೋಗ್ಯ ಸಂಸ್ಥೆ
ನ್ಯೂಯಾರ್ಕ್: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಶುಕ್ರವಾರ ಕೊವಿಡ್-19 ಚಿಕಿತ್ಸೆಗಾಗಿ ಬಾರಿಸಿಟಿನಿಬ್ ಮತ್ತು ಕ್ಯಾಸಿರಿವಿಮಾಬ್-ಇಮ್ಡಿವಿಮಾಬ್ ಎಂಬ ಎರಡು ಹೊಸ ಔಷಧಗಳನ್ನು ಶಿಫಾರಸು ಮಾಡಿದೆ.
ಪೀರ್-ರಿವ್ಯೂಡ್ ಜರ್ನಲ್ ಬಿಎಮ್ಜೆನಲ್ಲಿನ ಆರೋಗ್ಯ ಸಂಸ್ಥೆಯ ತಜ್ಞರು, ಗಂಭೀರವಾದ ಅನಾರೋಗ್ಯದ ರೋಗಿಗಳಿಗೆ ಚಿಕಿತ್ಸೆ ನೀಡಲು ಕಾರ್ಟಿಕೊಸ್ಟೆರಾಯ್ಡ್ಗಳೊಂದಿಗೆ ಬಾರಿಸಿಟಿನಿಬ್ ಅನ್ನು ಬಳಸಬಹುದು ಎಂದು ಹೇಳಿದ್ದಾರೆ. ಈ ಔಷಧಿಯನ್ನು ಸಾಮಾನ್ಯವಾಗಿ ಸಂಧಿವಾತ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
ಈ ಔಷಧವು ವೆಂಟಿಲೇಟರ್ಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲದೆ ರೋಗಿಯ ಜೀವದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಡಬ್ಲ್ಯೂ ಹೆಚ್ ಒ ಹೇಳಿದೆ.
ಲಭ್ಯತೆ ಮತ್ತು ವೈದ್ಯರ ಅನುಭವದ ಆಧಾರದ ಮೇಲೆ ಔಷಧವನ್ನು ಖರೀದಿಸಬೇಕು, ಒಂದೇ ಸಮಯದಲ್ಲಿ ಎರಡೂ ಔಷಧಿಗಳನ್ನು ತೆಗೆದುಕೊಳ್ಳುವ ತಪ್ಪನ್ನು ಮಾಡಬಾರದೆಂದು ಹೇಳಿದೆ.
ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಮಾರ್ಗದರ್ಶಿ ಅಪ್ಡೇಟ್ನಲ್ಲಿ ಮೊನೊಕ್ಲೋನಲ್ ಆ್ಯಂಟಿಬಾಡಿ ಸೊಟ್ರೋವಿಮಾಬ್ ಬಳಕೆಯನ್ನು ಡಬ್ಲ್ಯೂಹೆಚ್ಓ ಶಿಫಾರಸು ಮಾಡಿದೆ. ಕಡಿಮೆ ಗಂಭೀರ ಸೋಂಕುಗಳಿರುವ ರೋಗಿಗಳಿಗೆ ಇದನ್ನು ನೀಡಬಹುದು. ಡಬ್ಲ್ಯೂಹೆಚ್ಓ ಮತ್ತೊಂದು ಮೊನೊಕ್ಲೋನಲ್ ಪ್ರತಿಕಾಯ ಔಷಧ ಕ್ಯಾಸಿರಿವಿಮಾಬ್-ಇಮ್ಡಿವಿಮಾಬ್ಗೆ ಇದೇ ರೀತಿಯ ಶಿಫಾರಸು ಮಾಡಿದೆ.
ಇದನ್ನೂ ಓದಿ: ಕೊರೋನಾ ಹೊಸ ರೂಪಾಂತರಿ 'ಓಮಿಕ್ರಾನ್' ಎಂಡೆಮಿಕ್ ಎಂದು ಪರಿಗಣಿಸಲು ಸಾಧ್ಯವಿಲ್ಲ: ಡಬ್ಲ್ಯೂಎಚ್ಓ ಎಚ್ಚರಿಕೆ
ಆದಾಗ್ಯೂ, ವಿಶ್ವ ಆರೋಗ್ಯ ಸಂಸ್ಥೆ ಹೊರಡಿಸಿದ ಹೇಳಿಕೆಯು ಮೊನೊಕ್ಲೋನಲ್ ಪ್ರತಿಕಾಯ ಚಿಕಿತ್ಸೆಯನ್ನು ಶಿಫಾರಸು ಮಾಡಲು ಸಾಕಷ್ಟು ಡೇಟಾ ಲಭ್ಯವಿಲ್ಲ ಎಂದು ಹೇಳಿದೆ ಮತ್ತು ಒಮೈಕ್ರಾನ್ ನಂತಹ ಹೊಸ ರೂಪಾಂತರಗಳ ವಿರುದ್ಧ ಅದರ ಪರಿಣಾಮಕಾರಿತ್ವವು ಪ್ರಸ್ತುತ ತಿಳಿದಿಲ್ಲ ಎಂದು ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದೆ. ಮೊನೊಕ್ಲೋನಲ್ ಪ್ರತಿಕಾಯಗಳ ಸಾಕಷ್ಟು ಡೇಟಾವನ್ನು ಸ್ವೀಕರಿಸಿದ ತಕ್ಷಣ ಅದರ ಮಾರ್ಗಸೂಚಿಗಳನ್ನು ನವೀಕರಿಸಲಾಗುತ್ತದೆ.
ವಿಶ್ವಸಂಸ್ಥೆಯ ಈ ಶಿಫಾರಸುಗಳು 4,000 ಸಾಮಾನ್ಯ, ಕಡಿಮೆ ತೀವ್ರ ಮತ್ತು ಹೆಚ್ಚು ತೀವ್ರವಾದ ಸೋಂಕಿತ ರೋಗಿಗಳ ಮೇಲೆ ಏಳು ಪ್ರಯೋಗಗಳಲ್ಲಿ ಕಂಡುಬಂದ ಪುರಾವೆಗಳನ್ನು ಆಧರಿಸಿವೆ. ಈ ಎಲ್ಲ ರೋಗಿಗಳು ಮ್ಯಾಜಿಕ್ ಎವಿಡೆನ್ಸ್ ಇಕೋಸಿಸ್ಟಮ್ ಪೌಂಢೇಶನ್ನ ಮೆಥಡಾಲಾಜಿಕಲ್ ಸಪೋರ್ಟ್ ಸಹಯೋಗದೊಂದಿಗೆ ಡಬ್ಲ್ಯೂ ಹೆಚ್ಓ ಅಭಿವೃದ್ಧಿಪಡಿಸಿದ ಜೀವನ ಮಾರ್ಗಸೂಚಿಯ ಭಾಗವಾಗಿದೆ. ಆದ್ದರಿಂದ ಕೋವಿಡ್-19 ನಿರ್ವಹಣೆಗೆ ವಿಶ್ವಾಸಾರ್ಹ ಮಾರ್ಗಸೂಚಿಗಳನ್ನು ನೀಡಬಹುದು ಮತ್ತು ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ವರದಿಯಾಗಿದೆ.