ಟೆಕ್ಸಾಸ್: ಎಲ್ಲಾ ಒತ್ತೆಯಾಳುಗಳು ಸುರಕ್ಷಿತ, ದುಷ್ಕರ್ಮಿಯ ಹತ್ಯೆ
ಟೆಕ್ಸಾಸ್ ನಲ್ಲಿರುವ ಸಿನಗಾಗ್‌ನಲ್ಲಿ ಗಂಟೆಗಳ ಕಾಲ ಒತ್ತೆ ಸೆರೆಯಲ್ಲಿದ್ದ ಎಲ್ಲಾ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದ್ದು, ದಾಳಿಕೋರನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
Published: 16th January 2022 11:55 AM | Last Updated: 17th January 2022 01:21 PM | A+A A-

ಘಟನಾ ಸ್ಥಳದಲ್ಲಿರುವ ಭದ್ರತಾಪಡೆ.
ಕೊಲಿವಿಲ್ಲೆ: ಟೆಕ್ಸಾಸ್ ನಲ್ಲಿರುವ ಸಿನಗಾಗ್‌ನಲ್ಲಿ ಗಂಟೆಗಳ ಕಾಲ ಒತ್ತೆ ಸೆರೆಯಲ್ಲಿದ್ದ ಎಲ್ಲಾ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದ್ದು, ದಾಳಿಕೋರನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಶಿಕ್ಷೆಗೊಳಗಾದ ಪಾಕಿಸ್ತಾನದ ಭಯೋತ್ಪಾದಕಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ದುಷ್ಕರ್ಮಿ ಹಲವರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ. ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಎಲ್ಲಾ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದ್ದು, ಬಂದೂಕುಧಾರಿಯನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿನಗಾಗ್‌ನಲ್ಲಿ ಒತ್ತೆಯಾಳುಗಳನ್ನು ತನ್ನ ವಶಕ್ಕೆ ಪಡೆದಿದ್ದ ಒಬ್ಬ ಶಸ್ತ್ರಸಜ್ಜಿತ ವ್ಯಕ್ತಿ ಮೃತನಾಗಿದ್ದಾನೆ ಎಂದು ಒತ್ತೆಯಾಳುಗಳನ್ನು ರಕ್ಷಿಸಿದ ನಂತರ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.
ಇದನ್ನೂ ಓದಿ: ಟೆಕ್ಸಾಸ್: ಪಾಕ್ ನರ ವಿಜ್ಞಾನಿಯ ಬಿಡುಗಡೆಗೆ ಆಗ್ರಹ, ಯಹೂದಿಗಳ ಒತ್ತೆಯಾಳಾಗಿರಿಸಿದ ಶಸ್ತ್ರಾಸ್ತ್ರಧಾರಿ ವ್ಯಕ್ತಿಗಳು!
ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೇನಾಧಿಕಾರಿಯ ಕೊಲೆಗೆ ಯತ್ನಿಸಿದ ಪಾಕ್ ನ ಮಾಜಿ ವಿಜ್ಞಾನಿ ಆಫಿಯಾ ಸಿದ್ದಿಕಿಗೆ 2010ರಲ್ಲಿ ನ್ಯೂಯಾರ್ಕ್ ನ್ಯಾಯಾಲಯ 86 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆಕೆಯನ್ನು ಪ್ರಸ್ತುತ ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿರುವ ಫೆಡರಲ್ ಮೆಡಿಕಲ್ ಸೆಂಟರ್ (ಎಫ್‌ಎಂಸಿ) ಜೈಲಿನಲ್ಲಿ ಇರಿಸಲಾಗಿದೆ.ಆ ಫಿಯಾ ಸಿದ್ದಿಕಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಬಂದೂಕುಧಾರಿ ವ್ಯಕ್ತಿ ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ.