ಟೆಕ್ಸಾಸ್: ಪಾಕ್ ನರ ವಿಜ್ಞಾನಿಯ ಬಿಡುಗಡೆಗೆ ಆಗ್ರಹ, ಯಹೂದಿಗಳ ಒತ್ತೆಯಾಳಾಗಿರಿಸಿದ ಶಸ್ತ್ರಾಸ್ತ್ರಧಾರಿ ವ್ಯಕ್ತಿಗಳು!
ಕಾಲಿವಿಲ್ಲೆಯಲ್ಲಿರುವ ಕಟ್ಟಡವೊಂದರಲ್ಲಿ ಪ್ರಾರ್ಥನೆ ಸಲ್ಲಿಸಲು ಸೇರಿದ್ದ ಇಸ್ರೇಲಿ ಪ್ರಜೆಗಳ ಪೈಕಿ ಓರ್ವ ಧರ್ಮಗುರು ಸೇರಿದಂತೆ ನಾಲ್ವರನ್ನು ಶಸ್ತ್ರಾಸ್ತ್ರಧಾರಿ ವ್ಯಕ್ತಿಗಳು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. 160 ವರ್ಷಗಳ ಹಳೆಯ ಕಾಂಗ್ರೆಗೇಶನ್ ಬೆತ್ ಇಸ್ರೇಲ್ ಕಟ್ಟಡದಲ್ಲಿ ಈ ಕೃತ್ಯ ನಡೆದಿದೆ.
Published: 16th January 2022 08:55 AM | Last Updated: 16th January 2022 09:07 AM | A+A A-

ಸಂಗ್ರಹ ಚಿತ್ರ
ಟೆಕ್ಸಾಸ್: ಕಾಲಿವಿಲ್ಲೆಯಲ್ಲಿರುವ ಕಟ್ಟಡವೊಂದರಲ್ಲಿ ಪ್ರಾರ್ಥನೆ ಸಲ್ಲಿಸಲು ಸೇರಿದ್ದ ಇಸ್ರೇಲಿ ಪ್ರಜೆಗಳ ಪೈಕಿ ಓರ್ವ ಧರ್ಮಗುರು ಸೇರಿದಂತೆ ನಾಲ್ವರನ್ನು ಶಸ್ತ್ರಾಸ್ತ್ರಧಾರಿ ವ್ಯಕ್ತಿಗಳು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. 160 ವರ್ಷಗಳ ಹಳೆಯ ಕಾಂಗ್ರೆಗೇಶನ್ ಬೆತ್ ಇಸ್ರೇಲ್ ಕಟ್ಟಡದಲ್ಲಿ ಈ ಕೃತ್ಯ ನಡೆದಿದೆ.
ಒತ್ತೆಯಾಳುಗಳಲ್ಲಿ ಒಬ್ಬರನ್ನು ಸಂಜೆ 5:00 ಗಂಟೆಗೆ (2300 GMT) ಯಾವುದೇ ಗಾಯಗಳನ್ನೂ ಮಾಡದೆ ಬಿಡುಗಡೆ ಮಾಡಲಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ಶಸ್ತ್ರಾಸ್ತ್ರಧಾರಿಗಳು ಎಷ್ಟು ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆಂಬ ಕುರಿತು ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ. ಒತ್ತೆಯಾಳುಗಳು ಸಿನಗಾಗ್ ನಲ್ಲಿದ್ದಾರೆಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.
ಶನಿವಾರ ಸರಿಸುಮಾರು 10:41 ಬೆಳಗ್ಗೆ, ಕಾಲಿವಿಲ್ಲೆ ಪ್ಲೆಸೆಂಟ್ ರನ್ ರಸ್ತೆಯ 6100 ಬ್ಲಾಕ್‌ನಲ್ಲಿರುವ ಪೊಲೀಸ್
ಠಾಣೆಗೆ ಕರೆಯೊಂದು ಬಂದಿತ್ತು. ಅಧಿಕಾರಿಗಳು ಕೂಡಲ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿ ಸುತ್ತಮುತ್ತಲು ಪ್ರದೇಶದಲ್ಲಿರುವ ಜನರನ್ನು ಸ್ಥಳಾಂತರ ಮಾಡಿದರು ಎಂದು ತಿಳಿಸಿದ್ದಾರೆ.
ಇಸ್ರೇಲ್‌ನ ವಲಸೆಗಾರರ ವ್ಯವಹಾರಗಳ ಸಚಿವ ನಾಚ್‌ಮನ್ ಶಾಯ್ ಈ ಕುರಿತು ಶನಿವಾರ ಟ್ವೀಟ್ ಮಾಡಿದ್ದು, ಇಸ್ರೇಲ್‌ನಿಂದ ಬಂದು ಟೆಕ್ಸಾಸ್‌ನ ಕಾಲಿವಿಲ್ಲೆಯಲ್ಲಿರುವ ಬೆತ್ ಇಸ್ರೇಲ್‌ನಲ್ಲಿರುವ ಒತ್ತೆಯಾಳುಗಳ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ತಿಳಿಸಿದ್ದಾರೆ.
ಈ ಪ್ರಕರಣದ ಕುರಿತಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ವೈಟ್‌ಹೌಸ್ ಮೂಲಗಳು ತಿಳಿಸಿವೆ.
ಬಂದೂಕುಧಾರಿ ವ್ಯಕ್ತಿಯು ಆಫಿಯಾ ಸಿದ್ದಿಕಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾನೆ ಎಂದು ವರದಿಯಾಗಿದೆ. ವ್ಯಕ್ತಿ ತಾನು ಸಿದ್ದಿಕಿಯ ಸಹೋದರ ಎಂದು ಹೇಳಿಕೊಂಡಿದ್ದಾನೆ ಎಂದು ವರದಿಗಳು ತಿಳಿಸಿದೆ.
2010ರಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಅಧಿಕಾರಿಗಳ ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ವಿಜ್ಞಾನಿ ಸಿದ್ದಿಕಿ ಅವರಿಗೆ ನ್ಯೂಯಾರ್ಕ್ ನ್ಯಾಯಾಲಯ 86 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಪ್ರಕರಣವು ಪಾಕಿಸ್ತಾನದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.