2021ರಲ್ಲಿ ಚೀನಾ ಜನಸಂಖ್ಯೆ ಅಲ್ಪ ಏರಿಕೆ; ಸತತ 5ನೇ ವರ್ಷವೂ ಜನನ ಪ್ರಮಾಣ ಕುಸಿತ
ದೇಶದಲ್ಲಿ ಜನನ ಪ್ರಮಾಣ ಆಘಾತಕಾರಿ ಮಟ್ಟದಲ್ಲಿ ಕುಸಿತ ಕಾಣುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ದೇಶದ ಆರ್ಥಿಕ ಪ್ರಗತಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
Published: 17th January 2022 09:00 PM | Last Updated: 18th January 2022 12:56 PM | A+A A-

ಸಾಂದರ್ಭಿಕ ಚಿತ್ರx
ಬೀಜಿಂಗ್: ಕಳೆದ ವರ್ಷ ಚೀನಾದ ಜನಸಂಖ್ಯೆ 5 ಲಕ್ಷಕ್ಕೂ ಕಡಿಮೆ ಏರಿಕೆ ಕಂಡಿದ್ದು, ಇದರೊಂದಿಗೆ ಸತತ 5 ವರ್ಷಗಳಿಂದ ದೇಶದ ಜನ ಪ್ರಮಾಣ ಕುಸಿತಕ್ಕೊಳಗಾದಂತಾಗಿದೆ.
ಇದನ್ನೂ ಓದಿ: ಲಡಾಖ್ ಉದ್ವಿಗ್ನತೆ ಹೊರತಾಗಿಯೂ 2021 ರಲ್ಲಿ ಭಾರತ-ಚೀನಾ ನಡುವೆ ವ್ಯಾಪಾರ ದಾಖಲೆಯ 125 ಶತಕೋಟಿ ಡಾಲರ್ ಗೆ ಹೆಚ್ಚಳ
2021 ಅಂತ್ಯದ ವೇಳೆಗೆ ಚೀನಾ ಜನಸಂಖ್ಯೆ 1.4126 ಶತಕೋಟಿ ದಾಖಲಾಗಿತ್ತು. ಅದಕ್ಕೂ ಹಿಂದಿನ ವರ್ಷ 1.4120 ಶತಕೋಟಿ ಜನಸಂಖ್ಯೆ ದಾಖಲಾಗಿತ್ತು.
ಇದನ್ನೂ ಓದಿ: ತೆರಿಗೆ ವಂಚನೆ, ನಿಯಮಗಳ ಉಲ್ಲಂಘನೆ: ಶಿಯೋಮಿ, ಒಪ್ಪೊ ಸೇರಿ ಚೀನಾ ಮೊಬೈಲ್ ಕಂಪನಿಗಳಿಗೆ ಸಾವಿರ ಕೋಟಿ ರೂ. ದಂಡ!
ದೇಶದಲ್ಲಿ ಜನನ ಪ್ರಮಾಣ ಆಘಾತಕಾರಿ ಮಟ್ಟದಲ್ಲಿ ಕುಸಿತ ಕಾಣುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ದೇಶದ ಆರ್ಥಿಕ ಪ್ರಗತಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಚೀನಾದ ನ್ಯಾಷನಲ್ ಬ್ಯೂರೊ ಆಫ್ ಸ್ಟಾಟಿಸ್ಟಿಕ್ಸ್ ಸಂಸ್ಥೆ ಜನಸಂಖ್ಯೆ ಮಾಹಿತಿಯನ್ನು ಬಹಿರಂಗಪಡಿಸಿದೆ.
ಇದನ್ನೂ ಓದಿ: ಫೆಬ್ರವರಿಯಲ್ಲಿ ಒಲಿಂಪಿಕ್ ಕ್ರೀಡಾಕೂಟ: ಚೀನಾದಲ್ಲಿ ಪ್ರತಿ ಸೆಕೆಂಡ್ ಗೆ 583 ಮಂದಿಗೆ ಕೋವಿಡ್ ಪರೀಕ್ಷೆ!