ಅಬು ಧಾಬಿ: ಡ್ರೋನ್ ದಾಳಿಯಲ್ಲಿ ಇಬ್ಬರು ಭಾರತೀಯ, ಓರ್ವ ಪಾಕಿಸ್ತಾನಿ ಹತ್ಯೆ, ಆರು ಮಂದಿಗೆ ಗಾಯ
ಅಬು ಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಮೂರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಡ್ರೋನ್ ದಾಳಿಯಿಂದ ಈ ಸ್ಫೋಟ ಸಂಭವಿಸಿರಬಹುದೆಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published: 17th January 2022 06:28 PM | Last Updated: 17th January 2022 07:04 PM | A+A A-

ಡ್ರೋನ್ ದಾಳಿ
ದುಬೈ: ಅಬು ಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಮೂರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಡ್ರೋನ್ ದಾಳಿಯಿಂದ ಈ ಸ್ಫೋಟ ಸಂಭವಿಸಿರಬಹುದೆಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದಲ್ಲಿ ಮೂವರು ಭಾರತೀಯರು, ಓರ್ವ ಪಾಕಿಸ್ತಾನ ಪ್ರಜೆ ಸಾವನ್ನಪ್ಪಿದ್ದು, ಗಾಯಾಳುಗಳ ಗುರುತು ಪತ್ತೆಯಾಗಿಲ್ಲ, ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಂಭವನೀಯ ದಾಳಿಗೆ ಅಬು ಧಾಬಿ ಪೊಲೀಸರು ತಕ್ಷಣವೇ ಯಾವುದೇ ಶಂಕೆಯನ್ನು ವ್ಯಕ್ತಪಡಿಸದಿದ್ದರೂ ಯೆಮೆನ್‌ನ ಹೌತಿ ಬಂಡುಕೋರರು ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು ಗುರಿಯಾಗಿಸಿಕೊಂಡು ದಾಳಿಯ ಹೊಣೆ ಹೊತ್ತಿಕೊಂಡಿದ್ದಾರೆ. ಇರಾನ್ ಬೆಂಬಲಿತ ಹೌತಿಗಳು ಹಲವಾರು ದಾಳಿಗಳನ್ನು ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ ಆದರೆ, ಅವುಗಳು ನಡೆದಿಲ್ಲ ಎಂದು ನಂತರ ಎಮಿರೇಟ್ಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.
ಡ್ರೋನ್‌ಗಳಿಗೆ ಸೇರಿದ ಸಣ್ಣ ಹಾರಾಟದ ವಸ್ತು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಅದು ಎರಡು ಪ್ರದೇಶದಲ್ಲಿ ಬಿದಿದ್ದು, ಸ್ಫೋಟ ಮತ್ತು ಬೆಂಕಿಗೆ ಕಾರಣವಾಗಿರಬಹುದೆಂದು ಈ ಘಟನೆಯಿಂದ ಯಾವುದೇ ಗಮನಾರ್ಹ ರೀತಿಯ ಹಾನಿಯಾಗಿಲ್ಲ ಎಂದು ಅಬು ಧಾಬಿ ಪೊಲೀಸರು ತಿಳಿಸಿದ್ದಾರೆ.