ಅಬುಧಾಬಿ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ ಇಬ್ಬರು ಭಾರತೀಯರ ಸಂಬಂಧಿಕರಿಗೆ ನೆರವು: ಭಾರತ
ಅಬು ಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸೋಮವಾರ ನಡೆದ ಶಂಕಿತ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ ಇಬ್ಬರು ಭಾರತೀಯ ನಾಗರಿಕರ ಕುಟುಂಬಕ್ಕೆ ಎಲ್ಲಾ ರೀತಿ ನೆರವು ನೀಡುವುದಾಗಿ ಭಾರತ ಮಂಗಳವಾರ ಹೇಳಿದೆ.
Published: 18th January 2022 04:51 PM | Last Updated: 18th January 2022 04:51 PM | A+A A-

ಡ್ರೋನ್ ದಾಳಿ
ದುಬೈ: ಅಬು ಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸೋಮವಾರ ನಡೆದ ಶಂಕಿತ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ ಇಬ್ಬರು ಭಾರತೀಯ ನಾಗರಿಕರ ಕುಟುಂಬಕ್ಕೆ ಎಲ್ಲಾ ರೀತಿ ನೆರವು ನೀಡುವುದಾಗಿ ಭಾರತ ಮಂಗಳವಾರ ಹೇಳಿದೆ.
ಯೆಮೆನ್‌ನಲ್ಲಿ ಹೌತಿ ಬಂಡುಕೋರರು ನಿನ್ನೆ ನಡೆಸಿದ ದಾಳಿಯಲ್ಲಿ ಇಬ್ಬರು ಭಾರತೀಯರು ಮತ್ತು ಓರ್ವ ಪಾಕಿಸ್ತಾನಿ ಪ್ರಜೆ ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದರು.
ಇದನ್ನು ಓದಿ: ಅಬು ಧಾಬಿ: ಡ್ರೋನ್ ದಾಳಿಯಲ್ಲಿ ಇಬ್ಬರು ಭಾರತೀಯ, ಓರ್ವ ಪಾಕಿಸ್ತಾನಿ ಹತ್ಯೆ, ಆರು ಮಂದಿಗೆ ಗಾಯ
ಅಬುಧಾಬಿಯಲ್ಲಿ "ಸಣ್ಣ ಹಾರುವ ವಸ್ತುಗಳು" ಬಹುಶಃ ಡ್ರೋನ್‌ಗಳು ಮೂರು ಪೆಟ್ರೋಲಿಯಂ ಟ್ಯಾಂಕರ್‌ಗಳಿಗೆ ಅಪ್ಪಳಿಸಿದ ಪರಿಣಾಮ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.
ದಿ ನ್ಯಾಷನಲ್ ಪತ್ರಿಕೆಯೊಂದಿಗೆ ಮಾತನಾಡಿದ ಯುಎಇಯಲ್ಲಿನ ಭಾರತದ ರಾಯಭಾರಿ ಸಂಜಯ್ ಸುಧೀರ್, ಮೃತ ಭಾರತೀಯ ನಾಗರಿಕರ ಕುಟುಂಬಗಳಿಗೆ ಕೇಂದ್ರ ಸರ್ಕಾರ "ಸಾಧ್ಯವಾದ ಎಲ್ಲಾ ರೀತಿಯ ಸಹಾಯವನ್ನು" ನೀಡುತ್ತದೆ ಎಂದು ಹೇಳಿದರು.
ದಾಳಿಯಲ್ಲಿ ಮೃತಪಟ್ಟ ಇಬ್ಬರು ಭಾರತೀಯರ ಹೆಸರನ್ನು ಭಾರತೀಯ ರಾಯಭಾರ ಕಚೇರಿ ಇನ್ನೂ ಪ್ರಕಟಿಸಿಲ್ಲ.
ಏತನ್ಮಧ್ಯೆ, ಡ್ರೋನ್ ದಾಳಿಯ ಒಂದು ದಿನದ ನಂತರ ವಿವಿಧ ಭಾಗಗಳಿಂದ ಖಂಡನೆ ವ್ಯಕ್ತವಾಗಿದೆ.