ಕೋವಿಡ್ ಕಾರಣ ಹೇಳಿ ಲಂಡನ್ ನ ಲಕ್ಸುರಿ ಮನೆಯಲ್ಲಿದ್ದ ವಿಜಯ್ ಮಲ್ಯಗೆ ಮತ್ತೆ ಕುತ್ತು.. ನಿವಾಸ ತೊರೆಯಲು ಸೂಚನೆ!
ಕೋವಿಡ್ ಸಾಂಕ್ರಾಮಿಕದ ನೆಪವೊಡ್ಡಿ ಲಂಡನ್ ನ ಐಶಾರಾಮಿ ನಿವಾಸ ತೊರೆಯಲು ಹಿಂದೇಟು ಹಾಕುತ್ತಿದ್ದ ಭಾರತ ಮೂಲದ ವಿವಾದಿತ ಉದ್ಯಮಿ ವಿಜಯ್ ಮಲ್ಯಗೆ ಲಂಡನ್ ಕೋರ್ಟ್ ಶಾಕ್ ನೀಡಿದ್ದು, ನಿವಾಸ ತೊರೆಯುವಂತೆ ಪರೋಕ್ಷ ಸೂಚನೆ ನೀಡಿದೆ.
Published: 19th January 2022 10:47 AM | Last Updated: 19th January 2022 01:53 PM | A+A A-

ವಿಜಯ್ ಮಲ್ಯ(ಸಂಗ್ರಹ ಚಿತ್ರ)
ಲಂಡನ್: ಕೋವಿಡ್ ಸಾಂಕ್ರಾಮಿಕದ ನೆಪವೊಡ್ಡಿ ಲಂಡನ್ ನ ಐಶಾರಾಮಿ ನಿವಾಸ ತೊರೆಯಲು ಹಿಂದೇಟು ಹಾಕುತ್ತಿದ್ದ ಭಾರತ ಮೂಲದ ವಿವಾದಿತ ಉದ್ಯಮಿ ವಿಜಯ್ ಮಲ್ಯಗೆ ಲಂಡನ್ ಕೋರ್ಟ್ ಶಾಕ್ ನೀಡಿದ್ದು, ನಿವಾಸ ತೊರೆಯುವಂತೆ ಪರೋಕ್ಷ ಸೂಚನೆ ನೀಡಿದೆ.
ಲಂಡನ್ನ ಪ್ರಮುಖ ಸ್ಥಳದಲ್ಲಿರುವ ತಮ್ಮ ಐಷಾರಾಮಿ ನಿವಾಸಕ್ಕೆ ಸಂಬಂಧಿಸಿದಂತೆ ಕಾನೂನು ಸಮರದಲ್ಲಿ ಉದ್ಯಮಿ ವಿಜಯ್ ಮಲ್ಯ ಪರಾಭವಗೊಂಡಿದ್ದು, ಸ್ವಿಸ್ ಬ್ಯಾಂಕ್ ಯುಬಿಎಸ್ ವಿವಾದಕ್ಕೆ ಸಂಬಂಧಿಸಿದಂತೆ ಈ ಮನೆಯಲ್ಲಿ ವಾಸವಿರಲು ಅವಕಾಶವನ್ನು ಬ್ರಿಟನ್ನ ಕೋರ್ಟ್ ನಿರಾಕರಿಸಿದೆ.
ಪ್ರಸ್ತುತ ಮನೆಯಲ್ಲಿ ಮಲ್ಯ ಅವರ ತಾಯಿ, 95 ವರ್ಷದ ಲಲಿತಾ ಅವರು ವಾಸವಿದ್ದಾರೆ. ಲಂಡನ್ನಲ್ಲಿ 18/19 ಕಾರ್ನ್ವಾಲ್ ಟೆರೆಸ್ ಐಷರಾಮಿ ವಸತಿ ಸಮುಚ್ಚಯವು, ದುಬಾರಿಯಾಗಿದ್ದು, ನೂರಾರು ಮಿಲಿಯನ್ ಪೌಂಡ್ಗಳ ಮೌಲ್ಯದ್ದಾಗಿದೆ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಸೆಲಬ್ರಿಟಿಗಳ ಮಕ್ಕಳು ಖುಷಿಯಾಗಿರುತ್ತಾರೆ ಅನ್ಕೊಂಡಿದ್ದೀರಾ? ಅದು ಸುಳ್ಳು: ಸಿದ್ಧಾರ್ಥ ಮಲ್ಯ
ವರ್ಚುವಲ್ ಸ್ವರೂಪದಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಿದ ಹೈಕೋರ್ಟ್ ಚಾನ್ಸೆರಿ ವಿಭಾಗದ, ಡೆಪ್ಯೂಟಿ ಮಾಸ್ಟರ್ ಮ್ಯಾಥ್ಯೂ ಮಾರ್ಷ್ ಅವರು, ಯುಬಿಎಸ್ ಬ್ಯಾಂಕ್ಗೆ ನೀಡಬೇಕಾದ 20.4 ಮಿಲಿಯನ್ ಸಾಲ ಮರುಪಾವತಿಗೆ ಮಲ್ಯ ಮತ್ತು ಕುಟುಂಬ ಸದಸ್ಯರಿಗೆ ಇನ್ನಷ್ಟು ಕಾಲಾವಕಾಶ ನೀಡಲು ಯಾವುದೇ ಸಮರ್ಥನೆಯಿಲ್ಲ ಎಂದು ಹೇಳಿದರು.
ಈ ಹಿಂದೆ ಕೋವಿಡ್ ನಿಯಮಗಳ ಕಾರಣದಿಂದಾಗಿ ಮಲ್ಯರನ್ನು ಹೊರಹಾಕಲು UBS ಗೆ ಸಾಧ್ಯವಾಗಿರಲಿಲ್ಲ. ಇಂದಿನ ತೀರ್ಪು ಯುಬಿಎಸ್ಗೆ ಆಸ್ತಿಯನ್ನು ಮರು ಸ್ವಾಧೀನಪಡಿಸಿಕೊಳ್ಳಲು ದಾರಿ ಮಾಡಿಕೊಡುತ್ತದೆ. ಲಂಡನ್ನ ಉತ್ತರದ ಹರ್ಟ್ಫೋರ್ಡ್ಶೈರ್ನಲ್ಲಿರುವ ವಿಸ್ತಾರವಾದ ದೇಶದ ಮನೆ ಸೇರಿದಂತೆ ಮಲ್ಯ ಮತ್ತು ಅವರ ಕುಟುಂಬ ಯುಕೆ ಮತ್ತು ಇತರೆಡೆಗಳಲ್ಲಿ ಹಲವಾರು ಇತರ ಆಸ್ತಿಗಳನ್ನು ಹೊಂದಿದ್ದಾರೆ ಎಂದು ನಂಬಲಾಗಿದೆ.