ಪಾಕಿಸ್ತಾನದ ಲಾಹೋರ್ ಮಾರುಕಟ್ಟೆಯಲ್ಲಿ ಭಾರೀ ಸ್ಫೋಟ: ಕನಿಷ್ಠ 3 ಸಾವು, 20 ಮಂದಿಗೆ ಗಾಯ
ಪಾಕಿಸ್ತಾನದ ಲಾಹೋರ್ ನಗರದ ಪ್ರಸಿದ್ಧ ಅನಾರ್ಕಲಿ ಮಾರುಕಟ್ಟೆಯಲ್ಲಿ ಗುರುವಾರ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ ಮೂವರು ಸಾವಿಗೀಡಾಗಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
Published: 20th January 2022 06:20 PM | Last Updated: 20th January 2022 07:18 PM | A+A A-

ಸ್ಫೋಟ ಸಂಭವಿಸಿದ ಸ್ಥಳ
ಇಸ್ಲಾಮಾಬಾದ್: ಪಾಕಿಸ್ತಾನದ ಲಾಹೋರ್ ನಗರದ ಪ್ರಸಿದ್ಧ ಅನಾರ್ಕಲಿ ಮಾರುಕಟ್ಟೆಯಲ್ಲಿ ಗುರುವಾರ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ ಮೂವರು ಸಾವಿಗೀಡಾಗಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಭಾರತೀಯ ವಸ್ತುಗಳನ್ನು ಮಾರಾಟ ಮಾಡಲು ಪ್ರಖ್ಯಾತಿ ಪಡೆದಿರುವ ಲಾಹೋರ್ ನ ಅನಾರ್ಕಲಿ ಮಾರುಕಟ್ಟೆಯ ಪಾನ್ ಮಂಡಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಮೂವರು ಮೃತಪಟ್ಟಿರುವುದನ್ನು ಲಾಹೋರ್ ಪೊಲೀಸ್ ವಕ್ತಾರ ರಾಣಾ ಆರಿಫ್ ಖಚಿತಪಡಿಸಿದ್ದಾರೆ.
ಇದನ್ನು ಓದಿ: ಐಸಿಸಿ ಪುರುಷರ ಟಿ20 ತಂಡದಲ್ಲಿ ಒಬ್ಬ ಭಾರತೀಯನಿಗೂ ಸ್ಥಾನವಿಲ್ಲ: ಪಾಕಿಸ್ತಾನದ ಬಾಬರ್ ಆಜಂಗೆ ನಾಯಕತ್ವ
ಡಾನ್ ನ್ಯೂಸ್ ಪೇಪರ್ ವರದಿ ಪ್ರಕಾರ, ಸ್ಫೋಟದಿಂದಾಗಿ ಹತ್ತಿರದ ಅಂಗಡಿಗಳು ಮತ್ತು ಕಟ್ಟಡಗಳ ಗಾಜುಗಳು ಪುಡಿಪುಡಿಯಾಗಿವೆ. ಆದರೆ, ಈ ವರೆಗೆ ಯಾವುದೇ ಉಗ್ರ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.
“ಸ್ಫೋಟದ ಸ್ವರೂಪವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಸದ್ಯ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತನಿಖೆ ಮುಂದುವರಿಸಲಾಗಿದೆ ಎಂದು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಡಾ. ಮೊಹಮ್ಮದ್ ಅಬಿದ್ ಅವರು ತಿಳಿಸಿದ್ದಾರೆ.