ಅಫ್ಘಾನ್‍ನಲ್ಲಿ ಪ್ರತಿಭಟನೆ: ಪಾಕಿಸ್ತಾನದ ಅಫ್ಘನ್ ಪ್ರವಾಸ ರದ್ದು; ಸುಳ್ಳು ಹೇಳಿ ಮುಖಭಂಗಕ್ಕೀಡಾದ ಇಮ್ರಾನ್ ಸರ್ಕಾರ
ಈ ಹಿಂದೆ ಮುಂದೂಡಿದ್ದ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಅವರ ಅಫ್ಘಾನಿಸ್ತಾನ ಭೇಟಿಯನ್ನು ಈಗ ರದ್ದುಗೊಳಿಸಲಾಗಿದೆ.
Published: 20th January 2022 09:06 PM | Last Updated: 21st January 2022 01:21 PM | A+A A-

ಇಮ್ರಾನ್ ಖಾನ್
ಇಸ್ಲಾಮಾಬಾದ್: ಈ ಹಿಂದೆ ಮುಂದೂಡಿದ್ದ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಅವರ ಅಫ್ಘಾನಿಸ್ತಾನ ಭೇಟಿಯನ್ನು ಈಗ ರದ್ದುಗೊಳಿಸಲಾಗಿದೆ.
ಯೂಸುಫ್ ಈ ವಾರ ನಿಯೋಗದೊಂದಿಗೆ ಕಾಬೂಲ್‌ಗೆ ಹೋಗಬೇಕಿತ್ತು. ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಮೊಯೀದ್ ಅವರ ಭೇಟಿಯನ್ನು ಮುಂದೂಡಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ ಇಬ್ಬರು ಪಾಕಿಸ್ತಾನಿ ಪತ್ರಕರ್ತರು ಇಮ್ರಾನ್ ಸರ್ಕಾರದ ಹೇಳಿಕೆಯನ್ನು ಬುಡಮೇಲು ಮಾಡಿದ್ದಾರೆ.
ಅಫ್ಘನ್ ಭೇಟಿ ರದ್ದಾಗಿದ್ದು ಏಕೆ?
ಇಬ್ಬರು ಪಾಕಿಸ್ತಾನಿ ಪತ್ರಕರ್ತರಾದ ಕಮರ್ ಚೀಮಾ ಮತ್ತು ಫಖರ್ ಯೂಸುಫ್ ಜಾಯ್, ಇಮ್ರಾನ್ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯದ ಸುಳ್ಳುಗಳ ಸರಮಾಲೆಯನ್ನೇ ಬಹಿರಂಗಪಡಿಸಿದ್ದಾರೆ. ಪತ್ರಕರ್ತರ ಪ್ರಕಾರ, “ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಸೋಮವಾರ ಕಾಬೂಲ್‌ಗೆ ಹೋಗಬೇಕಿತ್ತು.
ಇದನ್ನೂ ಓದಿ: ಜಪಾನ್ ನಲ್ಲಿ ಮೃತ ಮುಸ್ಲಿಂ ವ್ಯಕ್ತಿಯನ್ನು ಸುಟ್ಟಿದ್ದಕ್ಕೆ ಪಾಕಿಸ್ತಾನದಲ್ಲಿ ಕಿಡಿ; ಇಮ್ರಾನ್ ಖಾನ್ ವಿರುದ್ಧ ಆಕ್ರೋಶ!
ಇಸ್ಲಾಮಾಬಾದ್‌ನಿಂದ ಕಾಬೂಲ್ ತಲುಪಲು ಕೇವಲ 25 ನಿಮಿಷಗಳು ಬೇಕು. ಈ ವೇಳೆ ಮೋಯಿದ್ ಅವರು ಅಫ್ಘಾನ್ ಭೇಟಿ ನೀಡುತ್ತಿದ್ದಾರೆ ಎಂಬ ಮಾಹಿತಿ ಅಲ್ಲಿನ ಪ್ರಜೆಗಳಿಗೆ ದೊರೆತಿದ್ದರಿಂದ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ಮಾಡಲು ಆರಂಭಿಸಿದ್ದಾರೆ. ಈ ಎಲ್ಲ ಮಾಹಿತಿಗಳು ಪಾಕಿಸ್ತಾನದ ಭದ್ರತಾ ಸಲಹೆಗಾರ ಮೊಯೀದ್ ಅವರಿಗೆ ದೊರೆತಿದ್ದರಿಂದ ಈ ಸಂದರ್ಭದಲ್ಲಿ ಅಫ್ಘಾನ್ ಭೇಟಿ ಸರಿ ಅಲ್ಲ ಎಂದು ಅರಿತು, ಪಾಕಿಸ್ತಾನ ಪ್ರವಾಸವನ್ನು ರದ್ದು ಮಾಡಿದೆ.
ಅಲ್ಲದೆ, ಪಾಕಿಸ್ತಾನ ಪ್ರವಾಸವನ್ನು ರದ್ದು ಮಾಡಿರುವುದಕ್ಕೆ ಅಫ್ಘಾನಿಸ್ತಾನದಲ್ಲಿ ಹವಾಮಾನ ಸರಿ ಇಲ್ಲ ಎಂಬ ಸಬೂಬು ಹೇಳಿದೆ. ಆದರೆ, ಪಾಕ್ ಸರಕಾರದ ಹೇಳಿಕೆ ಹಿಂದಿನ ಅಸಲಿ ಸತ್ಯವನ್ನು ಪತ್ರಕರ್ತರು ಈ ಮೂಲಕ ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಗಾಢ ಸಂಬಂಧ ಅಂತ್ಯವಾಗಿದೆ ಎಂದು ಇಬ್ಬರು ಪತ್ರಕರ್ತರು ವಿಶ್ಲೇಷಣೆ ಮಾಡಿದ್ದಾರೆ.