ಲಂಕಾದ ತಮಿಳು ಪಕ್ಷಗಳು ಪ್ರಧಾನಿ ಮೋದಿ ಸಹಾಯ ಕೇಳಿದ್ದಕ್ಕೆ ಶ್ರೀಲಂಕಾ ಸಚಿವ ಕೆಂಡಾಮಂಡಲ!
ಸಾಂವಿಧಾನಿಕವಾಗಿ ಸಿಗಬೇಕಾಗಿರುವ ಬೇಡಿಕೆಗಳನ್ನು ಶ್ರೀಲಂಕಾ ಸರ್ಕಾರ ಈಡೇರಿಸುತ್ತಿಲ್ಲ ಎಂದು ಅಲ್ಲಿನ ತಮಿಳರು ಭಾರತದ ಪ್ರಧಾನಿಗೆ ಪತ್ರ ಬರೆದಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಶ್ರೀಲಂಕಾ ಸಚಿವ, ತಮಿಳು ಬೆಂಬಲ ಇರುವ ರಾಜಕೀಯ ಪಕ್ಷಗಳ ವಿರುದ್ಧ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
Published: 20th January 2022 03:37 PM | Last Updated: 20th January 2022 06:14 PM | A+A A-

ಮಹಿಂದ ರಾಜಪಕ್ಸೆ-ಮೋದಿ
ಕೊಲಂಬೊ: ಸಾಂವಿಧಾನಿಕವಾಗಿ ಸಿಗಬೇಕಾಗಿರುವ ಬೇಡಿಕೆಗಳನ್ನು ಶ್ರೀಲಂಕಾ ಸರ್ಕಾರ ಈಡೇರಿಸುತ್ತಿಲ್ಲ ಎಂದು ಅಲ್ಲಿನ ತಮಿಳರು ಭಾರತದ ಪ್ರಧಾನಿಗೆ ಪತ್ರ ಬರೆದಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಶ್ರೀಲಂಕಾ ಸಚಿವ, ತಮಿಳು ಬೆಂಬಲ ಇರುವ ರಾಜಕೀಯ ಪಕ್ಷಗಳ ವಿರುದ್ಧ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಶ್ರೀಲಂಕಾದ ಇಂಧನ ಸಚಿವ ಉದಯ್ ಗಮ್ಮನಪಿಲಾ ಬೆಳಗ್ಗೆ ಕ್ಯಾಬಿನೆಟ್ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ 'ಈ ವಿಷಯವನ್ನು ಶ್ರೀಲಂಕಾ ಅಧ್ಯಕ್ಷರ ಮುಂದೆ ಪ್ರಸ್ತಾಪಿಸಬೇಕೇ ಹೊರತು ಭಾರತದ ಪ್ರಧಾನಿ ಬಳಿ ಅಲ್ಲ. ಸಹಾಯಕ್ಕಾಗಿ ಮನವಿ ಮಾಡಿದ ಪಕ್ಷಗಳಲ್ಲಿ ಟಿಎನ್‌ಎ(ತಮಿಳು ರಾಷ್ಟ್ರೀಯ ಒಕ್ಕೂಟ) ಹೆಸರನ್ನು ಪ್ರಸ್ತಾಪಿಸಿದ್ದಾರೆ.
'ನಮ್ಮ ತಮಿಳು ಪಕ್ಷಗಳಿಗೆ 13ನೇ ತಿದ್ದುಪಡಿಯ ಅನುಷ್ಠಾನದ ಬಗ್ಗೆ ಯಾವುದೇ ಕಾಳಜಿ ಅಥವಾ ಆತಂಕಗಳಿದ್ದರೆ ಅವರು ತಮ್ಮ ಕಳವಳವನ್ನು ಭಾರತದ ಪ್ರಧಾನಿ ಬದಲಿಗೆ ನಮ್ಮ ಚುನಾಯಿತ ಅಧ್ಯಕ್ಷರಿಗೆ ತಿಳಿಸಬೇಕು. ಏಕೆಂದರೆ ನಾವು ಸಾರ್ವಭೌಮ ರಾಷ್ಟ್ರ ಮತ್ತು ಭಾರತದ ಭಾಗವಲ್ಲ” ಎಂದು ಅವರು ಹೇಳಿದರು. ನಮ್ಮ ತಮಿಳು ಸಹೋದರರಿಗೆ 13 ನೇ ತಿದ್ದುಪಡಿಯ ಅನುಷ್ಠಾನದ ಬಗ್ಗೆ ಏನಾದರೂ ಸಮಸ್ಯೆ ಇದ್ದರೆ, ಅವರು ಹೊರಗಿನವರ ಬದಲಿಗೆ ನಮ್ಮ ಚುನಾಯಿತ ಸರ್ಕಾರದೊಂದಿಗೆ ಮಾತನಾಡಬೇಕಿತ್ತು ಎಂದು ತಿಳಿಸಿದರು.
ಇದನ್ನೂ ಓದಿ: ಶ್ರೀಲಂಕಾಗೆ 6,600 ಕೋಟಿ ರೂ. ಸಾಲದ ನೆರವು: ಆರ್ಥಿಕ ಸಂಕಷ್ಟದಲ್ಲಿರುವ ಮಿತ್ರರಾಷ್ಟ್ರದ ಕೈಹಿಡಿದ ಭಾರತ
ಟಿಎನ್‌ಎ ನಿಯೋಗದ ನೇತೃತ್ವ ವಹಿಸಿದ್ದ ಪಕ್ಷದ ನಾಯಕ ಆರ್.ಸಂಪಂಧನ್ ಇತ್ತೀಚೆಗೆ ಕೊಲಂಬೊದಲ್ಲಿ ಭಾರತೀಯ ಹೈಕಮಿಷನರ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಪಕ್ಷವು ಪ್ರಧಾನಿ ಮೋದಿಯವರಿಗೆ ಬರೆದ ಪತ್ರವನ್ನು ಭಾರತೀಯ ಹೈಕಮಿಷನರ್‌ಗೆ ಹಸ್ತಾಂತರಿಸಿತ್ತು.
ಶ್ರೀಲಂಕಾದ ತಮಿಳರನ್ನು ಪ್ರತಿನಿಧಿಸುವ ಪಕ್ಷಗಳು ತಮ್ಮ ಪತ್ರದಲ್ಲಿ ಶ್ರೀಲಂಕಾ ಸಂವಿಧಾನದ 13ನೇ ತಿದ್ದುಪಡಿಯನ್ನು ಸಂಪೂರ್ಣವಾಗಿ ಜಾರಿಗೆ ತರಲು ಕೋರಿವೆ. ಶ್ರೀಲಂಕಾದ 13ನೇ ಸಾಂವಿಧಾನಿಕ ತಿದ್ದುಪಡಿಯು ತಮಿಳರಿಗೆ ಸರಿಯಾದ ರಾಜಕೀಯ ಪ್ರಾತಿನಿಧ್ಯವನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಅಲ್ಲಿನ 7 ರಾಜಕೀಯ ಪಕ್ಷಗಳು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದವು. ಆದರೆ, ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಶ್ರೀಲಂಕಾ ಇಂಧನ ಸಚಿವ ಉದಯ್ ಗಮ್ಮನಪಿಲ ಟೀಕೆ ವ್ಯಕ್ತಪಡಿಸಿದ್ದಾರೆ.