
ಜಸಿಂದಾ ಅರ್ಡರ್ನ್
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರಧಾನಮಂತ್ರಿ ಜಸಿಂದಾ ಅರ್ಡರ್ನ್ ಅವರು ತಮ್ಮ ವಿವಾಹವನ್ನು ರದ್ದು ಮಾಡಿದ್ದಾರೆ. ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಳ ಕಾಣುತ್ತಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಜಸಿಂದಾ ಹೇಳಿದ್ದಾರೆ. ಆ ಮೂಲಕ ದೇಶದ ಜನತೆಗೆ ನಾವೆಲ್ಲರೂ ಒಗ್ಗಟ್ಟಾಗಿ ಪ್ರಸ್ತುತ ಎದುರಾಗಿರುವ ಸಂಕಷ್ಟವನ್ನು ಎದುರಿಸಬೇಕು ಎನ್ನುವ ಸಂದೇಶ ಸಾರಿದ್ದಾರೆ.
ಇದನ್ನೂ ಓದಿ: ಹಿಟ್ಲರ್ ನಿಮ್ಮನ್ನು ಆವತ್ತೇ ಕೊಂದು ಮುಗಿಸಬೇಕಿತ್ತು: ಯಹೂದಿ ಬಾಲಕನಿಗೆ ಥೂ ಎಂದು ಉಗಿದ ಅಮೆರಿಕನ್ ಯುವತಿ
ದೇಶದಲ್ಲಿ ಕೊರೊನಾ ಕಾರಣದಿಂದ ಅಸಂಖ್ಯ ಮಂದಿಯ ವಿವಾಹ ರದ್ದಾಗಿವೆ. ಕಾನೂನು ಪಾಲನೆಗೋಸ್ಕರ ತಮ್ಮ ಖಾಸಗಿ ಕಾರ್ಯಕ್ರಮ ರದ್ದು ಮಾಡಿರುವ ಅವರಿಗೆ ನಾನು ಕೂಡಾ ಬೆಂಬಲ ನೀಡುತ್ತೇನೆ ಎಂದವರು ಹೇಳಿದ್ದಾರೆ.
ಇದನ್ನೂ ಓದಿ: ಶ್ವೇತಭವನ: ಸೇನಾ ಕಚೇರಿ ನಿರ್ದೇಶಕ, ಭಾರತೀಯ ಮೂಲದ ಮಜು ವರ್ಗೀಸ್ ಉನ್ನತ ಹುದ್ದೆಗೆ ರಾಜಿನಾಮೆ
ದೇಶದಲ್ಲಿ ಇತ್ತೀಚಿಗೆ 9 ಓಮಿಕ್ರಾನ್ ಪ್ರಕರಣಗಳು ಕಂಡುಬಂದಿದ್ದವು. ತನಿಖೆ ಕೈಗೊಂಡಾಗ ಅವರೆಲ್ಲರೂ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುದ್ದಿ ಬಹಿರಂಗವಾಗಿತ್ತು.
ಇದನ್ನೂ ಓದಿ: ವಿಶ್ವ ಆರ್ಥಿಕ ಮಂಡಳಿಗೆ ಪತ್ರ: ನೂರಕ್ಕೂ ಹೆಚ್ಚು ಕೋಟ್ಯಧಿಪತಿಗಳಿಂದ ವಿಲಕ್ಷಣ ಮನವಿ!
ಜಸಿಂದಾ ಅವರು ತಮ್ಮ ಬಹುಕಾಲದ ಗೆಳೆಯ ಕ್ಲಾರ್ಕ್ ಗೇಫರ್ಡ್ ಅವರನ್ನು ವಿವಾಹವಾಗಲಿದ್ದರು. ಕ್ಲಾರ್ಕ್ ಅವರು ಟಿವಿ ನಿರೂಪಕ ಹಾಗೂ ರೇಡಿಯೊ ನಿರೂಪಕರಾಗಿ ಜನಪ್ರಿಯತೆ ಗಳಿಸಿದ್ದಾರೆ.
ಇದನ್ನೂ ಓದಿ: ಕುವೈತ್: ಕೊಟ್ಯಂತರ ರೂ. ಕಂಪನಿ ಹಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕನ್ನಡಿಗ ನೌಕರ!