
ಅಲೆಕ್ಸಿ ನವಾಲ್ನಿ
ಮಾಸ್ಕೊ: ರಷ್ಯಾ ಅಧ್ಯಕ್ಷ ಪುತಿನ್ ಅವರ ರಾಜಕೀಯ ವಿರೋಧಿ, ಬಂಧಿತ ವಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಅವರನ್ನು ಉಗ್ರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.
ಇದನ್ನೂ ಓದಿ: ಯುದ್ಧ ಸನ್ನದ್ಧ ಸ್ಥಿತಿಯಲ್ಲಿ 8,500 ಸೇನಾಪಡೆಗಳು: ಅಮೆರಿಕ ರಕ್ಷಣಾ ಸಚಿವಾಲಯ ಆದೇಶ
ಹಳೆಯ ನ್ಯಾಯಾಲಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನವಾಲ್ನಿ ಜೈಲು ಶಿಕ್ಷೆಗೊಳಗಾಗಿದ್ದಾರೆ. ಇದೀಗ ಅವರನ್ನು ಹಾಗೂ ಅವರ ಬೆಂಬಲಿಗರನ್ನು ಉಗ್ರರ ಪಟ್ಟಿಗೆ ಸೇರಿಸುವ ಮೂಲಕ ಪುತಿನ್ ರಾಜಕೀಯ ಪ್ರತೀಕಾರ ಕೈಗೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಉಕ್ರೇನ್ ಸರ್ಕಾರ ಬದಲಿಸಲು ರಷ್ಯಾ ಪ್ರಯತ್ನ: ಬ್ರಿಟನ್ ಗಂಭೀರ ಆರೋಪ
ನವಾಲ್ನಿ ಅವರು ವಿಷಪ್ರಾಶನದಿಂದ ಬದುಕಿ ಬಂದಿದ್ದರು. ಪುತಿನ್ ತಮ್ಮ ಕೊಲೆಗೆ ಸಂಚು ನಡೆಸಿದ್ದಾರೆ ಎಂದು ನವಾಲ್ನಿ ಗಂಭೀರ ಆರೋಪ ಮಾಡಿದ್ದರು. ಕಳೆದ ವರ್ಷ ಜರ್ಮನಿಯಲ್ಲಿ ಚಿಕಿತ್ಸೆ ಪಡೆದು ಅವರು ದೇಶಕ್ಕೆ ಮರಳಿದ ಸಂದರ್ಭ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಭಾರತ- ರಷ್ಯಾ ನಡುವಣ ಸೇನಾ ಸಹಕಾರ ಒಪ್ಪಂದ ಎಲ್ಲಾ ದೇಶಗಳಿಗೂ ಮೀರಿದ್ದು: ಅಧ್ಯಕ್ಷ ಪುತಿನ್