ಅಫ್ಘಾನಿಸ್ತಾನ ಸ್ಥಳಾಂತರ ಕಾರ್ಯಾಚರಣೆ: ಮನುಷ್ಯರಿಗಿಂತ ಸಾಕು ಪ್ರಾಣಿಗಳ ಸ್ಥಳಾಂತರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದ ಬ್ರಿಟನ್ ಪ್ರಧಾನಿ
ಸ್ಥಳಾಂತರ ಕಾರ್ಯಾಚರಣೆ ಸಂದರ್ಭ ನಡೆದ ಬೋರಿಸ್ ಜಾನ್ಸನ್ ಇಮೇಲ್ ಸಂವಹನದ ಮಾಹಿತಿ ಸೋರಿಕೆಯಾಗಿದೆ.
Published: 28th January 2022 12:45 PM | Last Updated: 28th January 2022 12:45 PM | A+A A-

ಬೋರಿಸ್ ಜಾನ್ಸನ್
ಲಂಡನ್: ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾಗುತ್ತಿದ್ದಂತೆಯೇ ನಡೆದ ಸ್ಥಳಾಂತರ ಕಾರ್ಯಾಚರಣೆ, ಆ ಸಂದರ್ಭ ಉಂಟಾದ ಅವಾಂತರಗಳು ಇಡೀ ಜಗತ್ತಿನ ಗಮನ ಸೆಳೆದಿತ್ತು. ಇದೀಗ ಸ್ಥಳಾಂತರ ಕಾರ್ಯಾಚರಣೆ ಕುರಿತಾದ ವಿವಾದಾತ್ಮಕ ಮಾಹಿತಿಯೊಂದು ಬ್ರಿಟನ್ ನಿಂದ ಹೊರಬಿದ್ದಿದೆ.
ಇದನ್ನೂ ಓದಿ: ಆಗಸ್ಟ್ 31ರೊಳಗೆ ಸ್ಥಳಾಂತರ ಕಾರ್ಯ ಪೂರ್ಣಗೊಳಿಸಲು, ನಾಗರಿಕರ ರಕ್ಷಣೆಗೆ ನಮ್ಮ ಮೊದಲ ಆದ್ಯತೆ: ಅಮೆರಿಕ
ಅಮೆರಿಕ ಮತ್ತು ಬ್ರಿಟನ್ ಎರಡೂ ದೇಶಗಳು ಸ್ಥಳಾಂತರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಈ ಸಂದರ್ಭ ಯುದ್ಧಗ್ರಸ್ಥ ಅಫ್ಘಾನಿಸ್ತಾನದಿಂದ ಮನುಷ್ಯರನ್ನು ಸ್ಥಳಾಂತರ ಮಾಡುವುದಕ್ಕಿಂತ ಹೆಚ್ಚಾಗಿ ಬೋರಿಸ್ ಜಾನ್ಸನ್ ಸರ್ಕಾರ ಸಾಕುಪ್ರಾಣಿಗಳ ಸ್ಥಳಾಂತರಕ್ಕೆ ಹೆಚ್ಚು ಒತ್ತು ನೀಡಿದ್ದಾಗಿ ಮಾಹಿತಿ ಹೊರಬಂದಿದೆ.
ಇದನ್ನೂ ಓದಿ: ತಾಲಿಬಾನ್ ಕಮಾಂಡರ್ ಅಫ್ಘಾನಿಸ್ತಾನದ ನೂತನ ಅಧ್ಯಕ್ಷ: ಶಾಂತಿಯುತವಾಗಿ ಅಧಿಕಾರ ಬಿಟ್ಟುಕೊಟ್ಟ ಅಶ್ರಫ್ ಘನಿ
ಬೋರಿಸ್ ಜಾನ್ಸನ್ ಅವರ ಇಮೇಲ್ ಗಳಿಂದ ಈ ಸಂಗತಿ ತಿಳಿದುಬಂದಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಅಫ್ಘಾನಿಸ್ತಾನದಲ್ಲಿ ಬ್ರಿಟನ್ ದೇಶದ ಮಾಜಿ ಸೈನಿಕನೊಬ್ಬ ಪ್ರಾಣಿಗಳಿಗೆ ಆಶ್ರಯ ನೀಡುವ ಎನ್ ಜಿ ಒ ನಡೆಸುತ್ತಿದ್ದ.
ಇದನ್ನೂ ಓದಿ: ಅಗತ್ಯಬಿದ್ದರೆ ತಾಲಿಬಾನಿಗಳ ಜೊತೆ ಕೆಲಸ ಮಾಡುವೆ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
ಸ್ಥಳಾಂತರ ಕಾರ್ಯಾಚರಣೆ ಸಂದರ್ಭ ಎನ್ ಜಿ ಒ ಕಾರ್ಯಕರ್ತರು ಮತ್ತು ಅಲ್ಲಿನ ಪ್ರಾಣಿಗಳ ಸ್ಥಳಾಂತರಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ವಿಶೇಷ ಮುತುವರ್ಜಿ ವಹಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಅತ್ಯಂತ ಅಪಾಯದಲ್ಲಿ ಕಾಬೂಲ್ ವಿಮಾನ ನಿಲ್ದಾಣ: ಉಗ್ರ ದಾಳಿಯ ಎಚ್ಚರಿಕೆ ನೀಡಿದ ಬ್ರಿಟನ್