
ಮೃತ ಭಾರತೀಯ ಕುಟುಂಬ
ನ್ಯೂಯಾರ್ಕ್: ಕೆನಡಾ- ಅಮೆರಿಕ ಗಡಿಯಿಂದ ಸುಮಾರು 12 ಮೀಟರ್ ದೂರದಲ್ಲಿ ಕಂಡುಬಂದಿದ್ದ ಭಾರತೀಯ ಅಕ್ರಮ ವಲಸಿಗ ಕುಟುಂಬದ ಮೃತದೇಹಗಳ ಗುರುತು ಪತ್ತೆಯಾಗಿದೆ.
ಇದನ್ನೂ ಓದಿ: ಅಮೆರಿಕಾ- ಕೆನಡಾ ಗಡಿಯಲ್ಲಿ ಮೈ ಕೊರೆಯುವ ಚಳಿ: ಮಗು ಸೇರಿ ನಾಲ್ವರು ಭಾರತೀಯರ ಸಾವು; ಭಾರತ ಕಳವಳ
ಮೃತರನ್ನು ಗುಜರಾತಿನ ಜಗದೀಶ್ ಬಲದೇವ್ ಭಾಯ್ ಪಟೇಲ್(39) ವೈಶಾಲಿ ಬೆನ್ ಜಗದೀಶ್ ಕುಮಾರ್ ಪಟೇಲ್ (37) ವಿಹಂಗಿ ಜಗದೀಶ್ ಕುಮಾರ್ ಪಟೇಲ್ (11) ಮತ್ತು ಧಾರ್ಮಿಕ್ ಜಗದೀಶ್ ಕುಮಾರ್ ಪಟೇಲ್ (3) ಎಂದು ಪತ್ತೆಹಚ್ಚಲಾಗಿದೆ.
ಇದನ್ನೂ ಓದಿ: ಅಮೆರಿಕ: ಬಂದೂಕಿಗೂ ಬಂತು ಇನ್ಷೂರೆನ್ಸ್; ಗುಂಡೇಟು ತಗುಲಿದವರ ಕುಟುಂಬಕ್ಕೆ ವಿಮಾ ಪರಿಹಾರ
ಕೆನಡಾ ಅಧಿಕಾರಿಗಳು ಭಾರತೀಯ ಹೈಕಮಿಷನ್ ಜೊತೆ ಸಂಪರ್ಕ ಸಾಧಿಸಿ ಮಾಹಿತಿ ನೀಡಿದೆ. ಅದರನ್ವಯ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಮೃತರ ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಇದನ್ನೂ ಓದಿ: ಪುತಿನ್ ರಾಜಕೀಯ ವಿರೋಧಿ, ವಿಪಕ್ಷ ನಾಯಕ ಮತ್ತು ಬೆಂಬಲಿಗರು ಉಗ್ರರ ಪಟ್ಟಿಗೆ ಸೇರ್ಪಡೆ: ರಷ್ಯಾದಲ್ಲಿ ನಿಲ್ಲದ ರಾಜಕೀಯ ಪ್ರತೀಕಾರ
ನಾಲ್ವರ ಮೃತದೇಹಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ಸಾವಿನ ಕಾರಣ ತಿಳಿದುಬಂದಿದೆ. ವೈದ್ಯಕೀಯ ವರದಿಯ ಪ್ರಕಾರ ತೀವ್ರವಾದ ಚಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಕೆನಡಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 56 ಭಾರತೀಯ ಮೀನುಗಾರರ ಬಿಡುಗಡೆಗೆ ಶ್ರೀಲಂಕಾ ಕೋರ್ಟ್ ಆದೇಶ