ಮತ್ತೊಂದು ಓಮಿಕ್ರಾನ್ ರೂಪಾಂತರ ಉಪತಳಿ ವೈರಸ್ ಪತ್ತೆ: ಹೈ ಅಲರ್ಟ್ ನಲ್ಲಿ ವಿಜ್ಞಾನಿಗಳು
ಜಗತ್ತಿನಾದ್ಯಂತ ವ್ಯಾಪಕ ಭೀತಿಗೆ ಕಾರಣವಾಗಿರುವ ಓಮಿಕ್ರಾನ್ ರೂಪಾಂತರದ ಅಬ್ಬರವೇ ಇನ್ನೂ ಕಡಿಮೆಯಾಗಿಲ್ಲ.. ಅದಾಗಲೇ ಅದರದೇ ಮತ್ತೊಂದು ಉಪ ತಳಿ ವೈರಸ್ ತನ್ನ ಆರ್ಭಟ ಆರಂಭಿಸಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
Published: 31st January 2022 12:16 PM | Last Updated: 31st January 2022 01:35 PM | A+A A-

ಹೊಸ ರೂಪಾಂತರಿ ವೈರಸ್
ಲಂಡನ್: ಜಗತ್ತಿನಾದ್ಯಂತ ವ್ಯಾಪಕ ಭೀತಿಗೆ ಕಾರಣವಾಗಿರುವ ಓಮಿಕ್ರಾನ್ ರೂಪಾಂತರದ ಅಬ್ಬರವೇ ಇನ್ನೂ ಕಡಿಮೆಯಾಗಿಲ್ಲ.. ಅದಾಗಲೇ ಅದರದೇ ಮತ್ತೊಂದು ಉಪ ತಳಿ ವೈರಸ್ ತನ್ನ ಆರ್ಭಟ ಆರಂಭಿಸಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಹೌದು.. ಕೊರೊನಾ ಓಮಿಕ್ರಾನ್ನ ಹೊಸ ರೂಪಾಂತರವು ಹೊರಹೊಮ್ಮಿದ್ದು, ಜೊತೆಗೆ ಹೊಸ ಹೊಸ ವೈರಸ್ಗಳು ಹುಟ್ಟಿಕೊಳ್ಳುತ್ತಿವೆ. ಇದೇ ವೇಳೆ ಮತ್ತೊಂದು ಹೊಸ ವೈರಸ್ ಕಾಣಿಸಿಕೊಂಡಿದೆ. ಓಮಿಕ್ರಾನ್ ವೈರಸ್ ತಳಿಯ ಉಪತಳಿಯನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದು ಇದಕ್ಕೆ BA2 ಎಂದು ಗುರುತಿಸಿದ್ದಾರೆ.
ಮೂಲಗಳ ಪ್ರಕಾರ ಓಮಿಕ್ರಾನ್ ಮೂಲ ರೂಪಾಂತರಕ್ಕಿಂತ BA2 ರೂಪಾಂತರವು ಹೆಚ್ಚು ವ್ಯಾಪಕವಾಗಿ ಹರಡುತ್ತದೆ. ಕೆಲವು ಅನುವಂಶಿಕ ಲಕ್ಷಣಗಳಿಂದ ಈ ವೈರಸ್ ಸೋಂಕನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ. ಈ ಓಮಿಕ್ರಾನ್ ರೂಪಾಂತರದ BA2 ಪ್ರಕರಣಗಳು ಈಗಾಗಲೇ 54 ದೇಶಗಳಲ್ಲಿ ವರದಿಯಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಓಮಿಕ್ರಾನ್ ನಂತರ ಆತಂಕ ಹೆಚ್ಚಿಸಿದ ನಿಯೋಕೋವ್ ರೂಪಾಂತರಿ!
ಈ BA2 ರೂಪಾಂತರದ ಪ್ರಕರಣಗಳು ಈಗಾಗಲೇ ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ವರದಿಯಾಗಿದೆ. ಪ್ರಸ್ತುತ ಡೆನ್ಮಾರ್ಕ್ನಲ್ಲಿ ಬರುತ್ತಿರುವ ಹೆಚ್ಚಿನ ಪ್ರಕರಣಗಳು BA2 ರೂಪಾಂತರವಾಗಿದೆ. ಇದಲ್ಲದೆ, ಸಿಂಗಾಪುರದಲ್ಲಿ ಈ ರೂಪಾಂತರದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಬಿಎ2 ರೂಪಾಂತರವು ಓಮಿಕ್ರಾನ್ ರೂಪಾಂತರಕ್ಕಿಂತ ಒಂದೂವರೆ ಪಟ್ಟು ವೇಗವಾಗಿ ಹರಡುವ ಗುಣವನ್ನು ಹೊಂದಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಲಸಿಕೆಯ ಪರಿಣಾಮಕಾರಿತ್ವವು BA1 ಮತ್ತು BA2 ರೂಪಾಂತರಗಳ ಮೇಲೆ ತನ್ನ ಪ್ರಭಾವವನ್ನ ತೋರಬಲ್ಲದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.