ಪಾಕಿಸ್ತಾನ: 'ಜೀಸಸ್ ಸರ್ವೋಚ್ಚ' ಎಂದಿದ್ದ ವ್ಯಕ್ತಿಗೆ ಗಲ್ಲು!

ಸುಮಾರು ಐದು ವರ್ಷಗಳ ಹಿಂದೆ ಧರ್ಮನಿಂದೆಯ ಆರೋಪದ ಮೇಲೆ ಕ್ರಿಶ್ಚಿಯನ್ ಮೆಕ್ಯಾನಿಕ್‌ಗೆ ಪಾಕಿಸ್ತಾನದ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.
ವ್ಯಕ್ತಿಗೆ ಮರಣ ದಂಡನೆ
ವ್ಯಕ್ತಿಗೆ ಮರಣ ದಂಡನೆ

ಇಸ್ಲಾಮಾಬಾದ್: ಸುಮಾರು ಐದು ವರ್ಷಗಳ ಹಿಂದೆ ಧರ್ಮನಿಂದೆಯ ಆರೋಪದ ಮೇಲೆ ಕ್ರಿಶ್ಚಿಯನ್ ಮೆಕ್ಯಾನಿಕ್‌ಗೆ ಪಾಕಿಸ್ತಾನದ ನ್ಯಾಯಾಲಯವು ಮರಣದಂಡನೆ ವಿಧಿಸಿದೆ. ತನ್ನ ಸೇವೆಗಳಿಗೆ ಹಣ ಪಾವತಿಸುವ ಬಗ್ಗೆ ಗ್ರಾಹಕನೊಂದಿಗೆ ಜಗಳವಾಡಿದ ನಂತರ ಅಶ್ಫಾಕ್ ಮಸಿಹ್ ಅವರನ್ನು ಜೂನ್ 2017ರಲ್ಲಿ ಬಂಧಿಸಲಾಗಿತ್ತು.

ಗ್ಯಾರೀಜ್ ಇಟ್ಟುಕೊಂಡಿದ್ದ ಮಸಿಹ್ ಜೂನ್ 2017ರಲ್ಲಿ ಲಾಹೋರ್‌ನಲ್ಲಿ ವ್ಯಕ್ತಿಯೊಬ್ಬನ ಬೈಕನ್ನು ರಿಪೇರಿ ಮಾಡಿದ್ದ. ವಾಹನ ರಿಪೇರಿ ಮಾಡಿದ ಬಳಿಕ ಹಣ ಪಾವತಿ ಮಾಡಲು ಕೇಳಿದ್ದಾನೆ. ಆದರೆ ಗ್ರಾಹಕ ಸಂಪೂರ್ಣ ಹಣ ಪಾವತಿಸಲಿಲ್ಲ. ನಾನೊಬ್ಬ ಧಾರ್ಮಿಕ ವ್ಯಕ್ತಿ. ಹೀಗಾಗಿ ನನಗೆ ರಿಯಾಯಿತಿ ನೀಡಬೇಕೆಂದು ಮುಸ್ಲಿಂ ಗ್ರಾಹಕ ಕೇಳಿದ್ದಾನೆ.

ಆದರೆ ಮಸಿಹ್ ನಿರಾಕರಿಸಿ ತಾನು ಕ್ರಿಸ್ತನನ್ನು ನಂಬುತ್ತೇನೆ. ಕ್ರಿಶ್ಚಿಯನ್ನರಿಗೆ ಜೀಸಸ್ ಸರ್ವೋಚ್ಚ ಎಂದು ಹೇಳಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ಕೂಡಲೇ ಸ್ಥಳದಲ್ಲಿ ಗುಂಪು ಸೇರಿ ಪ್ರವಾದಿ ಮುಹಮ್ಮದ್ ಅವರನ್ನು ಮಸಿಹ್  ಅಗೌರವಿಸಿದ್ದಾನೆ ಎಂದು ಆರೋಪಿಸಿದರು.

ಕೂಡಲೇ, ಪೊಲೀಸರು ಸ್ಥಳಕ್ಕೆ ಆಗಮಿಸಿ, ಮಸಿಹ್‌ನನ್ನು ಬಂಧಿಸಿ ಆತನ ವಿರುದ್ಧ ಧರ್ಮನಿಂದನೆ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ. 2019ರಿಂದ ಪ್ರಕರಣವು ಅನೇಕ ಬಾರಿ ಮುಂದೂಡಿಕೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com