ಕೆನಡಾ: 1985ರ ಏರ್ ಇಂಡಿಯಾ ಬಾಂಬ್ ದಾಳಿಯ ಶಂಕಿತ ಗುಂಡೇಟಿನಿಂದ ಸಾವು

331 ಜನರ ಸಾವಿಗೆ ಕಾರಣವಾದ 1985ರ ಏರ್ ಇಂಡಿಯಾ ಬಾಂಬ್ ಸ್ಫೋಟದಲ್ಲಿ ಖುಲಾಸೆಗೊಂಡ ಶಂಕಿತನನ್ನು ಪಶ್ಚಿಮ ಕೆನಡಾದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ರಿಪುದಮನ್ ಸಿಂಗ್ ಮಲಿಕ್
ರಿಪುದಮನ್ ಸಿಂಗ್ ಮಲಿಕ್

ಒಟ್ಟಾವಾ: 331 ಜನರ ಸಾವಿಗೆ ಕಾರಣವಾದ 1985ರ ಏರ್ ಇಂಡಿಯಾ ಬಾಂಬ್ ಸ್ಫೋಟದಲ್ಲಿ ಖುಲಾಸೆಗೊಂಡ ಶಂಕಿತನನ್ನು ಪಶ್ಚಿಮ ಕೆನಡಾದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಸಿಖ್ ಪ್ರತ್ಯೇಕತಾವಾದಿ ಖಲಿಸ್ತಾನ್ ಚಳವಳಿಯ ಒಂದು ಕಾಲದ ಬೆಂಬಲಿಗ ರಿಪುದಮನ್ ಸಿಂಗ್ ಮಲಿಕ್, 2005ರಲ್ಲಿ ಏರ್ ಇಂಡಿಯಾ ಸಾಮೂಹಿಕ ಹತ್ಯೆಯ ಸಂಚಿನಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡಿದ್ದ. ಇನ್ನು ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ಪ್ರದೇಶದಲ್ಲಿ ಅವರ ಬಟ್ಟೆ ವ್ಯಾಪಾರದ ಅಂಗಡಿಯ ಹೊರಗೆ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ.

ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ ಮೃತನ ಹೆಸರನ್ನು ದೃಢೀಕರಿಸುವುದಿಲ್ಲ. ಆದರೆ ಒಬ್ಬ ವ್ಯಕ್ತಿ ಗುಂಡೇಟಿನ ದಾಳಿಯಲ್ಲಿ ಬಲಿಯಾಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಗುಂಡಿನ ದಾಳಿ ನಡೆಸಿದ ಶೂಟರ್‌ಗಳು ತಪ್ಪಿಸಿಕೊಂಡಿದ್ದು ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ.

ಐರ್ಲೆಂಡ್‌ನ ಕರಾವಳಿಯಲ್ಲಿ ಏರ್ ಇಂಡಿಯಾ ಫ್ಲೈಟ್ 182ರ ಬಾಂಬ್ ಸ್ಫೋಟದಲ್ಲಿ ಎಲ್ಲಾ 329 ಪ್ರಯಾಣಿಕರು ಮತ್ತು ಸಿಬ್ಬಂದಿ ಮೃತಪಟ್ಟಿದ್ದರು. ಇದು ಯುನೈಟೆಡ್ ಸ್ಟೇಟ್ಸ್ ನಲ್ಲಿ ಸೆಪ್ಟೆಂಬರ್ 11ರ ದಾಳಿಗೂ ಮೊದಲು  ನಡೆದಿದ್ದ ವಾಯುಗಾಮಿ ಭಯೋತ್ಪಾದನೆಯ ಅತ್ಯಂತ ಮಾರಕ ಕೃತ್ಯವಾಗಿತ್ತು. ಜಪಾನ್‌ನ ನರಿಟಾ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಬಾಂಬ್ ಸ್ಫೋಟಗೊಂಡಿದ್ದರಿಂದ ಏರ್ ಇಂಡಿಯಾ ವಿಮಾನಕ್ಕೆ ಸರಕು ತುಂಬುತ್ತಿದ್ದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದರು.

ಎರಡೂ ಸೂಟ್‌ಕೇಸ್ ಬಾಂಬ್‌ಗಳನ್ನು ನಂತರ ದೊಡ್ಡ ಸಿಖ್ ವಲಸಿಗ ಜನಸಂಖ್ಯೆಯ ನೆಲೆಯಾದ ವ್ಯಾಂಕೋವರ್‌ನಲ್ಲಿ ಪತ್ತೆ ಮಾಡಲಾಯಿತು. ಬಾಂಬ್‌ಗಳನ್ನು ತಯಾರಿಸಿದ್ದಕ್ಕಾಗಿ ಮತ್ತು ಸಹ ಭಯೋತ್ಪಾದಕರ ವಿಚಾರಣೆಯಲ್ಲಿ ಸುಳ್ಳು ಹೇಳಿದ್ದಕ್ಕಾಗಿ ಸಂಚಿನಲ್ಲಿ ಶಿಕ್ಷೆಗೊಳಗಾದ ಏಕೈಕ ವ್ಯಕ್ತಿ ಇಂದರ್‌ಜಿತ್ ಸಿಂಗ್. ಆದರೆ ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಮಲಿಕ್ ಮತ್ತು  ಅಜೈಬ್ ಸಿಂಗ್ ಬಾಗ್ರಿ ಖುಲಾಸೆಗೊಂಡಿದ್ದರು. 2005ರಲ್ಲಿ ಮಲಿಕ್ ಮತ್ತು ಅಜೈಬ್ ಸಿಂಗ್ ಬಾಗ್ರಿ ಅವರನ್ನು ಖುಲಾಸೆಗೊಳಿಸಲಾಯಿತು.

ಸ್ವತಂತ್ರ ತಾಯ್ನಾಡಿಗಾಗಿ ಹೋರಾಡುತ್ತಿದ್ದ ಸಿಖ್ಖರ ವಿರುದ್ಧದ ದಮನದ ಸಮಯದಲ್ಲಿ ಈ ದಾಳಿ ನಡೆದಿತ್ತು. ಭಾರತೀಯ ಸೈನಿಕರು ಅಮೃತಸರದ ಗೋಲ್ಡನ್ ಟೆಂಪಲ್ ಅನ್ನು ಆಕ್ರಮಣ ಮಾಡಿದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ಈ ವೇಳೆ ಪ್ರಯತ್ನಿಸುತ್ತಿದ್ದರು ಎಂದು ವರದಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com