ಬ್ರಿಟನ್ ಪ್ರಧಾನಿ ಹುದ್ದೆಗೆ ಮತದಾನ: ಮತ್ತೆ ಅಗ್ರಸ್ಥಾನದಲ್ಲಿ ರಿಷಿ ಸುನಕ್

ಬ್ರಿಟನ್ ಪ್ರಧಾನಿಯಾಗಿ ಭಾರತ ಮೂಲರ ರಿಷಿ ಸುನಕ್ ಗದ್ದುಗೆಗೇರೋ ಕ್ಷಣಗಳು ಹತ್ತಿರವಾಗ್ತಿವೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸ್ಥಾನಕ್ಕೆ ಮಂಗಳವಾರ ನಡೆದ ಸ್ಪರ್ಧೆಯಲ್ಲಿ ಯುಕೆ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಇತ್ತೀಚಿಗೆ ನಡೆದ ಸುತ್ತಿನಲ್ಲಿ ಗೆದ್ದಿದ್ದಾರೆ.
ಪ್ರಚಾರದಲ್ಲಿ ತೊಡಗಿರುವ ರಿಷಿ ಸುನಕ್
ಪ್ರಚಾರದಲ್ಲಿ ತೊಡಗಿರುವ ರಿಷಿ ಸುನಕ್

ಲಂಡನ್: ಬ್ರಿಟನ್ ಪ್ರಧಾನಿಯಾಗಿ ಭಾರತ ಮೂಲರ ರಿಷಿ ಸುನಕ್ ಗದ್ದುಗೆಗೇರೋ ಕ್ಷಣಗಳು ಹತ್ತಿರವಾಗ್ತಿವೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸ್ಥಾನಕ್ಕೆ ಮಂಗಳವಾರ ನಡೆದ ಸ್ಪರ್ಧೆಯಲ್ಲಿ ಯುಕೆ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಇತ್ತೀಚಿಗೆ ನಡೆದ ಸುತ್ತಿನಲ್ಲಿ ಗೆದ್ದಿದ್ದಾರೆ.

ಶಾಸಕ ಕೆಮಿ ಬಡೆನೊಚ್ ಅವರು ಸ್ಪರ್ಧೆಯಿಂದ ಹೊರಗುಳಿದಿದ್ದು, ಇದೀಗ ಸ್ಪರ್ಧಿಯಲ್ಲಿ ಮೂವರು ಉಳಿದಿದ್ದಾರೆ.

ರಿಷಿ ಸುನಕ್ ನಾಲ್ಕನೇ ಸುತ್ತಿನ ಮತದಾನದಲ್ಲಿ ಅವರ ಪಕ್ಷದ ಸಹೋದ್ಯೋಗಿಗಳಿಂದ 118 ಮತಗಳನ್ನು ಪಡೆದರು. ಪಕ್ಷದ ಸಂಸದರಿಂದ  120 ಮತ ಗಳಿಸಿದ ಅಥವಾ ಕನ್ಸರ್ವೇಟಿವ್ ಪಕ್ಷದ ಸಂಸದರ ಮೂರನೇ ಒಂದು ಭಾಗದಷ್ಟು ಮತ ಪಡೆದವರು ಪ್ರಧಾನಿ ಹುದ್ದೆಗೇರಲಿದ್ದಾರೆ.  ರೇಸ್‌ನಲ್ಲಿ ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ರಿಷಿ ಸುನಕ್ ಖಚಿತಪಡಿಸಿದ್ದಾರೆ.

ರಿಷಿ ಸುನಕ್ ಸೋಮವಾರದ 115 ಮತಗಳಿಂದ  ತಮ್ಮ ಮತದ ಸಂಖ್ಯೆಯನ್ನು ಹೆಚ್ಚಿಸಿಕೊಂಡರು. ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ 92 ಮತಗಳನ್ನು ಪಡೆದರು ಮತ್ತು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 86 ಮತಗಳನ್ನು ಪಡೆದರು.

ಪ್ರಧಾನಿ ಬೋರಿಸ್ ಜಾನ್ಸನ್ ಜುಲೈ 7ರಂದು ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿದ್ದರು. ಸೆಪ್ಟೆಂಬರ್ 5ರಂದು ಹೊಸ ನಾಯಕನ ಆಯ್ಕೆಯಾಗುವವರೆಗೂ ಅವರು ಪ್ರಧಾನಿಯಾಗಿ ಮುಂದುವರಿಯುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com