ಬ್ರಿಟನ್ ಪ್ರಧಾನಿ ಚುನಾವಣೆ: ರಿಷಿ ಸುನಕ್ ಗೆ 137 ಮತಗಳ ಗೆಲುವು; ಅಂತಿಮ ಹಣಾಹಣಿಯಲ್ಲಿ ಲಿಜ್ ಟ್ರಸ್ ವಿರುದ್ಧ ಸ್ಪರ್ಧೆ!

ಬೋರಿಸ್ ಜಾನ್ಸನ್ ರ ಉತ್ತರಾಧಿಕಾರಿಯಾಗುವ ಓಟದ ಅಂತಿಮ ಹಂತದಲ್ಲಿ ರಿಷಿ ಸುನಕ್ ತಮ್ಮ ಸ್ಥಾನವನ್ನು  
ರಿಷಿ ಸುನಕ್
ರಿಷಿ ಸುನಕ್

ಲಂಡನ್: ಬೋರಿಸ್ ಜಾನ್ಸನ್ ರ ಉತ್ತರಾಧಿಕಾರಿಯಾಗುವ ಓಟದ ಅಂತಿಮ ಹಂತದಲ್ಲಿ ರಿಷಿ ಸುನಕ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಬ್ರಿಟಿಷ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವ ಇಬ್ಬರು ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿ ರಿಷಿ ಸುನಕ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರೊಂದಿಗೆ ಮುಖಾಮುಖಿಯಾಗಲಿದ್ದಾರೆ.

ಬುಧವಾರ ನಡೆದ ಅಂತಿಮ ಸುತ್ತಿನಲ್ಲಿ ಕನ್ಸರ್ವೇಟಿವ್ ಪಕ್ಷದ ಸಂಸದರು ರಿಷಿ ಸುನಕ್ ಪರವಾಗಿ ಅತ್ಯಧಿಕ 137 ಮತಗಳನ್ನು ಚಲಾಯಿಸಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿರುವ ಟ್ರಸ್ 113 ಸಂಸದರ ಬೆಂಬಲವನ್ನು ಗಳಿಸಿದರು. ಸಚಿವ ಪೆನ್ನಿ ಮೊರ್ಡಾಂಟ್ 105 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ಬಂದು ರೇಸ್‌ನಿಂದ ಹೊರಬಿದ್ದರು.

42 ವರ್ಷದ ಬ್ರಿಟಿಷ್ ಇಂಡಿಯನ್ ಮಾಜಿ ಚಾನ್ಸೆಲರ್ ರಿಷಿ ಸುನಕ್ ಇಲ್ಲಿಯವರೆಗೆ ಪ್ರತಿ ಸಮೀಕ್ಷೆಯಲ್ಲಿಯೂ ಅಗ್ರಸ್ಥಾನದಲ್ಲಿದ್ದಾರೆ. ಮಂಗಳವಾರ ನಡೆದ ಮತದಾನದಲ್ಲಿ ಅವರು 118 ಸಂಸದರ ಮತಗಳನ್ನು ಪಡೆದರು. ಇಂದು 19 ಮತಗಳನ್ನು ಪಡೆಯುವಲ್ಲಿ ಯಶ್ವಸಿಯಾಗಿದ್ದಾರೆ.

ಸೋಮವಾರ ಬಿಬಿಸಿಯಲ್ಲಿ ನೇರ ಪ್ರಸಾರದಲ್ಲಿ ಸುನಕ್ ಮತ್ತು ಟ್ರಸ್ ನಡುವೆ ಮುಖಾಮುಖಿ ಚರ್ಚೆ ನಡೆಯಲಿದೆ. ಇದಾದ ಬಳಿಕ ಅಂತಿಮ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ. ಸೆಪ್ಟೆಂಬರ್ ವೇಳೆಗೆ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com