ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಹೆಲಿಕಾಪ್ಟರ್ ಬ್ಲೇಡ್‌ ತಗುಲಿ ಬ್ರಿಟಿಷ್ ವಿದ್ಯಾರ್ಥಿ ಸಾವು!

ಸೆಲ್ಫಿ ತೆಗೆದುಕೊಳ್ಳಲು ಹೆಲಿಕಾಪ್ಟರ್ ಹಿಂದಕ್ಕೆ ಹೋಗುತ್ತಿದ್ದಾಗ ಬ್ಲೇಡ್ ತಗುಲಿ ಬ್ರಿಟಿಷ್ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ.
ಬ್ರಿಟಿಷ್ ವ್ಯಕ್ತಿ ಸಾವು
ಬ್ರಿಟಿಷ್ ವ್ಯಕ್ತಿ ಸಾವು

ಗ್ರೀಕ್: ಸೆಲ್ಫಿ ತೆಗೆದುಕೊಳ್ಳಲು ಹೆಲಿಕಾಪ್ಟರ್ ಹಿಂದಕ್ಕೆ ಹೋಗುತ್ತಿದ್ದಾಗ ಬ್ಲೇಡ್ ತಗುಲಿ ಬ್ರಿಟಿಷ್ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ.

ಮೃತನನ್ನು 22 ವರ್ಷದ ವಿದ್ಯಾರ್ಥಿ ಜಾಕ್ ಫೆಂಟನ್ ಎಂದು ಗುರುತಿಸಲಾಗಿದೆ. ಆತ ಅಥೆನ್ಸ್‌ನಲ್ಲಿ ಹೆಲಿಕಾಪ್ಟರ್‌ನಿಂದ ಇಳಿದು ಹಿಂಬದಿಗೆ ಹೋಗಿದ್ದಾಗ ತಲೆಗೆ ಬ್ಲೇಡ್‌ ಹೊಡೆದಿದೆ ಎಂದು ಡೈಲಿ ಮಿರರ್ ವರದಿ ಮಾಡಿದೆ.

ಗ್ರೀಕ್ ರಾಜಧಾನಿಯ ಸಮೀಪವಿರುವ ಸ್ಪಾಟಾದಲ್ಲಿ ಹೆಲಿಕಾಪ್ಟರ್ ಇಳಿಯುತ್ತಿದ್ದಂತೆ ಜಾಕ್ ಕೆಳಗಿಳಿದ್ದಿದ್ದನು. ರೋಟರ್ ಬ್ಲೇಡ್‌ಗಳು ಇನ್ನೂ ಸುತ್ತುತ್ತಿರುವುದನ್ನು ಗಮನಿಸದ ಆತ ಹೆಲಿಕಾಫ್ಟರ್ ಹಿಂಬದಿಗೆ ಹೋಗಿದ್ದಾಗ ಅವಘಡ ಸಂಭವಿಸಿದೆ.

ಅನೈಚ್ಛಿಕ ನರಹತ್ಯೆಯ ಆರೋಪ ಸಂಬಂಧ ರಾತ್ರೋರಾತ್ರಿ ವಿಮಾನದ ಪೈಲಟ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com