ಅಮೆರಿಕ ಅಧ್ಯಕ್ಷರ ಬೀಚ್ ಹೋಮ್ ಸಮೀಪ ನಿರ್ಬಂಧಿತ ಪ್ರದೇಶಕ್ಕೆ ಖಾಸಗಿ ವಿಮಾನ ಪ್ರವೇಶ: ಕೆಲಹೊತ್ತು ಜೊ ಬೈಡನ್ ಸ್ಥಳಾಂತರ

ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರ ಡೆಲವೇರ್ ವಿರಾಮದ ಮನೆಯ ಸಮೀಪ ನಿನ್ನೆ ಶನಿವಾರ ಸಣ್ಣ ಖಾಸಗಿ ವಿಮಾನವು ನಿರ್ಬಂಧಿತ ವಾಯುಪ್ರದೇಶವನ್ನು ತಪ್ಪಾಗಿ ಪ್ರವೇಶಿಸಿದ್ದರಿಂದ ಅಮೆರಿಕ ಅಧ್ಯಕ್ಷರು ಮತ್ತು ಮೊದಲ ಮಹಿಳೆ ಎಂದು ಕರೆಯಲ್ಪಡುವ ಅವರ ಪತ್ನಿಯನ್ನು ಕೆಲ ಕಾಲ ಸ್ಥಳಾಂತರಿಸಿದ ಘಟನೆ ನಡೆಯಿತು. 

Published: 05th June 2022 09:37 AM  |   Last Updated: 06th June 2022 01:16 PM   |  A+A-


Joe Biden

ಅಮೆರಿಕ ಅಧ್ಯಕ್ಷ ಜೊ ಬೈಡನ್

PTI

ರೆಹೋಬೋತ್ ಬೀಚ್ (ಯುನೈಟೆಡ್ ಸ್ಟೇಟ್ಸ್): ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರ ಡೆಲವೇರ್ ವಿರಾಮದ ಮನೆಯ ಸಮೀಪ ನಿನ್ನೆ ಶನಿವಾರ ಸಣ್ಣ ಖಾಸಗಿ ವಿಮಾನವು ನಿರ್ಬಂಧಿತ ವಾಯುಪ್ರದೇಶವನ್ನು ತಪ್ಪಾಗಿ ಪ್ರವೇಶಿಸಿದ್ದರಿಂದ ಅಮೆರಿಕ ಅಧ್ಯಕ್ಷರು ಮತ್ತು ಮೊದಲ ಮಹಿಳೆ ಎಂದು ಕರೆಯಲ್ಪಡುವ ಅವರ ಪತ್ನಿಯನ್ನು ಕೆಲ ಕಾಲ ಸ್ಥಳಾಂತರಿಸಿದ ಘಟನೆ ನಡೆಯಿತು. 

ಬೈಡನ್ ಅವರಿಗೆ ಅಥವಾ ಅವರ ಕುಟುಂಬಕ್ಕೆ ಯಾವುದೇ ಬೆದರಿಕೆ ಇಲ್ಲ. ಆದರೂ ಈ ಘಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಶ್ವೇತಭವನ ತಿಳಿಸಿದೆ. ಪರಿಸ್ಥಿತಿಯನ್ನು ನಿರ್ಣಯಿಸಿದ ನಂತರ, ಬೈಡನ್ ಮತ್ತು ಅವರ ಪತ್ನಿ ಜಿಲ್ ತಮ್ಮ ರೆಹೋಬೋತ್ ಬೀಚ್ ಮನೆಗೆ ಮರಳಿದರು ಎಂದು ಗುಪ್ತಸೇವಾ ಕಾರ್ಯಾಲಯ ತಿಳಿಸಿದೆ.

"ತಪ್ಪಾಗಿ ಸುರಕ್ಷಿತ ಪ್ರದೇಶವನ್ನು ಪ್ರವೇಶಿಸಿದ" ನಂತರ ನಿರ್ಬಂಧಿತ ವಾಯುಪ್ರದೇಶದಿಂದ ವಿಮಾನವನ್ನು ತಕ್ಷಣವೇ ಬೆಂಗಾವಲು ಮಾಡಲಾಯಿತು. ಪ್ರಾಥಮಿಕ ತನಿಖೆಯ ಪ್ರಕಾರ, ಸರಿಯಾದ ರೇಡಿಯೊ ಚಾನೆಲ್‌ನಲ್ಲಿಲ್ಲದ ಮತ್ತು ಪ್ರಕಟಿತ ವಿಮಾನ ಮಾರ್ಗದರ್ಶನವನ್ನು ಅನುಸರಿಸದ ಪೈಲಟ್ ನ್ನು ವಿಚಾರಿಸಲಾಗುವುದು ಎಂದು ಗುಪ್ತಚರ ಕಾರ್ಯಾಲಯ ತಿಳಿಸಿದೆ.

ವಾಷಿಂಗ್ಟನ್‌ನ ಹೊರಗೆ ಅಧ್ಯಕ್ಷೀಯ ಪ್ರವಾಸಗಳಿಗೆ ಪ್ರಮಾಣಿತ ಅಭ್ಯಾಸದಂತೆ, ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಈ ವಾರದ ಆರಂಭದಲ್ಲಿ ಬೈಡನ್ ಅವರ ಬೀಚ್ ಟೌನ್ ಭೇಟಿಯ ಮೊದಲು ವಿಮಾನ ನಿರ್ಬಂಧಗಳನ್ನು ಪ್ರಕಟಿಸಿತು. ನಿರ್ಬಂಧಗಳು 10-ಮೈಲಿ ತ್ರಿಜ್ಯದ ನೋ-ಫ್ಲೈ ವಲಯವನ್ನು ಒಳಗೊಂಡಿರುವ 30-ಮೈಲಿ ನಿರ್ಬಂಧಿತ ವಲಯವನ್ನು ಒಳಗೊಂಡಿವೆ.

ಫೆಡರಲ್ ನಿಯಮಗಳ ಪ್ರಕಾರ ಪೈಲಟ್‌ಗಳು ಟೇಕ್ ಆಫ್ ಮಾಡುವ ಮೊದಲು ತಮ್ಮ ಮಾರ್ಗದಲ್ಲಿ ವಿಮಾನ ನಿರ್ಬಂಧಗಳನ್ನು ಪರಿಶೀಲಿಸಬೇಕಾಗುತ್ತದೆ. ತಾತ್ಕಾಲಿಕವಾಗಿ ನಿರ್ಬಂಧಿತ ವಲಯಗಳ ಸುತ್ತ ವಾಯುಮಾರ್ಗ ಉಲ್ಲಂಘನೆ ಸಾಮಾನ್ಯವಾಗಿರುತ್ತದೆ.


Stay up to date on all the latest ವಿದೇಶ news
Poll
Kharge-tharoor

ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಯಾರು ಹೆಚ್ಚು ಸೂಕ್ತರು?


Result
ಮಲ್ಲಿಕಾರ್ಜುನ ಖರ್ಗೆ
ಶಶಿ ತರೂರ್

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp