ತೈವಾನ್ ಮೇಲೆ ಯುದ್ಧ ಪ್ರಾರಂಭಿಸುವುದಕ್ಕೆ ಹಿಂಜರಿಯುವುದಿಲ್ಲ: ಚೀನಾ ಎಚ್ಚರಿಕೆ
ತೈವಾನ್ ಸ್ವಾತಂತ್ರ್ಯವನ್ನು ಘೋಷಿಸಿಕೊಂಡರೆ ಚೀನಾ ಯುದ್ಧ ಘೋಷಣೆ ಮಾಡುವುದಕ್ಕೆ ಹಿಂಜರಿಯುವುದಿಲ್ಲ ಎಂದು ಚೀನಾದ ರಕ್ಷಣಾ ಸಚಿವ ಅಮೆರಿಕದ ರಕ್ಷಣಾ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ.
Published: 11th June 2022 12:52 AM | Last Updated: 05th November 2022 02:59 PM | A+A A-

ಚೀನಾ
ಸಿಂಗಪುರ: ತೈವಾನ್ ಸ್ವಾತಂತ್ರ್ಯವನ್ನು ಘೋಷಿಸಿಕೊಂಡರೆ ಚೀನಾ ಯುದ್ಧ ಘೋಷಣೆ ಮಾಡುವುದಕ್ಕೆ ಹಿಂಜರಿಯುವುದಿಲ್ಲ ಎಂದು ಚೀನಾದ ರಕ್ಷಣಾ ಸಚಿವ ಅಮೆರಿಕದ ರಕ್ಷಣಾ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ.
ದ್ವೀಪ ರಾಷ್ಟ್ರದ ವಿಚಾರವಾಗಿ ಅಮೆರಿಕ-ಚೀನಾ ಜಟಾಪಟಿಯ ಭಾಗವಾಗಿ ಈ ಹೇಳಿಕೆ ಬಂದಿದ್ದು, ಸಿಂಗಪೂರ್ ನಲ್ಲಿ ನಡೆದ ಶಾಂಗ್ರಿ-ಲಾ ಸಂವಾದ ಭದ್ರತಾ ಶೃಂಗಸಭೆಯ ಪಾರ್ಶ್ವದಲ್ಲಿ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರೊಂದಿಗೆ ಚೀನಾ ರಕ್ಷಣಾ ಸಚಿವರು ಮುಖಾಮುಖಿ ಭೇಟಿ ಮಾಡಿದ್ದರು.
ತೈವಾನ್ ವಿಷಯವಾಗಿ ಆಗಾಗ್ಗೆ ಅಮೆರಿಕ-ಚೀನಾ ನಡುವೆ ಘರ್ಷಣೆಗಳುಂಟಾಗುತ್ತಿರುತ್ತದೆ. ಈ ವೇಳೆ ಚೀನಾ ಆಕ್ರಮಣದ ಬೆದರಿಕೆಯನ್ನೂ ಹಾಕಿರುವ ಉದಾಹರಣೆಗಳು ಇವೆ. ಬೀಜಿಂಗ್ ತೈವಾನ್ ನ್ನು ತನ್ನದೇ ಭಾಗವೆಂದು ಪ್ರತಿಪಾದಿಸುತ್ತಿದ್ದು, ಅವಶ್ಯವಿದ್ದಲ್ಲಿ ಬಲಪ್ರಯೋಗಿಸಿ ತೈವಾನ್ ಮೇಲೆ ಹಿಡಿತ ಸಾಧಿಸುವ ಎಚ್ಚರಿಕೆಯನ್ನೂ ನೀಡುತ್ತಿರುತ್ತದೆ.
ಇದನ್ನೂ ಓದಿ: ಬೈಡನ್ ಹೇಳಿಕೆ: ತೈವಾನ್ ಬಳಿ ಸೇನಾ ಡ್ರಿಲ್ ನಡೆಸುವ ಮೂಲಕ ಚೀನಾ ಪ್ರತಿಕ್ರಿಯೆ
ತೈವಾನ್ ನ್ನು ಚೀನಾದಿಂದ ಬೇರ್ಪಡಿಸಲು ಯಾರಾದರೂ ಧೈರ್ಯ ಮಾಡಿದಲ್ಲಿ ಚೀನಾದ ಸೇನೆ ಯಾವುದೇ ಬೆಲೆ ತೆತ್ತಾದರೂ ಸರಿ ಯುದ್ಧ ಘೋಷಣೆ ಮಾಡುವುದಕ್ಕೆ ಹಿಂಜರಿಯುವುದಿಲ್ಲ ಎಂದು ಚೀನಾ ರಕ್ಷಣಾ ಸಚಿವರು ಆಸ್ಟಿನ್ ಗೆ ಹೇಳಿದ್ದಾರೆ.