ಕಾಲು ನಡುಕ?: ನಿಂತುಕೊಳ್ಳಲು ಹೆಣಗಾಡುತ್ತಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಹೊಸ ವಿಡಿಯೋ!

ಇತ್ತೀಚೆಗೆ ಬಿಡುಗಡೆಯಾದ ವೀಡಿಯೊದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಲುಗಾಡುತ್ತಿದ್ದು ತನ್ನ ಕಾಲುಗಳ ಮೇಲೆ ಬಲಿಷ್ಠವಾಗಿ ನಿಂತುಕೊಳ್ಳಲು ಹೆಣಗಾಡುತ್ತಿರುವುದು ಕಾಣಬಹುದಾಗಿದೆ. ಇದು ಅವರ ಆರೋಗ್ಯದ ಬಗ್ಗೆ ವಿಶ್ವಾದ್ಯಂತ ಊಹಾಪೋಹಗಳು ಮತ್ತು ಕಳವಳಗಳಿಗೆ ಕಾರಣವಾಗಿದೆ.
ಕಾಲು ನಡುಕ?: ನಿಂತುಕೊಳ್ಳಲು ಹೆಣಗಾಡುತ್ತಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಹೊಸ ವಿಡಿಯೋ!

ಮಾಸ್ಕ್: ಇತ್ತೀಚೆಗೆ ಬಿಡುಗಡೆಯಾದ ವೀಡಿಯೊದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಲುಗಾಡುತ್ತಿದ್ದು ತನ್ನ ಕಾಲುಗಳ ಮೇಲೆ ಬಲಿಷ್ಠವಾಗಿ ನಿಂತುಕೊಳ್ಳಲು ಹೆಣಗಾಡುತ್ತಿರುವುದು ಕಾಣಬಹುದಾಗಿದೆ. ಇದು ಅವರ ಆರೋಗ್ಯದ ಬಗ್ಗೆ ವಿಶ್ವಾದ್ಯಂತ ಊಹಾಪೋಹಗಳು ಮತ್ತು ಕಳವಳಗಳಿಗೆ ಕಾರಣವಾಗಿದೆ.

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಕ್ರೆಮ್ಲಿನ್‌ನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಉಪಸ್ಥಿತರಿದ್ದ ಪುಟಿನ್ ನಿಂತುಕೊಳ್ಳಲು ಹೆಣಗಾಡುತ್ತಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೋದ ಸತ್ಯಾಸತ್ಯತೆಗಳು ದೃಢಗೊಂಡಿಲ್ಲ.

ಜೂನ್ 12ರಂದು ಚಲನಚಿತ್ರ ನಿರ್ಮಾಪಕ ನಿಕಿತಾ ಮಿಖೈಲೋವ್ ಅವರಿಗೆ ರಷ್ಯಾದ ಒಕ್ಕೂಟದ ರಾಜ್ಯ ಪ್ರಶಸ್ತಿಯನ್ನು ನೀಡಿದ ನಂತರ 69 ವರ್ಷದ ರಷ್ಯಾದ ಅಧ್ಯಕ್ಷರು ಹಿಂದಕ್ಕೆ ಮತ್ತು ಮುಂದಕ್ಕೆ ಅಲುಗಾಡುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ.

ಉಕ್ರೇನ್ ಯುದ್ಧ ಪ್ರಾರಂಭದ ನಂತರ, ಪುಟಿನ್ ಅವರ ಆರೋಗ್ಯ ವಿಚಾರ ಅಂತಾರಾಷ್ಟ್ರೀಯ ಗಮನವನ್ನು ಪಡೆದ ವಿಷಯವಾಗಿದೆ. ಇತ್ತೀಚಿಗೆ, ಅಧ್ಯಕ್ಷರು ವಿದೇಶ ಪ್ರವಾಸಕ್ಕೆ ಹೋದಾಗಲೆಲ್ಲ ಅವರ ಮಲ ಮತ್ತು ಮೂತ್ರವನ್ನು ಕಾವಲುಗಾರರು ವಿಶೇಷ ಕ್ಯಾರಿಯರ್‌ನಲ್ಲಿ ತಾಯ್ನಾಡಿಗೆ ಸಾಗಿಸುವ ವಿಲಕ್ಷಣ ಅಭ್ಯಾಸ ಹೊರಜಗತ್ತಿಗೆ ಬಹಿರಂಗಗೊಂಡಿತ್ತು. ಪುಟಿನ್ ಅವರ ಆರೋಗ್ಯ ಮತ್ತು ಅವರ ಸಂಭಾವ್ಯ ಕಾಯಿಲೆಗಳ ಬಗ್ಗೆ ಹೊರಗಿನ ಪ್ರಪಂಚದಿಂದ ಮಾಹಿತಿಯನ್ನು ಮರೆಮಾಚಲು ಇದನ್ನು ಮಾಡಲಾಗಿದೆ ಎಂದು ವರದಿಯಾಗಿದೆ.

ರಷ್ಯಾದ ಗುಪ್ತಚರ ಮೂಲಗಳ ಪ್ರಕಾರ ಅಧ್ಯಕ್ಷರು ಗರಿಷ್ಠ ಮೂರು ವರ್ಷಗಳ ಕಾಲ ಬದುಕುತ್ತಾರೆ. ಆದಾಗ್ಯೂ, ರಷ್ಯಾದ ಅಧಿಕಾರಿಗಳು ವರದಿಗಳ ಪ್ರಕಾರ ಅಂತಹ ಎಲ್ಲಾ ಊಹಾಪೋಹಗಳನ್ನು ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com