ಸಂಸತ್ ನಲ್ಲಿ ಸ್ಪಷ್ಟ ಬಹುಮತ ಕಳೆದುಕೊಂಡ ಫ್ರೆಂಚ್ ಅಧ್ಯಕ್ಷ ಮ್ಯಾಕ್ರಾನ್!

ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್ ಶಾಸಕಾಂಗ ಚುನಾವಣೆಯಲ್ಲಿ ಬಹುಮತ ಕಳೆದುಕೊಂಡಿದ್ದು, ರಾಷ್ಟ್ರೀಯ ಸಂಸತ್ ನ ಮೇಲಿನ ಹಿಡಿತವನ್ನು ಕಳೆದುಕೊಂಡಿದಾರೆ. 
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್

ಪ್ಯಾರಿಸ್​: ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್  ಶಾಸಕಾಂಗ ಚುನಾವಣೆಯಲ್ಲಿ ಬಹುಮತ ಕಳೆದುಕೊಂಡಿದ್ದು, ರಾಷ್ಟ್ರೀಯ ಸಂಸತ್ ನ ಮೇಲಿನ ಹಿಡಿತವನ್ನು ಕಳೆದುಕೊಂಡಿದಾರೆ. 

ಪರಿಣಾಮ ಮ್ಯಾಕ್ರಾನ್ ಅಧ್ಯಕ್ಷರಾಗಿ ಮುಂದುವರೆಯಬೇಕಾದರೆ ಮಿತ್ರಪಕ್ಷಗಳು ಹಾಗೂ ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸುವವರೆಗೂ ಫ್ರಾನ್ಸ್ ನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದೆ. 

ಭಾನುವಾರ ನಡೆದ ಚುನಾವಣೆಯಲ್ಲಿ ಮ್ಯಾಕ್ರಾನ್ ನೇತೃತ್ವದ ಕೇಂದ್ರೀಯ ಎನ್ಸೆಂಬಲ್ ಒಕ್ಕೂಟ ಬಹುಮತ ಪಡೆಯುವ ನಿರೀಕ್ಷೆ ಇತ್ತು. ಆದರೆ ಅಂತಿಮ ಹಂತದಲ್ಲಿ ಅಗತ್ಯವಿದ್ದ ಬಹುಮತ ಪಡೆಯುವುದಕ್ಕೆ ಕೇಂದ್ರೀಯ ಎನ್ಸೆಂಬಲ್ ಒಕ್ಕೂಟಕ್ಕೆ ಸಾಧ್ಯವಾಗಿಲ್ಲ.

ಈ ಸೋಲಿನ ಮೂಲಕ ಮ್ಯಾಕ್ರಾನ್ ನೇತೃತ್ವದ ಎಡಪಂಥೀಯ ಮೈತ್ರಿಕೂಟಕ್ಕೆ ಹಿನ್ನೆಡೆ ಉಂಟಾಗಿದ್ದು, ಬಲಪಂಥೀಯ ಪಕ್ಷ ಮೇಲುಗೈ ಸಾಧಿಸಿದ್ದು, ಕನ್ಸರ್ವೇಟೀವ್ ಗಳು ಕಿಂಗ್ ಮೇಕರ್ ಗಳಾಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com